ಎಷ್ಟೋ ಜನ ಸ್ಟಾರ್ ಮಕ್ಳು ಮನೆಗೆ ಹೋಗ್‌ಬಿಟ್ಟಿದ್ದಾರೆ!

ನೆಪೋಟಿಸಂ.. ಈ ಹಿಂದಿನಿಂದಲೂ ಸ್ಟಾರ್‌ಗಳ ಮಕ್ಕಳು ಚಿತ್ರರಂಗ ಪ್ರವೇಶಿಸಿದಾಗ ಟ್ರೋಲ್ ಮಾಡಲು ಬಳಸುತ್ತಾ ಬಂದಿರುವ ಒಂದು ಪದವಾಗಿದೆ. ಪ್ರತಿಭೆ ಇಲ್ಲದಿದ್ದರೂ ಅಪ್ಪ ಸ್ಟಾರ್, ಅಮ್ಮ ಸ್ಟಾರ್ ಎಂದು ಮಕ್ಕಳಿಗೆ ಅವಕಾಶ ಕೊಡುತ್ತಾರೆ ಎನ್ನುವ ಅಂಶವನ್ನೇ ನೆಪೋಟಿಸಂ ಎಂದು ಟ್ರೋಲ್ ಮಾಡುವ ನೆಟ್ಟಿಗರ ಗುಂಪು ಆರೋಪಿಸುತ್ತಾ ಬಂದಿದೆ.ಹೀಗೆ ಕೆಲವರು ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದನ್ನು ನೆಪೋಟಿಸಂ ಎಂದು ವಿರೋಧಿಸಿದರೆ ಇನ್ನೂ ಕೆಲವರು ಇದರಲ್ಲಿ ತಪ್ಪೇನಿದೆ ಟ್ಯಾಲೆಂಟ್ ಇದ್ದವರು ಬೆಳೆಯುತ್ತಾರೆ, ಇಲ್ಲದಿದ್ದವರು ತೆರೆಮರೆಗೆ ಸರಿಯುತ್ತಾರೆ ಬಿಡಿ ಎಂದು ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದಕ್ಕೆ ಬೆಂಬಲವನ್ನೂ ಸಹ ನೀಡಿದ್ದರು. ಇನ್ನು ಈ ನೆಪೋಟಿಸಂ ಚರ್ಚೆ ಕಳೆದ ವರ್ಷ ತುಸು ಹೆಚ್ಚಾಗಿಯೇ ನಡೆಯಿತು ಎನ್ನಬಹುದು. ಒಂದೆಡೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಅವರನ್ನು ಹೊಂಬಾಳೆ ಫಿಲ್ಮ್ಸ್ ಲಾಂಚ್ ಮಾಡಲು ಮುಂದಾದರೆ, ಮತ್ತೊಂದೆಡೆ ಗುರು ಶಿಷ್ಯರು ಚಿತ್ರದಲ್ಲಿ ಹಲವಾರು ಕಲಾವಿದರ ಮಕ್ಕಳಿಗೆ ಅವಕಾಶ ನೀಡಲಾಗಿತ್ತು.ಅಷ್ಟೇ ಅಲ್ಲದೇ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಮತ್ತು ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಸಹ ಚಿತ್ರಗಳ ಅವಕಾಶ ಗಿಟ್ಟಿಸಿಕೊಂಡರು. ಹೀಗೆ ಸಾಲು ಸಾಲು ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಟ್ಟದ್ದರಿಂದ ಈ ಕುರಿತಾಗಿ ಟ್ರೋಲ್ ಕೂಡ ಹೆಚ್ಚಾಗಿತ್ತು. ಅದರಲ್ಲೂ ಗುರು ಶಿಷ್ಯರು ಚಿತ್ರವೊಂದರಲ್ಲಿಯೇ ಹೆಚ್ಚು ಸ್ಟಾರ್ ಮಕ್ಕಳಿಗೆ ಅವಕಾಶ ನೀಡಲಾಗಿದೆ ಎಂದು ಹಲವರು ಇದೊಂದು ನೆಪೋಟಿಸಂ ಚಿತ್ರ ಎಂದೇ ಕಾಲೆಳೆದಿದ್ದರು. ಈ ಕುರಿತಾಗಿ ಇದೀಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ‘ಎಂಜಿ ವರ್ಸ್’ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.