ದೇಹದಲ್ಲಿ ಜಿಂಕ್‌ (ಸತು) ಹೆಚ್ಚಾದರೆ ಕಂಡು ಬರುವ ಸಮಸ್ಯೆಗಳಿವು

ತುವಿಂಶ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಆದರೆ ಸತುವಿನಂಶ ಕಡಿಮೆಯಾದರೆ ಹೇಗೆ ಆರೋಗ್ಯಕ್ಕೆ ತೊಂದರೆಯಾಗುವುದೋ ಅದೇ ರೀತಿ ಸತುವಿನಂಶ ಅಧಿಕವಾದರೆ ಕೂಡ ತೊಂದರೆಯಾಗುವುದು. ಕೆಲವರು ಸತುವಿನಂಶ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುತ್ತಾರೆ.ಸತುವಿನಂಶದ ಸಪ್ಲಿಮೆಂಟ್ಸ್‌ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮೊಡವೆ ಸಮಸ್ಯೆ ನಿವಾರಿಸಲು, ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ.ಆದರೆ ಸತುವಿಂಶ ಸಪ್ಲಿಮೆಂಟ್ಸ್ ವೈದ್ಯರ ಸಲಹೆಯಿಲ್ಲದೆ ಪಡೆಯಬಾರದು.ಇನ್ನು ನೀವು ಅಧಿಕ ಸತುವಿನಂಶ ಆಹಾರ ತೆಗೆದುಕೊಂಡಾಗ ಅಥವಾ ಸತುವಿನಂಶ ಸಪ್ಲಿಮೆಂಟ್ಸ್ ಡೋಸೇಜ್ ಅಧಿಕವಾದರೆ ಕೆಲವು ತೊಂದರೆಗಳು ಉಂಟಾಗುವುದು. ನೀವು ಸತುವಿನ ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಿದ್ದರೆ ಈ ಲಕ್ಷಣಗಳು ಕಂಡು ಬಂದರೆ ಸತುವಿನಂಶ ಹೆಚ್ಚಾಗಿರಬಹುದು ಪರೀಕ್ಷಿಸಿ ನೋಡಿದೇಹದಲ್ಲಿ ಸತುವಿನಂಶ ಹೆಚ್ಚಾದರೆ ವಾಂತಿ, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರುವುದು. ಅಲ್ಲದೆ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು.ಕೊಲೆಸ್ಟ್ರಾಲ್ ಎಂದರೆ ಕೆಟ್ಟ ಕೊಲೆಸ್ಟ್ರಾಲ್‌ ಮಾತ್ರವಲ್ಲ ಒಳ್ಳೆಯ ಕೊಲೆಸ್ಟ್ರಾಲ್‌ ಇರುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಿ ಒಳ್ಳೆಯ ಕೊಲೆಸ್ಟ್ರಾಲ್‌ ಕಡಿಮೆಯಾದರೆ ಕೊಲೆಸ್ಟ್ರಾಲ್‌ ಸಮಸ್ಯೆ ಕಂಡು ಬರುತ್ತದೆ. ಸತುವಿನಂಶ ಹೆಚ್ಚಾದರೆ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆಯಾಗುವುದುಕೊಲೆಸ್ಟ್ರಾಲ್ ಹೆಚ್ಚಾದರೆ ಪ್ರತ್ಯೇಕ ಲಕ್ಷಣಗಳೇನೂ ಕಂಡು ಬರುವುದಿಲ್ಲ. ನೀವು ರಕ್ತ ಪರೀಕ್ಷೆ ಮಾಡಿದಾಗ ಮಾತ್ರ ತಿಳಿಯುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷದ ಹೊತ್ತಲ್ಲೇ ಅಡುಗೆ ಎಣ್ಣೆ ಗ್ರಾಹಕರಿಗೆ ಗುಡ್ ನ್ಯೂಸ್..!!

Sat Dec 31 , 2022
ಅಡುಗೆ ಎಣ್ಣೆ ಆಮದು ಸುಂಕ ವಿನಾಯಿತಿಯನ್ನು 2024ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಸೋಯಾ ಎಣ್ಣೆ, ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಸುಂಕಕ್ಕೆ 2023ರ ಮಾರ್ಚ್ 31ರವರೆಗೆ ವಿನಾಯಿತಿ ನೀಡಲಾಗಿತ್ತು. ಅದನ್ನು ವಿಸ್ತರಿಸಲಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ದಾಖಲೆಯ ಪ್ರಮಾಣಕ್ಕೆ ಏರಿಕೆ ಕಂಡಿದ್ದ ಕಾರಣ 2021 ರ ಮಧ್ಯ ಭಾಗದಿಂದ ಆಮದು ಸುಂಕ ಕಡಿಮೆ ಮಾಡಲಾಗಿತ್ತು. ಈ ವಿನಾಯಿತಿ 2023 ರ ಮಾರ್ಚ್ 31ಕ್ಕೆ ಕೊನೆಯಾಗಲಿದೆ. ಹೀಗಾಗಿ, […]

Advertisement

Wordpress Social Share Plugin powered by Ultimatelysocial