ಹಲ್ಲೆನಡೆಸಿ ಜೀವಬೆದರಿಕೆ ಹಾಕಿದ 7 ಜನರಿಗೆ ಜೈಲುಶಿಕ್ಷೆ

ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಘತ್ತರಗಾ ಗ್ರಾಮದಲ್ಲಿ ಹಲ್ಲೆ ನಡೆಸಿ ಜೀವಭಯ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಏಳು ಜನರಿಗೆ ಕಲಬುರಗಿಯ 2 ನೇ ಅಪರ ಜೆಎಂಎಫ್‍ಸಿ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ,ತಲಾ 3 ಸಾವಿರ ರೂ ದಂಡ ವಿಧಿಸಿದೆ.
2014 ರ ಡಿಸೆಂಬರ್ 24 ರಂದು ಘತ್ತರಗಾ ಗ್ರಾಮದ ಸುಭಾಷ ಕುಂಬಾರ ಎಂಬುವವರು ಅದೇ ಗ್ರಾಮದ ಕಾಳಮ್ಮ ಎಂಬುವವರಿಗೆ ನಮ್ಮ ಕೌಟುಂಬಿಕ ವಿಷಯವನ್ನು ಜನರ ಮುಂದೆ ಏಕೆ ಹೇಳುತ್ತಿರುವೆ  ಎಂದು ಆಕ್ಷೇಪಿಸಿದ್ದರು.ಇದರಿಂದ ಸಿಟ್ಟಿಗೆದ್ದ ಕಾಳಮ್ಮನ ಕಡೆಯವರು ಗುಂಪು ಕಟ್ಟಿಕೊಂಡು ಬಂದು ಸುಭಾಷ ಮತ್ತಿತರರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು.
ಅಫಜಲಪುರ ಠಾಣೆಯ ಪೊಲೀಸ ಠಾಣೆಯಲ್ಲಿ ದೂರ ದಾಖಲಾಗಿ, ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 2 ನೇ ಅಪರ ಜೆಎಂಎಫ್‍ಸಿ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶರಾದ ಬಸವರಾಜ ನೇಸರಗಿ ಅವರು ಅಪರಾಧಿಗಳಿಗೆ ಶಿಕ್ಷೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಸಂತೋಷಕುಮಾರ ಲೊಖಂಡೆ ಅವರು ವಾದ ಮಂಡಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಆರ್. ಅಶೋಕ ಅವರಿಂದ ಅಧಿಕಾರಿಗಳ ಸಭೆ, ಪೂರ್ವಸಿದ್ಧತೆ ಪರಿಶೀಲನೆ

Sat Jan 14 , 2023
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಂದಾಯ ಸಚಿವ ಆರ್.ಅಶೋಕ ಅವರು ಕಲಬುರಗಿ ನಗರದ ಐವಾನ್-ಎ-ಶಾಹಿತಿ ಅತಿಥಿಗೃಹದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆ ಪರಿಶೀಲನಾ ಸಭೆ ನಡೆಸಿದರು. ಪ್ರಧಾನಮಂತ್ರಿಗಳು ಅಂದು ಮಳಖೇಡ್‍ದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಇತಿಹಾಸದಲ್ಲಿಯೇ ಏಕಕಾಲದಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ, ಯಾದಗಿರಿ ಹಾಗೂ ವಿಜಯಪುರ […]

Advertisement

Wordpress Social Share Plugin powered by Ultimatelysocial