ಬುದ್ದಿವಂತಿಕೆಯಲ್ಲಿ ಕಡಿಮೆಯೇನಿಲ್ಲ ನಮ್ಮ ದೇಶದ ಮಂಗ…!

 

ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಂತ ಅವಶ್ಯಕ. ಮನುಷ್ಯರಿಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿಗೆ. ಬ್ರಶ್ ಮಾಡಬಹುದು, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಹಲ್ಲುಗಳನ್ನು ಗಟ್ಟಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.

ಆದ್ರೆ ಇಷ್ಟೆಲ್ಲಾ ಸೌಲಭ್ಯವಿದ್ರೂ ನಾವು ಹಲ್ಲುಗಳ ಶುಚಿತ್ವದ ಬಗ್ಗೆ ಗಮನ ಕೊಡುತ್ತಿಲ್ಲ.

ಜನರಿಗೆ ಹೋಲಿಸಿದ್ರೆ ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಭಾರತದ ಕೋತಿಗಳೇ ಮುಂದಿದೆಯಂತೆ. ಸಂಶೋಧನೆಯೊಂದರಲ್ಲಿ ಈ ಅಂಶ ಬಯಲಾಗಿತ್ತು.

ಭಾರತದಲ್ಲಿರುವ ಉದ್ದ ಬಾಲದ ಮಂಗಗಳು ನೈಲಾನ್ ದಾರ, ಹಕ್ಕಿಗಳ ರೆಕ್ಕೆ, ತೆಂಗಿನ ಕಾಯಿ ಚರಟ, ಹುಲ್ಲಿನ ಕಡ್ಡಿಯನ್ನೆಲ್ಲ ಬಳಸಿ ಹಲ್ಲುಗಳನ್ನು ಕ್ಲೀನ್ ಮಾಡಿಕೊಳ್ಳುತ್ತವೆ. ಈ ಕೆಲಸವನ್ನು ನಿಯಮಿತವಾಗಿ ಮಾಡುವುದರಿಂದ ವಿದೇಶೀಯರ ಹಲ್ಲುಗಳಿಗಿಂತ್ಲೂ ಭಾರತದ ಕೋತಿಗಳ ಹಲ್ಲು ಹೆಚ್ಚು ಶುಚಿಯಾಗಿದೆಯಂತೆ.

ಭಾರತದ ಮಂಗಗಳ ಬುದ್ಧಿವಂತಿಕೆಗೆ ಜಗತ್ತೇ ಬೆರಗಾಗಿದೆ. ಕಲ್ಲಿನ ಮೇಲೆ ತೆಂಗಿನ ಕಾಯಿ ಒಡೆಯೋದು, ಗೇರು ಬೀಜ ಒಡೆದು ಅದರಲ್ಲಿರುವ ಎಣ್ಣೆಯನ್ನು ಎಲೆಯಿಂದ ಒರೆಸಿ ತಿನ್ನುವುದು ಹೀಗೆ ಚತುರ ಕೆಲಸಗಳನ್ನು ಮಂಗಗಳು ಮಾಡುತ್ತವೆ. ಹಲ್ಲುಗಳ ಸ್ವಚ್ಛತೆಯಲ್ಲಿ ಮನುಷ್ಯರನ್ನೇ ಮೀರಿಸಿವೆಯಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮ್ಯಾಂಚೆಸ್ಟರ್ ಯುನೈಟೆಡ್ ಸ್ಪರ್ಸ್ ಅನ್ನು ಸೋಲಿಸಿದ ಕಾರಣ ಕ್ರಿಸ್ಟಿಯಾನೋ ರೊನಾಲ್ಡೊ ಹ್ಯಾಟ್ರಿಕ್ ಸಾರ್ವಕಾಲಿಕ ಸ್ಕೋರಿಂಗ್ ದಾಖಲೆಯನ್ನು ಸ್ಥಾಪಿಸಿದ!

Mon Mar 14 , 2022
ಕ್ರಿಸ್ಟಿಯಾನೊ ರೊನಾಲ್ಡೊ ಹ್ಯಾಟ್ರಿಕ್‌ನೊಂದಿಗೆ ಫಾರ್ಮ್‌ಗೆ ಮರಳುವ ಮೂಲಕ ಮತ್ತೊಂದು ಗೋಲು ಗಳಿಸುವ ದಾಖಲೆಯನ್ನು ನಿರ್ಮಿಸಿದರು, ಶನಿವಾರದಂದು ಟೊಟೆನ್‌ಹ್ಯಾಮ್ ವಿರುದ್ಧ 3-2 ಗೆಲುವಿನೊಂದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಮುಂದಿನ ಋತುವಿನಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಆಡುವ ಅವಕಾಶವನ್ನು ಜೀವಂತವಾಗಿರಿಸಿದರು. ರೊನಾಲ್ಡೊ ತನ್ನ ಹಿಂದಿನ 10 ಪಂದ್ಯಗಳಲ್ಲಿ ಕೇವಲ ಒಮ್ಮೆ ಮಾತ್ರ ಗೋಲು ಗಳಿಸಿದ್ದರು, ಆದರೆ ಮೂರು ಅದ್ಭುತ ಮುಕ್ತಾಯಗಳು ಕ್ಲಬ್ ಮತ್ತು ದೇಶಕ್ಕಾಗಿ 807 ಗೋಲುಗಳೊಂದಿಗೆ FIFA ದಾಖಲೆಗಳ ಪ್ರಕಾರ ವೃತ್ತಿಪರ ಪುರುಷರ ಫುಟ್ಬಾಲ್ […]

Advertisement

Wordpress Social Share Plugin powered by Ultimatelysocial