ಬ್ರೆಜಿಲ್ ಸೇನಾ ಮುಖ್ಯಸ್ಥರ ವಜಾ.

ಇತ್ತೀಚಿಗೆ ಬ್ರೆಜಿಲ್‌ನ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆದಿದ್ದ ನಾಗರಿಕರ ಭಾರೀ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಅಧ್ಯಕ್ಷ ಲೂಹಿಸ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಇದೀಗ ಲುಲಾ ಅವರು ದೇಶದ ಸೇನಾ ಮುಖ್ಯಸ್ಥ ಜನರಲ್ ಜುಲಿಯೊ ಸಿಸಾರ್ ಡೆ ಅರ್ರುಡಾ ಅವರನ್ನೇ ಸ್ಥಾನದಿಂದ ವಜಾಗೊಳಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ಲೂಲಾ ಅವರು ಅಧಿಕಾರ ವಹಿಸಿಕೊಂಡಂದಿನಿಂದ ಈಗಾಗಲೇ ಹತ್ತು ಹಲವರು ಮಿಲಿಟರಿ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಿದ್ದರು. ಇದೀಗ ಸೇನಾ ಮುಖ್ಯಸ್ಥರನ್ನೇ ಹುದ್ದೆಯಿಂದ ಪದಚ್ಯುತಗೊಳಿಸಲಾಗಿದೆ. ಇನ್ನು ಜುಲಿಯೊ ಅವರು ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಅವಧಿ ಮುಕ್ತಾಯಗೊಳ್ಳುವ ಡಿಸೆಂಬರ್ ೩೦ರಿಂದ ಮಾತ್ರ ಹುದ್ದೆಯಲ್ಲಿದ್ದರು. ಅಲ್ಲದೆ ಸಶಸ್ತ್ರ ಪಡೆಗಳ ಸದಸ್ಯರು ಪ್ರತಿಭಟನಾಕಾರರೊಂದಿಗೆ ಸೇರಿಕೊಂಡಿದ್ದಾರೆ ಎಂದು ಅಧ್ಯಕ್ಷ ಲೂಲಾ ಅವರು ಶಂಕಿಸಿದ್ದಾರೆ. ಕೆಲ ತಿಂಗಳ ಹಿಂದೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಬೊಲ್ಸಾನಾರೊ ಅವರು ಕೆಲವೇ ಪ್ರತಿಶತ ಮತಗಳ ಅಂತರದಿಂದ ಸೋಲುಂಡಿದ್ದರು. ಆದರೆ ಇದರಿಂದ ಅಕ್ರೋಶಿತ ಬೊಲ್ಸಾನಾರೊ ಅವರು ಲುಲಾ ಅವರಿಗೆ ಅಧಿಕಾರ ಹಸ್ತಾಂತರ ಮಾಡದೆ ವಿದೇಶಕ್ಕೆ ತೆರಳಿದ್ದರು. ಬಳಿಕ ಬೊಲ್ಸಾನಾರೊ ಅವರ ಬೆಂಬಲಿಗರು ರಾಜಧಾನಿ ಬ್ರೆಜಿಲಿಯಾದಲ್ಲಿ ಭಾರೀ ಪ್ರಮಾಣದ ಹಿಂಸಾಚಾರದಲ್ಲಿ ತೊಡಗಿ, ಹಲವು ಕಟ್ಟಡಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಹಿಂಸಾಚಾರದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಗಲಭೆಕೋರರು ಅಧ್ಯಕ್ಷೀಯ ಅರಮನೆ, ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ಗೆ ನುಗ್ಗಿ ವ್ಯಾಪಕ ಹಿಂಸಾಚಾರ ನಡೆಸಿದ್ದರು. ಅದೇ ದಿನ ಗಲಭೆಗೆ ಸಂಬಂಧಿಸಿದಂತೆ ೨೦೦೦ ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸದ್ಯ ೧೨೦೦ ಗಲಭೆಕೋರರು ಬಂಧನದಲ್ಲಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಸದ್ಯ ಸುಪ್ರೀಂ ಕೋರ್ಟ್ ತನಿಖೆ ನಡೆಸುತ್ತಿದ್ದು, ಮಾಜಿ ಅಧ್ಯಕ್ಷ ಬೊಲ್ಸಾನಾರೊ ಅವರ ವಿರುದ್ಧ ಕೂಡ ತನಿಖೆ ನಡೆಸಲಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿಯ ಹೋಟೆಲ್ ವೊಂದಕ್ಕೆ ವಂಚಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Sun Jan 22 , 2023
ಹೊಸದಿಲ್ಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿಯಂತೆ ಸೋಗು ಹಾಕಿದ ರಾಷ್ಟ್ರ ರಾಜಧಾನಿಯ ಹೋಟೆಲ್ ವೊಂದಕ್ಕೆ ವಂಚಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯು ದೆಹಲಿಯ ಸ್ಟಾರ್ ಹೋಟೆಲ್ ಗೆ 23 ಲಕ್ಷಕ್ಕೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಮೂಲದ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದೆ. ಈತ ನಕಲಿ ವ್ಯಾಪಾರ ಕಾರ್ಡ್ ತೋರಿಸಿ ಕಳೆದ ವರ್ಷ […]

Advertisement

Wordpress Social Share Plugin powered by Ultimatelysocial