ಸುಲಭವಾಗಿಯೇ ಮೆಟ್ರಿಕ್ ಪರೀಕ್ಷೆಯಲ್ಲಿಉತ್ತಿರ್ಣರಾದರು.

ಎಂ ಹರಿದಾಸರಾವ್ ಮಹಾನ್ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ,

ಪತ್ರಕರ್ತರಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದವರು.
ಹರಿದಾಸರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಪಳ್ಳಿ ಎಂಬಲ್ಲಿ 1919ರ ಜನವರಿ 5ರಂದು ಜನಿಸಿದರು. ಬಡತನವಾದರೂ ತಂದೆ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ನೀಡಿದರು. ಹರಿದಾಸರಾಯರಿಗೆ ಚಿಕ್ಕಂದಿನಲ್ಲೇ ಸಿಕ್ಕಿದ್ದನ್ನೆಲ್ಲ ಓದುವ ಆಸಕ್ತಿ ಪ್ರಬಲವಾಗಿತ್ತು. ಸುಲಭವಾಗಿಯೇ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ಮುಂದೆ ಕಲಿಕೆಯ ಹಂಬಲ ತೀವ್ರವಾಗಿದ್ದರೂ ಕಡುಬಡತನದಿಂದ ಅದು ಈಡೇರಲಿಲ್ಲ.
ಮಾರ್ಪಳ್ಳಿಯಿಂದ ಮಂಗಳೂರು ಸೇರಿದ ಹರಿದಾಸರಾಯರು ಮೊದಲು ಹೆಜ್ಜೆ ಇಟ್ಟಿದ್ದು ಪತ್ರಿಕಾ ಕ್ಷೇತ್ರಕ್ಕೆ. ಲೇಖನಿಯ ದುಡಿಮೆಗಾರರಾಗಿ ಅಲ್ಲಿ ಖ್ಯಾತನಾಮರಾದರು. ಸ್ವಾತಂತ್ರ್ಯ ಹೋರಾಟ ಹರಿದಾಸರ ಮನದಲ್ಲೂ ಪ್ರಭಾವ ಬೀರಿತು. ನಿಷ್ಠಾವಂತ ದೇಶಪ್ರೇಮಿಯಾಗಿ ಹುಬ್ಬಳ್ಳಿ ನೆಲದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಒಂದು ವರ್ಷ ಕಾರಾಗೃಹ ವಾಸ ಅನುಭವಿಸಿದರು. ಸೆರೆಮನೆಯಿಂದ ಹೊರಜಗತ್ತಿಗೆ ಬಂದ ಹರಿದಾಸರಿಗೆ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಹುಬ್ಬಳ್ಳಿಯಲ್ಲಿ ನೆಲೆನಿಂತ ಹರಿದಾಸರು ಪತ್ರಿಕೋದ್ಯಮ ವೃತ್ತಿಯಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದರು. ಸಂಯುಕ್ತ ಕರ್ನಾಟಕ, ನವಯುಗ, ಕರ್ಮವೀರ, ಕರ್ನಾಟಕ ಬಂಧು,ಈ ಪತ್ರಿಕೆಗಳ ಅಭಿವೃದ್ಧಿಗೆ ಅವರ ಬದುಕು ಹಾಸುಗಲ್ಲಾಯಿತು. ಅವರ ವಿಶಿಷ್ಟ ಅಧ್ಯಯನ ವಿಷಯವಾಗಿದ್ದ ಅಂತರಾಷ್ಟ್ರೀಯ ರಾಜಕಾರಣವನ್ನು ಕುರಿತು ಅವರು ಬರೆದ ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವು.
ಹರಿದಾಸರಾಯರು 1947ರಲ್ಲಿ ತಮ್ಮ ಸಂಪಾದಕತ್ವದಲ್ಲಿ ಸರ್ವೋದಯ ಸಾಹಿತ್ಯ ಮಾಲೆಯನ್ನು ಪ್ರಾರಂಭಿಸಿದರು.
