ಭ್ರಷ್ಟಾಚಾರ ಆರೋಪ: ತನ್ನ ನಿಶ್ಚಿತ ವರನನ್ನು ಬಂಧಿಸಿದ್ದ ಅಸ್ಸಾಂನ ಲೇಡಿ ಸಿಂಘಮ್ ಅರೆಸ್ಟ್

ಗುವಾಹಟಿ (ಅಸ್ಸಾಂ): ಕಳೆದ ತಿಂಗಳು ವಂಚನೆ ಆರೋಪದ ಮೇಲೆ ತನ್ನ ನಿಶ್ಚಿತ ವರನನ್ನು ಬಂಧಿಸಿ ಖ್ಯಾತಿ ಪಡೆದಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಭ್ರಷ್ಟಾಚಾರ ಆರೋಪದಲ್ಲಿ ಶನಿವಾರ ಬಂಧಿಸಲ್ಪಟ್ಟಿದ್ದಾರೆ.ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿರುವ ರಭಾ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಸತತ ಎರಡು ದಿನಗಳ ವಿಚಾರಣೆಯ ನಂತರ ಬಂಧಿಸಲಾಗಿದೆ.ಮಜುಲಿ ಜಿಲ್ಲೆಯ ನ್ಯಾಯಾಲಯವು ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಭಾ ಇಬ್ಬರು ಗುತ್ತಿಗೆದಾರರು ಹಾಗೂ ತಮ್ಮ ಮಾಜಿ ಗೆಳೆಯ ರಾಣಾ ಪೊಗಾಗ್ ಅವರೊಂದಿಗೆ ಹಣಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಒಎನ್‌ಜಿಸಿಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ನೀಡುವುದಾಗಿ ಭರವಸೆ ನೀಡಿ ಕೆಲವರಿಗೆ ವಂಚಿಸಿದ್ದಾರೆ ಎಂದು ತನ್ನ ನಿಶ್ಚಿತ ವರ ಪೊಗಾಗ್ ವಿರುದ್ಧ ರಭಾ ಎಫ್‌ಐಆರ್ ದಾಖಲಿಸಿ, ಬಂಧಿಸಿದ್ದರು. ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2022ರ ನವೆಂಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ, ಇನ್ನೂ ಪೊಗಾಗ್ ಜೈಲಿನಲ್ಲೇ ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ದೀಪ ಕದ್ದು ದನದ ಕೊಂಬು ಹಾಕಿದ ಕಿಡಿಗೇಡಿಗಳು ಪಾಲ್ಸದಿಂದ ಗೋಕಾಕಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ  ಘಟನೆ

Sun Jun 5 , 2022
ರಸ್ತೆ ಬದಿ ಹಾಕಿದ್ದ ವಿದ್ಯುತ್ ದೀಪ ಕಿತ್ತುಕೊಂಡು ಸತ್ತ ದನದ ಕೊಂಬು ಹಾಕಿರುವ ಘಟನೆ ಗೋಕಾಕ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಗೋಕಾಕ ಪಾಲ್ಸದಿಂದ ಗೋಕಾಕಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿರುವ  ಪಕ್ಕದಲ್ಲಿ ಕೆಲವೆ ದಿನಗಳ ಹಿಂದೆ ಅಳವಡಿಸಿದ್ದ ವಿದ್ಯುತ್ ದ್ವೀಪಗಳನ್ನು ಕಿಡಿಗೇಡಿಗಳು ಕಳವು ಮಾಡಿ, ಆ ಜಾಗದಲ್ಲಿ ಸತ್ತ ದನದ ಕೊಂಬಿನ ಮುಖ ಹಾಕಿ ವಿಕೃತಿ ಮೆರೆದ ಘಟನೆ ಬೆಳಕಿಗೆ ಬಂದಿದೆ.ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಇಲ್ಲಿ […]

Advertisement

Wordpress Social Share Plugin powered by Ultimatelysocial