ಕೆರೆಗಳಿಗೆ ನೀರು,ಲಿಂಬಾವಳಿ ಚಾಲನೆ.

ಮಹದೇವಪುರ ಕ್ಷೇತ್ರದ ೧೮ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ಮಹತ್ವ ಪೂರ್ಣ ಯೋಜನೆಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು. ಕ್ಷೇತ್ರದ ಗ್ರಾಮಾಂತರ ಪ್ರದೇಶದ ಚೀಮಸಂದ್ರ, ಮಂಡೂರು. ನಿಂಬೆಕಾಯಿಪುರ, ಕಿತ್ತಗನೂರು,ಕಾಟಂನಲ್ಲೂರು, ಕನ್ನಮಂಗಲ, ಕಣ್ಣೂರು, ಯರಪ್ಪನಹಳ್ಳಿ, ಜ್ಯೋತಿಪುರ ಕೆರೆ ಸೇರಿದಂತೆ ಬಿದರಹಳ್ಳಿ ಹೋಬಳಿಯ ೧೮ ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಶುದ್ದಿಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದರು.
ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟವು ಕಡಿಮೆಯಾಗಿ ಹನಿಹನಿ ನೀರಿಗೂ ಆಹಾಕಾರವಿದೆ.೧೦೦೦ ಕ್ಕೂ ಹೆಚ್ಚು ಅಡಿ ಕೊರೆದರು ನೀರು ಸಿಗುತ್ತಿಲ್ಲ. ಪ್ರತಿ ವರ್ಷ ಕುಡಿಯುವ ನೀರಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚಮಾಡಲಾಗುತ್ತಿದೆ.
ಸದಾಕಾಲವೂ ಕೆರೆಗಳು ನೀರಿನಿಂದ ಕೂಡಿದರೆ ಅಂತರ್ಜಲ ಮಟ್ಟವನ್ನು ಸುದಾರಿಸ ಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇ ಒ ಮಂಜುನಾಥ್, ಕ್ಷೇತ್ರದ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ನಟರಾಜ್, ಬಿದರಹಳ್ಳಿ ಗ್ರಾ.ಪಂ ರಾಜೇಶ್,
ಭೂ ನ್ಯಾಯಮಂಡಳಿ ಸದಸ್ಯ ಮಧುಕುಮಾರ್, , ಕಣ್ಣೂರು ಗ್ರಾ.ಪಂ ಉಪಾಧ್ಯಕ್ಷ ಅಶೋಕ್, ಮುಖಂಡರಾದ ಸಂಪಂಗಿ, ನಾಗರಾಜ್, ವಾಸುದೇವ ಮತ್ತಿತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನವರಿ 30: ಹಂಪಿ ಉತ್ಸವದ ಬೃಹತ್‌ ವೇದಿಕೆಯಲ್ಲಿ ಕಾರ್ಯಕ್ರಮದ ವೇಳೆ ಬಹುಭಾಷಾ ಗಾಯಕ ಕೈಲಾಶ್ ಖೇರ್.

Mon Jan 30 , 2023
ವಿಜಯನಗರ, ಜನವರಿ 30: ಹಂಪಿ ಉತ್ಸವದ ಬೃಹತ್‌ ವೇದಿಕೆಯಲ್ಲಿ ಕಾರ್ಯಕ್ರಮದ ವೇಳೆ ಬಹುಭಾಷಾ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆದ ಇಬ್ಬರು ಕಿಡಿಗೇಡಿಗಳನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂಪಿ ಉತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಭಾನುವಾರ ತಡರಾತ್ರಿ ಗಾಯಕ ವಿಜಯ್‌ ಪ್ರಕಾಶ್‌ ಹಾಗೂ ಬಹುಭಾಷಾ ಗಾಯಕ ಕೈಲಾಶ್ ಖೇರ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ 1:30ರ ಗಂಟೆ ಸುಮಾರಿಗೆ ಗಾಯಕ ಕೈಲಾಶ್ ಖೇರ್ ಅವರು ಹಂಪಿ […]

Advertisement

Wordpress Social Share Plugin powered by Ultimatelysocial