ತೀವ್ರ ಕುತೂಹಲ ಕೆರಳಿಸಿರುವ 2023-24 ಸಾಲಿನ ಬಜೆಟ್ ಕುರಿತಂತೆ ಇಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ.

ವದೆಹಲಿ,ಜ.30-ತೀವ್ರ ಕುತೂಹಲ ಕೆರಳಿಸಿರುವ 2023-24 ಸಾಲಿನ ಬಜೆಟ್ ಕುರಿತಂತೆ ಇಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಬಜೆಟ್ ಅಧಿವೇಶನ ಸರಾಗವಾಗಿ ಸಾಗಲು ಎಲ್ಲಾ ಪಕ್ಷಗಳೂ ಸಹಕಾರ ಕೊಡಬೇಕೆಂದು ಸರ್ಕಾರ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಈ ಸಭೆಯಲ್ಲಿ ವಿಪಕ್ಷಗಳು ತಮ್ಮ ಅನಿಸಿಕೆ ತೋರ್ಪಡಿಸಲಿದ್ದು, ಅಧಿವೇಶನದಲ್ಲಿ ತಾವು ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ಸರ್ವಪಕ್ಷ ಸಭೆಯ ಬಳಿಕ ಆಡಳಿತಾರೂಢ ಎನ ಡಿಎ ಮೈತ್ರಿಕೂಟದ ನಾಯಕರು ಕೂಡ ಸಭೆ ಸೇರಿ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲಿದ್ದಾರೆ. ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು , ಇದು ಈ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿರುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ನಿರೀಕ್ಷೆಗಳಿವೆ.

ಜಾಗತಿಕ ಆರ್ಥಿಕ ಹಿಂಜರಿತ ಎದುರಾಗುತ್ತಿರುವುದರಿಂದ ಆ ನಿಟ್ಟಿನಲ್ಲಿ ಸರ್ಕಾರ ಸುಧಾರಣಾ ಕ್ರಮಗಳತ್ತ ಗಮನ ನೀಡುವ ಜೊತೆಗೆ ಅಥವಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಮಡನೆಯಾಗಲಿದೆ ಎಂದು ಹೇಳಲಾಗ್ತಿದೆ.

ವಿಶೇಷ ಎಂದರೆ ಹೊಸದಾಗಿ ನಿರ್ಮಿಸಿರುವ ಸಂಸದೀಯ ಭವನದಲ್ಲಿ. ಬಜೆಟ್ ಅಧಿವೇಶನ ನಾಳೆ ಆರಂಭವಾಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತïನ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಾದ ಬಳಿಕ ಆರ್ಥಿಕ ಸಮೀಕ್ಷೆಯನ್ನು ಸಂಸತïನಲ್ಲಿ ಮಂಡನೆ ಮಾಡಲಾಗುತ್ತದೆ.

ಫೆ.1 ರಂದು ಬಜೆಟ್ ಮಂಡನೆಯಾದ ಬಳಿಕವೂ ಅಧಿವೇಶ ಮುಂದುವರಿದು ಉಭಯ ಸದನಗಳಲ್ಲಿ ಕಲಾಪ ಫೆಬ್ರುವರಿ 13ರವರೆಗೂ ನಡೆಯಲಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕೆರೆಗಳಿಗೆ ನೀರು,ಲಿಂಬಾವಳಿ ಚಾಲನೆ.

Mon Jan 30 , 2023
ಮಹದೇವಪುರ ಕ್ಷೇತ್ರದ ೧೮ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ಮಹತ್ವ ಪೂರ್ಣ ಯೋಜನೆಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು. ಕ್ಷೇತ್ರದ ಗ್ರಾಮಾಂತರ ಪ್ರದೇಶದ ಚೀಮಸಂದ್ರ, ಮಂಡೂರು. ನಿಂಬೆಕಾಯಿಪುರ, ಕಿತ್ತಗನೂರು,ಕಾಟಂನಲ್ಲೂರು, ಕನ್ನಮಂಗಲ, ಕಣ್ಣೂರು, ಯರಪ್ಪನಹಳ್ಳಿ, ಜ್ಯೋತಿಪುರ ಕೆರೆ ಸೇರಿದಂತೆ ಬಿದರಹಳ್ಳಿ ಹೋಬಳಿಯ ೧೮ ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಶುದ್ದಿಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದರು. […]

Advertisement

Wordpress Social Share Plugin powered by Ultimatelysocial