ಮಾನಸಿಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ?

ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಅಡೆತಡೆಗಳು, ಕಷ್ಟ ಕಾರ್ಪಣ್ಯಗಳು, ಏಳುಬೀಳುಗಳು, ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ. ಆದರೆ ಯಾವುದೇ ಸಮಸ್ಯೆಗಳಾಗಲೀ ನಾವು ಮಾನಸಿಕವಾಗಿ ಹೇಗೆ ಅದನ್ನು ಸ್ವೀಕರಿಸುತ್ತೇವೆ ಎಂಬುದರ ಆಧಾರದಲ್ಲಿ ಅದು ಸಣ್ಣದೋ, ದೊಡ್ಡದೋ ನಿರ್ಧರಿತವಾಗುತ್ತದೆ.

ನಾವು ತೊಂದರೆಗಳನ್ನು ಎದುರಿಸಿದಾಗ, ನಮ್ಮ ಮಾನಸಿಕ ಸ್ಥಿತಿ ಅಂದರೆ ನಾವು ಹೇಗೆ ಯೋಚಿಸುತ್ತೇವೆ ಎಂಬುದು ಮುಖ್ಯ. ನೀವು ಯೋಚಿಸಿದಷ್ಟೂ ನಿಮ್ಮ ವೃತ್ತಿಜೀವನವನ್ನು ನೀವು ಅಚ್ಚುಕಟ್ಟಾಗಿ ಯೋಜಿಸಬಹುದು ಮತ್ತು ನೀವು ಎಲ್ಲಾ ತೊಂದರೆ, ಸಮಸ್ಯೆ ಎದುರಿಸಲು ಸಿದ್ದರಾಗಬಹುದು. ಆದರೆ ಅನಿರೀಕ್ಷಿತವಾಗಿ ಎದುರಾಗುವ ಅಡೆತಡೆಗಳು ಬಂದರೆ ಏನು ಮಾಡಬೇಕು? ಜೀವನವು ನಿಮ್ಮ ಮೇಲೆ ಎಸೆದ ಸವಾಲುಗಳು ಏನೇ ಇರಲಿ, ಅವುಗಳನ್ನು ಎದುರಿಸಲು ನೀವು ನಿಮ್ಮ ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.

ಮಾನಸಿಕ ಶಕ್ತಿ ಎಂದರೇನು?

ಯಾರಾದರೂ ತೊಂದರೆಗಳನ್ನು ಎದುರಿಸಿದರೆ, ಆ ಸಮಯದಲ್ಲಿ ಒಂದು ನಿರ್ದಿಷ್ಟ ಮನೋಭಾವವನ್ನು ಪ್ರದರ್ಶಿಸುವುದು. ಈ ಮನೋಭಾವವನ್ನು ಮಾನಸಿಕ ಶಕ್ತಿ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ನಕಾರಾತ್ಮಕ ತಿರುವುಗಳು, ಬಿಕ್ಕಟ್ಟು, ಆರ್ಥಿಕ ಸಮಸ್ಯೆಗಳು, ಅನಿರೀಕ್ಷಿತ ಘಟನೆಗಳು, ಆರೋಗ್ಯ ಸಮಸ್ಯೆಗಳು ಪ್ರತಿಯೊಬ್ಬ ಮನುಷ್ಯನು ಎದುರಿಸುವ ಕೆಲವು ಅನಿವಾರ್ಯ ಅಡೆತಡೆಗಳು. ಆದಾಗ್ಯೂ ಇವುಗಳ ಪ್ರಭಾವದ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಮಾನಸಿಕ ಶಕ್ತಿಯು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ತಜ್ಞರು ತೋರಿಸಿದ ಕೆಲವು ಸಲಹೆಗಳನ್ನು ನೋಡೋಣ ಬನ್ನಿ.

ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ

ಬಹುಕಾರ್ಯಕವನ್ನು ಗೌರವದ ಸಂಕೇತ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಇದರಿಂದ ತೊಂದರೆಗಳೇ ಹೆಚ್ಚು. ಯಾವುದೇ ಕಾರ್ಯವನ್ನೂ ಪರಿಪೂರ್ಣವಾಗಿ ಮಾಡಲಾಗುವುದಿಲ್ಲ. ಇದು ಹೆಚ್ಚು ಆರೋಗ್ಯಕರವಲ್ಲ. ಮಾನಸಿಕವಾಗಿ ಒತ್ತಡ ಉಂಟಾಗುತ್ತದೆ. ಒಂದು ಬಾರಿ ಒಂದೇ ಕೆಲಸವನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ನೀವು ನಡೆದಾಡುತ್ತಿರುವಾಗ, ನಿಮ್ಮ ಸುತ್ತಮುತ್ತಲಿನ ವಾತಾವರಣ, ಪ್ರಾಣಿ ಪಕ್ಷಿಗಳ ನೋಡಿ. ನೀವು ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಅವರು ಹೇಳುವುದನ್ನು ನಿಜವಾಗಿಯೂ ಆಲಿಸಿ. ನಿಮ್ಮ ಫೋನ್ ಅನ್ನು ಆಫ್ ಮಾಡಿ ಮತ್ತು ನಿಮ್ಮ ತಲೆಯಲ್ಲಿ ಓಡುತ್ತಿರುವ ಆಲೋಚನೆಗಳನ್ನು ಮರೆಯಲು ಪ್ರಯತ್ನಿಸಿ.

ಸಕರಾತ್ಮಕ ಗುಣ ಬೆಳೆಸಿಕೊಳ್ಳಿ

ಮಾನಸಿಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಕಟ್ಟುನಿಟ್ಟಾದ ನಿಯಮವನ್ನು ಅನುಸರಿಸಬೇಕು. ಮುಖ್ಯವಾಗಿ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದು, ಸಕಾರಾತ್ಮಕ ಆಲೋಚನೆಗಳಿಗೆ ಹೆಚ್ಚುವರಿ ಜಾಗವನ್ನು ಸೃಷ್ಟಿಸುವುದು, ನಕರಾತ್ಮಕ ಆಲೋಚನೆಗಳಿಗೆ ಅವಕಾಶ ನೀಡಬೇಡಿ. ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡಲು ವೇಳಾಪಟ್ಟಿ ಮಾಡಿಕೊಳ್ಳಿ. ಮಾನಸಿಕ ಶಕ್ತಿಯನ್ನು ಬೆಳೆಸಲು ಯಾವಾಗಲೂ ನಿಮ್ಮ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಬಳಸಿ.

ಕಷ್ಟಗಳಿಗೆ ಪರಿಹಾರ ಹುಡುಕಿ

ಮೆದುಳಿನ ಶಕ್ತಿಯನ್ನು ವ್ಯರ್ಥ ಮಾಡುವ ಮೂಲಕ ನೀವು ನಿಯಂತ್ರಿಸಲು ಸಾಧ್ಯವಾಗದ ವಿಷಯಗಳ ಬಗ್ಗೆ ಮಾತನಾಡುವುದರಿಂದ ಮಾನಸಿಕ ಶಕ್ತಿಯು ತ್ವರಿತವಾಗಿ ಬರಿದಾಗುತ್ತದೆ. ನೀವು ಪರಿಹರಿಸಲಾಗದ ನಕಾರಾತ್ಮಕ ಸಮಸ್ಯೆಗಳ ಬಗ್ಗೆ ನೀವು ಹೆಚ್ಚು ಯೋಚಿಸಿದರೆ ಮನಸ್ಸು ಗೊಂದಲದ ಗೂಡಾಗುತ್ತದೆ. ಸೃಜನಶೀಲ ಚಟುವಟಿಕೆಗಳ ಕಡೆ ಗಮನ ಕೊಡಿ . ಕಷ್ಟ ಬಂದರೆ ಅದರ ಬಗ್ಗೆ ಚಿಂತಿಸಬೇಡಿ.ಅದಕ್ಕೆ ಪರಿಹಾರವನ್ನು ಹುಡುಕಿ. ಉದಾಹರಣೆಗೆ ಚಂಡಮಾರುತ ಅಪ್ಪಳಿಸಿದಾಗ, ಅದರ ಬಗ್ಗೆ ಹೆಚ್ಚು ಚಿಂತಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀವು ಆ ಘಟನೆಯನ್ನು ಎದುರಿಸಲು ಸಿದ್ಧರಾಗಿರಬೇಕು.