ಹರಿದಾಸರಾಯರು ರಾಜಕೀಯ ಲೇಖನ ಪ್ರಬಂಧ ಜೀವನಚರಿತ್ರೆಗಳನ್ನು ಬರೆದಷ್ಟೇ ಸಾಮರ್ಥ್ಯದಿಂದ ಕಥೆ ಕಾದಂಬರಿಗಳನ್ನು ರಚಿಸಿದರು. ಸಾಹಿತ್ಯದ ಜೋಳಿಗೆ ಹಿಡಿದು ಊರೂರು ಸಂಚಾರ ಮಾಡಿದರು. ಕನ್ನಡ ಜನಪದ ಸಾಹಿತ್ಯ ಸಂಸ್ಕೃತಿಯ ಆಗುಹೋಗುಗಳ ಕುರಿತು ಭಾಷಣಗಳನ್ನು ಮಾಡಿ, ಗ್ರಂಥಮಾಲೆಗೆ ಚಂದಾದಾರರನ್ನು ಪೋಷಕರನ್ನು ಆಶ್ರಯದಾತರನ್ನು ಕೂಡಿಸಿದರು. ತಮ್ಮ ಸಂಸಾರವನ್ನು ಪೊರೆಯುವುದರೊಂದಿಗೆ ಗ್ರಂಥಮಾಲೆಯನ್ನು ಕೊರಳಿಗೆ ಹಾಕಿಕೊಂಡು ಎಲ್ಲ ಕಷ್ಟ-ನಷ್ಟಗಳನ್ನು ಎದುರಿಸಿ ಸರ್ವೋದಯ ಗ್ರಂಥಮಾಲೆಯನ್ನು ಮುಂದುವರಿಸಿದರು. ಇದರ ಜೊತೆಗೆ ಮತ್ತೊಮ್ಮೆ ಅವರು ಪತ್ರಿಕೋದ್ಯಮವನ್ನು ಆಶ್ರಯಿಸಿದರು.
ಮಾರ್ಪಳ್ಳಿ ಹರಿದಾಸ ರಾಯರ ಸಾಹಿತ್ಯಸೃಷ್ಟಿ ವ್ಯಾಪಕವಾದದ್ದು. ಮೊದಲ ಕೃತಿ 1941ರಲ್ಲಿ ಪ್ರಕಟವಾದ ದ್ವಿತೀಯ ಮಹಾಯುದ್ಧ. ಅವರ ಉಕ್ಕಿನ ಮನುಷ್ಯ ಅಥವಾ ಸ್ಟಾಲಿನ್ನನ ಜೀವನ ಕೃತಿಗೆ ಮದ್ರಾಸು ಸಾಹಿತ್ಯ ಸಂಘದಿಂದ ಪಾರಿತೋಷಕ ದೊರೆಯಿತು. ಎಚ್ಚೆತ್ತ ಆಗ್ನೇಯ ಏಷ್ಯಾ, ಮರುಭೂಮಿಯ ಅರಬರು, ಇಂದಿನ ಫಿಲಿಫೈನ್ಸ್ ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ.
ಹರಿದಾಸರಾಯರುಸಮರ್ಥರಾದ ಭಾಷಾಂತರಕಾರರೂ ಆಗಿದ್ದರು.
ಕ್ರಿಸ್ಮಸ್ ಕಾಣಿಕೆ, ಸಣ್ಣ ಕಥೆಗಳ ಸಂಕಲನ, ರಷ್ಯನ್ ಕಥೆಗಳ ಸಂಗ್ರಹ, ಹುಚ್ಚರ ಮನೆ ಮುಂತಾದವು ಅವರ ಅನುವಾದಗಳಲ್ಲಿ ಸೇರಿವೆ.
ಹರಿದಾಸರಾಯರ ಭಾರತೀಯ ಕಥಾ ಸಂಗ್ರಹಗಳಲ್ಲಿ ಸ್ತ್ರೀ ನೀತಿ ಕಥೆಗಳು, ವಿಕ್ರಮಾದಿತ್ಯನ ಕಥೆಗಳು, ಸಿರಿಗನ್ನಡ ಮಹಾಭಾರತ ಇವೆ. ಅವರು ಅರೇಬಿಯನ್ ನೈಟ್ಸ್ ಸಾರಸಂಗ್ರಹವನ್ನು ಮೂಡಿಸಿದ್ದರು.
ಹಸಿದ ಹಂಬಲು ಜರ್ಮನಿ ಕೃತಿಯೊಂದರ ಆಧಾರದ ಮೇಲೆ ಬರೆದ ಕಾದಂಬರಿ.
ಬದುಕಿನ ದಾರಿ, ಧಾರವಾಡದ ಹುಡುಗಿ, ಕೈಹಿಡಿದ ಕಾವೇರಿ ಮತ್ತು ಬಾಳಿನ ಗಿಡ ಹರಿದಾಸರಾಯರ ಸ್ವತಂತ್ರ ಕಾದಂಬರಿಗಳು. ‘ಬಾಳಿನಗಿಡ’ ಹರಿದಾಸರ ಕಾದಂಬರಿಗಳಲ್ಲೆಲ್ಲ ಹೆಸರುವಾಸಿ.
ಬಾಳಿನ ಗಿಡ ಕಾದಂಬರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಮೆಚ್ಚುಗೆಯ ಪಾರಿತೋಷಕ ಸಂದಿತ್ತು.
ನಿರಂತರ ಕಷ್ಟಗಳ ನಡುವೆ ಹಣೋರಾಡಿ ಬದುಕಿದ ಹರಿದಾಸರಾಯರು 1954ರ ಜುಲೈ 29ರಂದು, ಕಾಯಿಲೆ ಹಿಡಿದು ಮಲಗಿದ್ದ ಶ್ರೀಮತಿಗೆ ಔಷಧಿ ತರಲು ಸೈಕಲೇರಿ ಬರುತ್ತಿದ್ದಾಗ ದೊಡ್ಡದೊಂದು ಮೋಟಾರು ಡಿಕ್ಕಿಹೊಡೆದು ಈ ಲೋಕವನ್ನು ತ್ಯಜಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪರಮಹಂಸ ಯೋಗಾನಂದರು 'ಕ್ರಿಯಾಯೋಗ'ವೆಂಬ ಪ್ರಸಿದ್ಧ ಯೋಗವನ್ನು ಪ್ರಸ್ತುತಪಡಿಸಿ ಲೋಕದೆಲ್ಲೆಡೆ ಪ್ರಸಿದ್ಧರಾದವರು.

