ಈ ಬಜೆಟ್​​ ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಹಾಕಿದಂತಿದೆ- ಕುಮಾರಸ್ವಾಮಿ

ಬೆಂಗಳೂರು: ಸಾಮಾನ್ಯ ಜನರ ಪಾಲಿಗೆ ಭರವಸೆ ಆಶಾಕಿರಣವಾಗಬೇಕಿದ್ದ ಕೇಂದ್ರ ಬಜೆಟ್​ನಲ್ಲಿ ಅಂಥ ಯಾವುದೇ ಅಂಶ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಬಾರಿಯ ಬಜೆಟ್​ನ್ನು ಟೀಕಿಸಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್​ .ಸಾಮಾನ್ಯನ ಬದುಕಿನ ಬಗ್ಗೆ ಬಜೆಟ್ ಯೋಚನೆಯನ್ನೇ ಮಾಡಿಲ್ಲ. ಕೋವಿಡ್, ಬೆಲೆ ಏರಿಕೆಯಿಂದ ಬಸವಳಿದ ಬಡಜನರ ಬಗ್ಗೆ ಕನಿಕರ ತೋರಿಲ್ಲ. ಕೋವಿಡ್ ಸಂಕಷ್ಟದ ನಂತರ ದೇಶದಲ್ಲಿ ಬಡತನಕ್ಕೆ ಹೆಚ್ಚು ಜನರು ದೂಡಲ್ಪಡುತ್ತಿದ್ದರೆ, ಸಿರಿವಂತರು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟ ಪರಿಹಾರ ಇಲ್ಲ. ಸೋಂಕಿನ ಮಾರಿಗೆ ಸಿಲುಕಿ ಭರವಸೆ ಕಳೆದುಕೊಂಡಿರುವ ರೈತಾಪಿ, ಕಾರ್ಮಿಕರಿಗೆ ಧೈರ್ಯ ತುಂಬುವ ಅಥವಾ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಅಂಶಗಳು ಈ ಬಜೆಟ್ ನಲ್ಲಿ ಇರಲೇಬೇಕಾಗಿತ್ತು ಎಂದು ಹೇಳಿದರು.ಇನ್ನು ಬಜೆಟ್ ಬಗ್ಗೆ ದೊಡ್ಡಮಟ್ಟಿಗೆ ಹೇಳುವಂತಹದ್ದು ಏನೂ ಇಲ್ಲ. ಕೆಲವೊಮ್ಮೆ ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಅದೇ ರೀತಿ ತಣ್ಣೀರು ಬಟ್ಟೆ ಹಾಕಿಕೋ ಎಂದು ಹೇಳಿದ್ದಾರೆ ಹಣಕಾಸು ಸಚಿವರು. ಬಜೆಟ್ ಬಗ್ಗೆ ಇನ್ನೂ ಸಂಪೂರ್ಣವಾಗಿ ಗಮನಿಸಿಲ್ಲ. ನದಿ ಯೋಜನೆ ಬಗ್ಗೆ ಮೂರು ವರ್ಷದಿಂದ ಹೇಳುತ್ತಿದ್ದಾರೆ. ಕಾವೇರಿ – ಪೆನ್ನಾರ್, ಕೃಷ್ಣ-ಗೋದಾವರಿ ನದಿಗಳ ಜೋಡಣೆ ಬಗ್ಗೆ ಹೇಳಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕಲ್ಲ. ನದಿ ಜೋಡಣೆ ವಿಚಾರ ಬರಿ ಚರ್ಚೆಯಲ್ಲಿ. ಇದೆ ಕಾರ್ಯರೂಪಕ್ಕೆ ಬರಬೇಕಿದೆ. ಹೆಚ್ಚಿನ ತೆರಿಗೆ ವಿಧಿಸಿಲ್ಲ ಅನ್ನುವುದು ಬಿಟ್ಟರೇ ಬೇರೆ ಏನೂ ಇಲ್ಲ. ಯಾವುದೇ ಹೊಸ ರೀತಿಯ ಅಭಿವೃದ್ಧಿ ಕಾರ್ಯಕ್ರಮವಿಲ್ಲ. ಈ ವರ್ಷವನ್ನು ಕಳೆಯುವ ಬಜೆಟ್ ಅಷ್ಟೇ ಇದು ಎಂದು ಅವರು ಟೀಕಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆಲಂಗಾಣ ಭಾರತದ ಹೊಸ 'ಕ್ಯಾನ್ಸರ್ ರಾಜಧಾನಿ' ಆಗಿದೆಯೇ?

Sat Feb 5 , 2022
ಉಚಿತ ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ಸಮಯದಲ್ಲಿ ವೈದ್ಯರು ಮಹಿಳಾ ಪೊಲೀಸ್ ಅಧಿಕಾರಿಯ ಮ್ಯಾಮೊಗ್ರಾಮ್ ಅನ್ನು ನಡೆಸುತ್ತಾರೆ. (ಫೋಟೋ ಕ್ರೆಡಿಟ್: ಪಿಟಿಐ) 2025 ರ ವೇಳೆಗೆ, ತಜ್ಞರ ಪ್ರಕಾರ ತೆಲಂಗಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 53,000 ಹೊಸ ಕ್ಯಾನ್ಸರ್ ಪ್ರಕರಣಗಳ ಸಾಧ್ಯತೆಗಳಿವೆ. ಈ ರಾಜ್ಯವು ಹೆಚ್ಚಿನ ಸಂಖ್ಯೆಯ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದೆ. ಮಧ್ಯಪ್ರದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ 17%. ಇಂದಿನ ದಿನಗಳಲ್ಲಿ ಕಲುಷಿತ ಪರಿಸರ ಮತ್ತು […]

Advertisement

Wordpress Social Share Plugin powered by Ultimatelysocial