ಬಾಕ್ಸಾಫೀಸ್ ಉಳಿಸಿಕೊಳ್ಳಲು ಬಾಲಿವುಡ್ ಹರಸಾಹಸ:

ಸೌತ್ ಸಿನಿಮಾರಂಗದಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳು ಬರಲು ಶುರುವಾದ ಕಾರಣಕ್ಕೆ ತಲೆನೋವು ಶುರುವಾಗಿದೆ. ನಾರ್ಥ್‌ನಲ್ಲೂ ಕೂಡ ಕನ್ನಡ ಸೇರಿದಂತೆ ಸೌತ್ ಸಿನಿಮಾಗಳ ಹಾವಳಿ ಹೆಚ್ಚಾಗುತ್ತಿದೆ. ಹಾಗಾಗಿ ಅಲ್ಲಿ ರಿಲೀಸ್ ಆಗುವಂತಹ ಹಿಂದಿ ಸಿನಿಮಾಗಳ ಮೇಲೆ ಹೊಡೆತ ಬಿದ್ದಿದೆ.

RRR, ‘ಕೆಜಿಎಫ್ 2’, ‘ಪುಷ್ಪ’ ಅಂತಹ ಸಿನಿಮಾಗಳು ಬಂದಮೇಲೆ ಉತ್ತರ ಭಾರತದಲ್ಲಿ ಸೌತ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದ್ದು, ಹಿಂದಿ ಸಿನಿಮಾಗಳನ್ನು ನೋಡುವವರು ಕಡಿಮೆಯಾಗಿದ್ದಾರೆ. ಇದು ಬಾಕ್ಸಾಫೀಸ್ ರಿಪೋರ್ಟ್‌ನಲ್ಲಿ ಗೊತ್ತಾಗುತ್ತೆ.

ಸದ್ಯ ಮತ್ತೆ ಬಾಕ್ಸಾಫೀಸ್‌ ಅನ್ನು ಪಡೆದುಕೊಳ್ಳುವಂತಹ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಬಾಲಿವುಡ್ ಸ್ಟಾರ್ ನಟರು ಸಾಲು ಸಾಲು ಸಿನಿಮಾಗಳನ್ನು ರಿಲೀಸ್ ಮಾಡುವ ಯೋಚನೆಯಲ್ಲಿದ್ದಾರೆ. ಇದರಿಂದ ಬಾಲಿವುಡ್ ಬಿಗ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಯಾವೆಲ್ಲ ಚಿತ್ರಗಳು ಯಾವ ರೀತಿಯ ನಿರೀಕ್ಷೆಯೊಂದಿಗೆ ಬರುತ್ತಿವೆ ಅನ್ನೋದನ್ನ ಮುಂದೆ ಓದಿ….

ರಣ್‌ಬೀರ್ ಕಪೂರ್ 2 ಚಿತ್ರಗಳಿ ರಿಲೀಸ್‌ಗೆ ರೆಡಿ!
ರಣ್‌ಬೀರ್ ಕಪೂರ್ ಸದ್ಯ ಅನೇಕ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಅವರ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು ಇವೆ. ಆಲಿಯಾ ಭಟ್ ಜೊತೆಗೆ ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸೆಪ್ಟೆಂಬರ್ 9ಕ್ಕೆ ಈ ಚಿತ್ರ ತೆರೆಗೆ ಬರಲಿದೆ. ಇನ್ನು ಈ ಸಿನಿಮಾಗೂ ಮೊದಲು ಜುಲೈ 11ಕ್ಕೆ ‘ಶಂಶೇರಾ’ ಸಿನಿಮಾ ರಿಲೀಸ್ ಆಗುತ್ತಿದೆ. ನಂತರ ‘ಅನಿಮಲ್’ ಸಿನಿಮಾ ತೆರೆಗೆ ಬರಲಿದೆ.

ಕಾರ್ತಿಕ್ ಆರ್ಯನ್ ಸಿನಿಮಾಗಳ ಸಕ್ಸಸ್!

ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲೈಯಾ 2’ ರಿಲೀಸ್ ಬಳಿಕ ಸ್ವಲ್ಪಮಟ್ಟಿಗೆ ಬಾಲಿವುಡ್ ಬಾಕ್ಸಾಫೀಸ್ ಟ್ರ್ಯಾಕ್‌ಗೆ ಬಂದಿದೆ. ಸದ್ಯ ಕಾರ್ತಿಕ್ ಆರ್ಯನ್‌ಗೆ ದೊಡ್ಡ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಕಾರ್ತಿಕ್ ಅಭಿನಯದ ‘ಶೆಹಜಾದಾ’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಬಳಿಕ ‘ಕ್ಯಾಪ್ಟನ್ ಇಂಡಿಯಾ, ‘ಸತ್ಯನಾರಾಯಣ್ ಕಿ ಕಥಾ’ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶಾರುಖ್ ಖಾನ್ ಸಿನಿಮಾಗಳು ಪ್ರಕಟ!

‘ಝೀರೊ’ ಚಿತ್ರದ ನಂತರ ವಿಶ್ರಾಂತಿ ತೆಗೆದುಕೊಂಡಿದ್ದ ಶಾರುಖ್ ಖಾನ್ ಮೂರು ದೊಡ್ಡ ಚಿತ್ರಗಳನ್ನು ಮಾಡುತ್ತಿದ್ದಾರೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಎನ್ನುವ 3 ಸಿನಿಮಾಗಳಲ್ಲಿ ನಟ ಶಾರುಖ್ ಖಾನ್ ನಟಿಸಲಿದ್ದಾರೆ. ‘ಪಠಾಣ್’ ಚಿತ್ರದ ರಿಲೀಸ್ ದಿನಾಂಕ ಕೂಡ ಈಗಾಲೇ ಪ್ರಕಟವಾಗಿದ್ದು, ‘ಜವಾನ್’ ಚಿತ್ರೀಕರಣ ಶುರುವಾಗಿದೆ. ಇದರ ಜೊತೆಗೆ ‘ಡಾನ್ 3’ ಬಗ್ಗೆಯೂ ಸುದ್ದಿ ಹಬ್ಬಿದೆ.

ಅಕ್ಷಯ್ ಕುಮಾರ್ ಸಿನಿಮಾಗಳು!

ಅಕ್ಷಯ್ ಕಮಾರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿದೆ. ಆದರೂ ನಟ ಅಕ್ಷಯ್ ಕುಮಾರ್ ಸಾಲು, ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಅಕ್ಷಯ್ ಕುಮಾರ್ ‘ರಾಮ್ ಸೇತು’, ರಕ್ಷಾ ಬಂಧನ, ‘ಬಡೇ ಮಿಯಾ ಚೋಟೆ ಮಿಯಾ’, ‘ಸೆಲ್ಫಿ’, ‘ಗೂರ್ಖಾ’ ಸೇರಿದಂತೆ ಹಲವು ಚಿತ್ರಗಳು ಅಕ್ಷಯ್ ಕುಮಾರ್ ಕೈಯಲ್ಲಿ ಇವೆ. ಇನ್ನು ಇತ್ತೀಚೆಗೆ ‘ಹೇರಾ ಫೆರಿ 3’ ಸಿನಿಮಾ ಕೂಡ ಅನೌನ್ಸ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಚ್ಚ ಸುದೀಪ್‌ಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟ ಕಪಿಲ್‌ ದೇವ್‌!

Mon Jun 27 , 2022
ಸ್ಯಾಂಡಲ್ ವುಡ್​ನ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ ಸದ್ಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯ ಸನಿಹದಲ್ಲಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಸುದೀಪ್​ ಗೆ ಕ್ರಿಕೆಟ್​ ಮೇಲೆ ಹೆಚ್ಚಿನ ಆಸಕ್ತಿಯಿದೆ. ಅಲ್ಲದೇ ಆವರು ಐಪಿಎಲ್​ ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರವರೆಗೂ ಸುದೀಪ್‌ಗೆ ಫ್ಯಾನ್ಸ್‌ ಬಳಗವಿದೆ. ಒಬ್ಬರಲ್ಲಾ ಇನ್ನೊಬ್ಬರು ಆಗಾಗ್ಗೆ ತಮ್ಮ ನೆಚ್ಚಿನ ಗೆಳೆಯನಿಗೆ […]

Advertisement

Wordpress Social Share Plugin powered by Ultimatelysocial