ಸಿ. ಕೆ. ಎನ್. ರಾಜ ಕಾನೂನು ತಜ್ಞರು.

ಪ್ರೊ. ಸಿ. ಕೆ. ಎನ್. ಕಾನೂನು ತಜ್ಞರು, ಪ್ರಾಧ್ಯಾಪಕರು ಮತ್ತು ಬರಹಗಾರರು. ಇವರ ಮೂಲ ಹೆಸರು ಸಿ.ಎನ್. ಕೇಶವಮೂರ್ತಿ.ಸಿ. ಕೆ. ಎನ್. ರಾಜ 1932ರ ಫೆಬ್ರವರಿ 19ರಂದು ನಂಜನಗೂಡಿನಲ್ಲಿ ಜನಿಸಿದರು. ಚಾಮರಾಜನಗರದ ಸಮೀಪದ ಚಂದಕವಾಡಿ ಇವರ ಊರು. ತಂದೆ ಸಿ.ಕೆ. ನಾಗಪ್ಪ. ತಾಯಿ ಸೀತಾಲಕ್ಷ್ಮಮ್ಮ. ವೈಯಾಕರಣಿ ಶ್ರೀಕಂಠ ಶಾಸ್ತ್ರಿ, ರಾಮಾ ಶಾಸ್ತ್ರಿ ಇವರ ತಾಯಿಯ ಪೂರ್ವಿಕರು.
ಪ್ರೌಢಶಾಲೆಯವರೆವಿಗೂ ನಂಜನಗೂಡಿನಲ್ಲೇ ಇವರ ವಿದ್ಯಾಭ್ಯಾಸ ನಡೆಯಿತು. ಇವರು ಶಾಲಾ ದಿನಗಳಿಂದಲೂ ಉತ್ತಮ ವಾಗ್ಮಿಯಾಗಿದ್ದರು. ಶಾಲೆಗೆ ತಂದ ಷೀಲ್ಡ್ ನೋಡಿದ ಮುಖ್ಯೋಪಾಧ್ಯಾಯರಾದ ಶೆಲ್ಪ ಪುಳ್ಳೆ ಅಯ್ಯಂಗಾರ್ಯರು ಇವರಿಗಿದ್ದ ಸಿ.ಎನ್. ಕೇಶವಮೂರ್ತಿ ಎಂಬ ಹೆಸರು ಬದಲಿಸಿ ಸಿ.ಕೆ.ಎನ್. ರಾಜ ಎಂದು ಕರೆದರು. ಅದೇ ಶಾಶ್ವತವಾಯಿತು.ಸಿ. ಕೆ. ಎನ್. ರಾಜ ಇಂಟರ್ ಮೀಡಿಯೆಟ್ ಓದಿದ್ದು ಮೈಸೂರಿನ ಯುವರಾಜ ಕಾಲೇಜಿನಲ್ಲಿ. ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಬಿ.ಎಸ್ಸಿ ಓದಿ, ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಅಂದಿನ ದಿನಗಳಲ್ಲಿ ಪ್ರಾಂಶುಪಾಲರಾಗಿದ್ದ ಎಮ್. ನಾರಾಯಣರಾಯರು ಭಾರತದ ಸರ್ವೋಚ್ಛನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎಂ.ಎನ್. ವೆಂಕಟಾಚಲಯ್ಯನವರ ತಂದೆ. ಮುಂದೆ ರಾಜ ಅವರು ಕಾನೂನು ವಿಭಾಗದಲ್ಲಿ ಪಿಎಚ್.ಡಿ ಪಡೆದರು.ಸಿ. ಕೆ. ಎನ್. ರಾಜ ಅವರು ಕಾನೂನು ವಿದ್ಯಾಭ್ಯಾಸದ ನಂತರ ವಕೀಲಿವೃತ್ತಿ ಆರಂಭಿಸಿದರು. ನಂತರ ಮೈಸೂರು ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆ ಅಲಂಕರಿಸಿದರು. 1966ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಲಾ ಕಾಲೇಜಿನಲ್ಲಿ ರೀಡರ್ ಆಗಿ ನೇಮಕಗೊಂಡರು. ಧಾರವಾಡದ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಬಂದರು. ಹೀಗೆ ಅವರಿಗೆ ದೊರೆತ ಆಪ್ತ ಸ್ನೇಹಿತರಾದವರಲ್ಲಿ ಚೆನ್ನವೀರಕಣವಿ, ಬಸವರಾಜ ಕಟ್ಟೀಮನಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ದೇವೇಂದ್ರಕುಮಾರ ಹಕಾರಿ, ಎಂ.