ಬ್ರಾಹ್ಮಣರ ವಿರುದ್ಧ ಹೆಚ್.ಡಿ.ಕೆ ಹೇಳಿಕೆ.

ಮಂಡ್ಯದ ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹೆಚ್ ಡಿಕೆ ಬ್ರಾಹ್ಮಣರ ಬಗ್ಗೆ ನೀಡಿದಂತ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, ಈ ರೀತಿ ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಕೇಳಿಬರ್ತಿದೆ. ಪ್ರತಿ ಚುನಾವಣೆ ಬಂದಾಗ ಇದು ಹೆಚ್ಚು ಕಾಣತ್ತೆ. ಬ್ರಾಹ್ಮಣರು ಯಾರು ಧ್ವನಿ ಎತ್ತಿ ಮಾತನಾಡುವವರು ಇಲ್ಲಾ, ಸಂಖ್ಯಾ ಬಲ ಇಲ್ಲಾ, ಅಲ್ಪ ಸಂಖ್ಯಾತರು ಆದ್ರಿಂದ ಏನು ಮಾತನಾಡಿದ್ರು ನಡೆಯತ್ತೆ ಎಂದು ಮಾತನಾಡ್ತಾರೆ. ರಾಜ್ಯದಲ್ಲಿ ಬ್ರಾಹ್ಮಣ MLA ಎಷ್ಟು ಜನ ಇದ್ದಾರೆ.? ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ..? ಎಂದು ಕಿಡಿಕಾರಿದರು.ಇನ್ನೂ ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು. ಒಂದು ವೇಳೆ ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದು..? ಅವರು ಭಾರತದ ಪ್ರಜೆಗಳಲ್ಲವೆ.? ಎಂದರು.ಬ್ರಾಹ್ಮಣರಿಂದಲೆ ಗಾಂಧಿ ಹತ್ಯೆ ಎಂಬ ವಿಚಾರವಾಗಿ ಮಾತನಾಡಿದಂತ ಅವರು, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಸಾಮೂಹಿಕರಣ ಮಾಡ್ತಿಲ್ಲ..? ಬ್ರಾಹ್ಮಣ ಸಮಾಜವನ್ನ ದೂರು ಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆಯೋದಾದ್ರೆ. ಅನ್ಯಾಯವಾದಗ ಒಂದು ಧರ್ಮದ ವಿರುದ್ದ ಮತ್ತೊಂದು ಧರ್ಮ ಪುಟಿದೇಳಬೇಕು. ಪ್ರಜಾಪ್ರಭುತ್ವ ಸಮಾಜದಲ್ಲಿ ಈ ರೀತಿ ಒಂದು ಧರ್ಮವನ್ನ ದೂಷಿಸುವುದು ಸರಿಯಲ್ಲ. ಯಾವ ಧರ್ಮದವ್ರಿಗೂ ಅನ್ಯಾಯ ಆಗಬಾರದು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಗರಿಷ್ಠ ಬಡ್ಡಿದರ.

Mon Feb 6 , 2023
ಅಂಚೆ ಕಚೇರಿ ಯೋಜನೆಗಳು ಸರ್ಕಾರದ ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿವೆ. ಅಂಚೆ ಕಚೇರಿಯು ಒಟ್ಟು ಮೊತ್ತದ ಹೂಡಿಕೆ ಯೋಜನೆಗಳನ್ನು ಕೂಡ ಹೊಸದಾಗಿ ನೀಡುತ್ತಿದೆ. ಇದರ ಅಡಿಯಲ್ಲಿ ಒಬ್ಬ ವ್ಯಕ್ತಿ ಒಂದೇ ಬಾರಿಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ ಮಾಸಿಕ ಗರಿಷ್ಠ ಆದಾಯವನ್ನು ಗಳಿಸಬಹುದಾಗಿದೆ.ಜನವರಿ-ಮಾರ್ಚ್ 2023 ರ ಬಡ್ಡಿ ದರವನ್ನು ಶೇಕಡಾ 7.1 ಕ್ಕೆ ನಿಗದಿಪಡಿಸಲಾಗಿದೆ. ಪೋಸ್ಟ್ ಆಫೀಸ್ ಲಾಕ್-ಇನ್ ಅವಧಿಯು 5 ವರ್ಷಗಳು. ನೀವು ಹೂಡಿಕೆ ಮಾಡಿದ ಮೊತ್ತವನ್ನು ಮುಕ್ತಾಯದ […]

Advertisement

Wordpress Social Share Plugin powered by Ultimatelysocial