BREAKING : ತ್ರಿಪುರಾ ಉಪಚುನಾವಣೆಯಲ್ಲಿ ‘ಬಿಜೆಪಿ’ಗೆ ಭರ್ಜರಿ ಗೆಲುವು, ಯುಪಿಯ ಘೋಸಿಯಲ್ಲೂ ಅರಳಿದ ಕಮಲ

ವದೆಹಲಿ : ತ್ರಿಪುರಾದ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಜಯಭೇರಿ ಬಾರಿಸಿದೆ. ಈ ತಿಂಗಳ 5ರಂದು ನಡೆದ ಬಕ್ಸಾನಗರ ಮತ್ತು ಧನ್‌ಪುರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

 

ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಯನ್ನ ಎದುರಿಸುವ ಗುರಿ ಹೊಂದಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ.

ತ್ರಿಪುರದ ಸೆಪಾಹಿಜಾಲಾ ಜಿಲ್ಲೆಯ ಧನಪುರ ಮತ್ತು ಬಾಕ್ಸಾನಗರ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ದಾಖಲಿಸಿದೆ. ಶೇ.66ರಷ್ಟು ಅಲ್ಪಸಂಖ್ಯಾತ ಮತದಾರರಿರುವ ಬಕ್ಸಾನಗರದಲ್ಲಿ ಬಿಜೆಪಿ ಅಭ್ಯರ್ಥಿ ತಫಜಲ್ ಹುಸೇನ್ 30,237 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು 34,146 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಸಿಪಿಐ(ಎಂ) ನ ಮಿಜಾನ್ ಹುಸೇನ್ 3,909 ಮತಗಳನ್ನ ಪಡೆದರು. ಅಲ್ಲದೆ, ಬುಡಕಟ್ಟು ಜನಾಂಗದವರ ಸಂಖ್ಯೆ ಗಣನೀಯವಾಗಿರುವ ಧನಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿಂದು ದೇಬನಾಥ್ 18,871 ಮತಗಳ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದಾರೆ. ಅವರು 30,017 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಸಿಪಿಐ(ಎಂ) ನ ಕೌಶಿಕ್ ಚಂದಾ 11,146 ಮತಗಳನ್ನು ಪಡೆದರು.

Please follow and like us:

tmadmin

Leave a Reply

Your email address will not be published. Required fields are marked *

Next Post

G20 Summit 2023: ನಾಳೆಯಿಂದ 2 ದಿನ ದೆಹಲಿಯಲ್ಲಿ ಜಿ-20 ಶೃಂಗಸಭೆ: ಹೀಗಿದೆ ಹಾಜರಾಗುವ ಗಣ್ಯರ ಸಂಪೂರ್ಣ ಪಟ್ಟಿ

Fri Sep 8 , 2023
ನವದೆಹಲಿ: ನಾಳೆಯಿಂದ ನವದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ವಿಶ್ವದ ಕೆಲವು ಪ್ರಮುಖ ಮತ್ತು ಶಕ್ತಿಶಾಲಿ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಹಾಗಾದ್ರೇ ಯಾರೆಲ್ಲ ಭಾಗವಹಿಸ್ತಾರೆ ಅಂತ ಸಂಪೂರ್ಣ ಪಟ್ಟಿಗಾಗಿ ಮುಂದೆ ಓದಿ. ಈ ವರ್ಷದ ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ, ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಇತರ ರಾಜ್ಯ ನಾಯಕರು ಭೌಗೋಳಿಕ ರಾಜಕೀಯ ಕಾಳಜಿಗಳು, ಆರ್ಥಿಕ ಕುಸಿತಗಳು ಮತ್ತು ಹೆಚ್ಚುತ್ತಿರುವ ಆಹಾರ ಮತ್ತು […]

Advertisement

Wordpress Social Share Plugin powered by Ultimatelysocial