ನೆಪೋಟಿಸಂ ಎನ್ನುವವರ ವಿರುದ್ಧ ರಕ್ಷಕ್ ಕಿಡಿ ಗುರು ಶಿಷ್ಯರು ಚಿತ್ರದಲ್ಲಿ ತಮಗೆ ಅವಕಾಶ ಲಭಿಸಿದ ಸಂದರ್ಭದ ಕುರಿತು ಮಾತನಾಡಿದ ರಕ್ಷಕ್ ಆ ಸಮಯದಲ್ಲಿ ಕೆಲವರು ಸ್ಟಾರ್ ಮಕ್ಕಳು, ನೆಪೋಟಿಸಂ ಎಂದು ಕಾಲೆಳೆದದ್ದರ ವಿರುದ್ಧ ಕಿಡಿಕಾರಿದರು. ಗುರು ಶಿಷ್ಯರು ಚಿತ್ರದಲ್ಲಿ ಬರೀ ಸ್ಟಾರ್ ಮಕ್ಕಳೇ ಇದ್ದಾರೆ ಎಂದು ಕೆಲವರು ಕಿಡಿಕಾರಿದ್ದರು, ಆದರೆ ಆ ಚಿತ್ರದಲ್ಲಿ ಚಿತ್ರರಂಗದ ಹಿನ್ನೆಲೆ ಇಲ್ಲದ ಆರು ಹುಡುಗರಿಗೆ ಅವಕಾಶ ಕೊಟ್ಟಿರಲಿಲ್ವಾ ಎಂದು ಪ್ರಶ್ನೆ ಹಾಕಿದರು. ಹಾಗೂ ಆ ಮಕ್ಕಳು ಎಷ್ಟು ಕಷ್ಟ ಪಟ್ಟಿದ್ದರೋ ಅಷ್ಟೇ ಕಷ್ಟವನ್ನು ನಾವೂ ಸಹ ಪಟ್ಟಿದ್ದೇವೆ ಎಂದೂ ಸಹ ರಕ್ಷಕ್ ನೆಪೋಟಿಸಂ ವಿರುದ್ಧ ಬೇಸರ ಹೊರಹಾಕಿದರು.ಎಷ್ಟೋ ಜನ ಸ್ಟಾರ್ ಮಕ್ಕಳು ಮನೆಗೆ ಹೋಗಿದ್ದಾರೆ ಇನ್ನೂ ಮುಂದುವರೆದು ಮಾತನಾಡಿದ ಸ್ಟಾರ್ ಮಕ್ಕಳು ಎಂದು ಆರೋಪಿಸುತ್ತಾರೆ, ಎಲ್ಲೂ ಇಲ್ಲಿ ನಟನೆಯನ್ನೇ ಮಾಡುವುದು, ಇಂಡಸ್ಟ್ರಿ ಹುಟ್ಟಿದಾಗಿನಿಂದಲೂ ಬಂದಿರುವವರೆಲ್ಲರೂ ಸ್ಟಾರ್ ಮಕ್ಕಳಾ ಹಾಗಾದ್ರೆ, ಎಷ್ಟೋ ಜನ ಸ್ಟಾರ್ ಮಕ್ಕಳು ಅವಕಾಶ ಸಿಗದೇ ಮನೆಗೆ ಹೋಗಿದ್ದಾರೆ, ಚಿತ್ರರಂಗಕ್ಕೆ ಬಂದಮೇಲೆ ಮಾತ್ರ ಸ್ಟಾರ್ ಆಗಲು ಸಾಧ್ಯ, ಸ್ಟಾರ್ ಮಗ ಎಂಬ ಕಾರಣಕ್ಕೆ ಹೆಚ್ಚು ಅವಕಾಶ ಸಿಗಲ್ಲ ಎಂದು ರಕ್ಷಕ್ ತಿಳಿಸಿದರು.ಶ್ರಮ ಪಟ್ರೆ ಮಾತ್ರ ಗೆಲುವುಇನ್ನು ಜನ ಈವತ್ತಿನ ದಿನ ತುಂಬಾ ಬುದ್ಥಿವಂತರಿದ್ದಾರೆ ಎಂದ ರಕ್ಷಕ್ ಯಾವ ಕಲಾವಿದ ಏತಕ್ಕಾಗಿ ಬಂದಿದ್ದಾನೆ, ಇವನಲ್ಲಿ ನಿಜವಾಗಿಯೂ ಟ್ಯಾಲೆಂಟ್ ಇದೆಯಾ ಎಂಬುದನ್ನು ನೋಡ್ತಾರೆ, ನಾನು ಬುಲೆಟ್ ಪ್ರಕಾಶ್ ಮಗ ಎಂಬ ಕಾರಣಕ್ಕೆ ನನ್ನನ್ನು ಬೆಳೆಸಿಬಿಡುವುದಿಲ್ಲ, ಶ್ರಮದಿಂದ ಕೆಲಸ ಮಾಡಿದ್ರೆ ಮಾತ್ರ ಇಲ್ಲಿ ಬೆಲೆ, ಗೆಲುವು ಎಂದು ಹೇಳಿಕೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ

Tue Jan 10 , 2023
ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದು ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಡೆದಿದೆ ತಾಲ್ಲೂಕಿನ ಮಂಚಿನೀಳ್ಳಕೋಟೆ ಗ್ರಾಮದಲ್ಲಿ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರ ತಮ್ಮಿರೆಡ್ಡಿಗಾರಪಲ್ಲಿ ಶಂಕರ (40) ವರ್ಷ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದು ಇನ್ನೊರ್ವ ಚಿಕ್ಕರಂಗೇಪಲ್ಲಿ ಗ್ರಾಮದ ವ್ಯಕ್ತಿ ವ್ಯಕ್ತಿ ನಾರಾಯಣಸ್ವಾಮಿ ಗಂಭೀರವಾಗಿ […]

Advertisement

Wordpress Social Share Plugin powered by Ultimatelysocial