Thu Jan 5 , 2023
1979ರ ಮಧ್ಯದಲ್ಲಿ ಬೆಂಗಳೂರಿಗೆ ಕೆಲಸ ಹುಡುಕಿ ಬಂದ ನನಗೆ ಮೊದಲು ಸಿಕ್ಕ ಒಂದು ನೂರು ರೂಪಾಯಿ ಕೆಲಸ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿದ್ದ ಒಂದು ಆಡಿಟರ್ ಕಚೇರಿಯಲ್ಲಿ. ಅದಾದ ನಂತರ ಕೂಡ ನನಗೆ ಸಿಕ್ಕ ಕೆಲಸ ಎಂ.ಜಿ. ರಸ್ತೆಯ ಆಸು ಪಾಸಿನಲ್ಲೇ ಇತ್ತು. ಅಲ್ಲಿನ ಹಲವು ಪುಸ್ತಕ ಅಂಗಡಿಗಳ ಮುಂದೆ ಅಲೆದಾಗಲೆಲ್ಲ ಒಂದು ಪುಸ್ತಕ ಪದೇ ಪದೇ ಕಣ್ಣಿಗೆ ಬೀಳುತ್ತಿತ್ತು. ಬ್ಲೂಮೂನ್ ಚಿತ್ರಮಂದಿರದ ಆವರಣದಲ್ಲಿ ಈ ಪುಸ್ತಕ ಆ ಗಾಜಿನ ಬೀರುವಲ್ಲಿ […]

Advertisement

Wordpress Social Share Plugin powered by Ultimatelysocial