ಮಳೆ ಹಾನಿ ಪ್ರದೇಶಗಳಿಗೆ 3ನೇ ದಿನ ಸಿಎಂ ಭೇಟಿ;

 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ವರುಣನ ಆರ್ಭಟಕ್ಕೆ ತತ್ತರಿಸಿದ್ದು, ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೂರನೇ ದಿನವೂ ಭೇಟಿ ನೀಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.

ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಪೈ ಬಡಾವಣೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಳೆ ಹಾನಿ ಪ್ರದೇಶಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ವಲಯವಾರು ಸಚಿವರನ್ನು ನೇಮಕ ಮಾಡಲಾಗುವುದು ಎಂದರು.

ಒಂದೊಂದು ಜೋನ್ ಟಾಸ್ಕ್ ಫೋರ್ಸ್ ಮಾಡಲಾಗುವುದು. 8 ಜೋನ್ ಗಳಲ್ಲಿ 8 ಸಚಿವರ ನೇಮಕ ಮಾಡುತ್ತೇವೆ. ಸಚಿವರು, ಶಾಸಕರು, ಸಂಸದರು, ಇಂಜಿನಿಯರ್ ಗಳು ಟಾಸ್ಕ್ ಫೋರ್ಸ್ ನಲ್ಲಿರಲಿದ್ದಾರೆ. ಕೆಲವೆಡೆ ರಾಜಕಾಲುವೆಗಳ ಮೇಲೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂತಹ ಮನೆ ತೆರವುಗೊಳಿಸಿ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುವುದು. 900 ಮೀಟರ್ ಅಡಿಷನಲ್ ಡ್ರೈನೇಜ್ ಕೂಡ ಮಾಡುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆ: ಮಳೆಯ ಅಬ್ಬರ, ಇಂದು ಶಾಲೆಗೆ ರಜೆ!

Fri May 20 , 2022
  ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಶುರುವಾದ ಮಳೆಯ ಆರ್ಭಟವು ಗುರುವಾರವೂ ಮುಂದುವರಿಯಿತು. ಮಳೆಯು ತೀವ್ರಗೊಂಡಿರುವುದರಿಂದ ಶುಕ್ರವಾರ 1ರಿಂದ 10ನೇ ತರಗತಿವರೆಗೆ ಶಾಲೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ. ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 4.8 ಸೆಂ.ಮೀ ಮಳೆಯಾಗಿದೆ. ಬುಧವಾರ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯು ಗುರುವಾರವೂ ಬಿಡುವಿಲ್ಲದೇ ಸುರಿಯಿತು. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಂದಾಜು ₹ 1.83 ಕೋಟಿ ನಷ್ಟ ಸಂಭವಿಸಿದೆ. 44 ಮನೆಗಳಿಗೆ ಭಾಗಶಃ […]

Advertisement

Wordpress Social Share Plugin powered by Ultimatelysocial