ಮಾನಸಿಕ ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸುವುದು

ನಿಮ್ಮ ಮಾನಸಿಕ ಶಕ್ತಿಯನ್ನು ಉತ್ಪಾದಕ ಕೆಲಸಗಳಿಗೆ ಮಾತ್ರ ಬಳಸಿ. ಉದಾಹರಣೆಗೆ ನೀವು ಶಾಲಾ ದಿನಗಳಲ್ಲಿ ನಿಮಗೆ ಆಸಕ್ತಿಯಿರುವ ಹವ್ಯಾಸವನ್ನು ಹೊಂದಿದ್ದೀರಿ ಅಥವಾ ನೀವು ಹಲವು ದಿನಗಳ ಹಿಂದೆ ಮರೆತುಹೋದ ಹವ್ಯಾಸಗಳನ್ನು ಅಭ್ಯಾಸ ಮಾಡಲು ಪ್ರಯತ್ನಿಸಬೇಕು. ನೀವು ಮಾನಸಿಕವಾಗಿ ಬಲಹೀನರಾದಾಗ, ನೀವು ಅದನ್ನು ಉತ್ಸಾಹದ ಕಡೆಗೆ ಬದಲಾಯಿಸಲು ಪ್ರಯತ್ನಿಸಬೇಕು. ನೀವು ಎಷ್ಟೇ ಒತ್ತಡದಲ್ಲಿದ್ದರೂ ಮೆಚ್ಚಿನ ಹವ್ಯಾಸಗಳು ನಿಮ್ಮ ಮನಸ್ಸನ್ನು ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸುತ್ತದೆ. ಏಕೆಂದರೆ ಇದು ನೀವು ಇಷ್ಟಪಡುವ ವಿಷಯವಾಗಿರುತ್ತದೆ. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಹತ್ತು ನಿಮಿಷವೂ ಏಕಾಗ್ರತೆಯಿಂದ ಓದಲಾಗದಿದ್ದರೂ ಅವನ ನೆಚ್ಚಿನ ನಾಯಕನ ಸಿನಿಮಾವನ್ನು ಎರಡು ಗಂಟೆ ಏಕಾಗ್ರತೆಯಿಂದ ನೋಡಬಲ್ಲ, ಅಥವಾ ಅವನಿಗೆ ಡ್ರಾಯಿಂಗ್ ಇಷ್ಟವಾಗಿದ್ದರೆ ಅದನ್ನು ಸಮಯದ ಅರಿವಿಲ್ಲದೆ ಮಾಡಬಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರ ಸಾವು

Wed Feb 2 , 2022
ಹುಣಸೂರು : ಹುಣಸೂರು ತಾಲೂಕಿನ ಮೈಸೂರು- ಹಾಸನ ಹೆದ್ದಾರಿಯ ಹೊಸರಾಮನಹಳ್ಳಿ ಬಳಿ ಕಾರು ಮತ್ತು ಟ್ರಕ್ ನಡುವೆ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಹುಣಸೂರು ತಾಲೂಕಿನ ಮೈಸೂರು- ಹಾಸನ ಹೆದ್ದಾರಿಯ ಹೊಸರಾಮನಹಳ್ಳಿ ಬಳಿ ಅವಘಡ ನಡೆಡಿದ್ದು, ವಿದ್ಯಾರ್ಥಿ ಗಳಾದ ಮೌಳೇಶ್ವರ ರೆಡ್ಡಿ ಹಾಗೂ ತೇಜಸ್ ಮೃತ ದುರ್ದೈವಿಗಳು . ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿಗಳು ಎಂದು […]

Advertisement

Wordpress Social Share Plugin powered by Ultimatelysocial