ಎಂ. ಕಲಬುರ್ಗಿ ಮುಂತಾದವರು ಪ್ರಮುಖರು. ಹೀಗೆ ಸಾಹಿತ್ಯದತ್ತ ರಾಜ ಅವರಿಗೆ ಒಲವು ಮೂಡಿತು.ರಾಜ ಅವರಿಗೆ ಮಾತಾಮಹರ ಕಡೆಯಿಂದ ಬಂದದ್ದು ಹಾಸ್ಯಪ್ರಜ್ಞೆ. ಬರೆದ ಹಾಸ್ಯಲೇಖನ ಕೊರವಂಜಿಗೆ ರವಾನೆ ಮಾಡಿದಾಗ ರಾಶಿಯವರಿಂದ ಬಂದ ಉತ್ತರ “ಲೇಖನ ತಲುಪಿದೆ, ಕ.ಬು.ನಲ್ಲಿ ಭದ್ರವಾಗಿದೆ”. ಹುಡುಗುಬುದ್ಧಿ, “ಓ ! ಭದ್ರಪಡಿಸಿದ್ದಾರೆ” ಎಂದು ನಂಬಿಬಿಟ್ಟಿದ್ದರು. ಆದರೆ, ಅರ್ಥ ತಿಳಿದಾಗ ಕಂಗಾಲಾದರು. ಹಠತೊಟ್ಟು ಲೇಖನ ಬರೆದರು. ‘ಪಂಡಿತ್‌ಜೀಗೆ ಸೈನೊಸೈಟಿಸ್’ ರಾಜಕೀಯ ವಿಡಂಬನೆ ಬರೆದಾಗ, ರಾಶಿಯವರು ಬೆನ್ನು ತಟ್ಟಿ ಪ್ರಕಟಿಸಿ 2 ರೂ ಸಂಭಾವನೆ ಕಳುಹಿಸಿದ್ದಲ್ಲದೆ ಮುಂದೆ ಅನೇಕ ಬರಹಗಳಿಗೆ ಪ್ರೇರಕರಾದರು. ನಂತರ ಸುಮಾರು 2000ಕ್ಕೂ ಮಿಕ್ಕ ವಿಡಂಬನೆಗಳು ಪ್ರಕಟಗೊಂಡವು. ಇವರು ಯಾವುದನ್ನೂ ಸಂಗ್ರಹಿಸಿಟ್ಟುಕೊಳ್ಳದ ಉದಾರವಾದಿ. ಎರಡು ಕಾದಂಬರಿಗಳಾದ ‘ಪುನರುತ್ಥಾನ’ ಕನ್ನಡಪ್ರಭದಲ್ಲಿ ಮತ್ತು ‘ರಾಯರ ವಠಾರ’ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡವು.ಸಿ. ಕೆ. ಎನ್. ರಾಜ ಅವರು ನಕ್ಕು ನಗಿಸಲು ಒಂದೆಡೆ ಸಾವಿರಾರು ಭಾಷಣಗಳನ್ನೂ ಮತ್ತೊಂದೆಡೆ ಸಾಮಾನ್ಯರಿಗೂ ಸಂವಿಧಾನದ ತಿಳುವಳಿಕೆ ನೀಡಲಿಕ್ಕಾಗಿ ಭಾಷಣಗಳನ್ನೂ ಮಾಡಿದರು. Constitutional Literacy campaign ಮೂಲಕ ಶಿರಸಿ, ಸಿದ್ಧಾಪುರ, ಕುಮಟಾ, ಕಾರವಾರ, ಅಂಕೋಲ ಮುಂತಾದೆಡೆ ಮನೆಮನೆಗೆ ಹೋಗಿ ಸಂವಿಧಾನದ ಬಗ್ಗೆ ತಿಳುವಳಿಕೆ ನೀಡಿದ ಏಕವ್ಯಕ್ತಿ ಸಾಧನೆ ಇವರದ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೂರಕ್ಕೂ ಅಧಿಕ ನಟ ನಟಿಯರಿಂದ ಏಕಕಾಲಕ್ಕೆ "ತತ್ಸಮ ತದ್ಭವ" ಚಿತ್ರದ ಪೋಸ್ಟರ್ ಬಿಡುಗಡೆ .

Sun Feb 19 , 2023
ನೂರಕ್ಕೂ ಅಧಿಕ ನಟ ನಟಿಯರಿಂದ ಏಕಕಾಲಕ್ಕೆ “ತತ್ಸಮ ತದ್ಭವ” ಚಿತ್ರದ ಪೋಸ್ಟರ್ ಬಿಡುಗಡೆ . ಇದು ಮೇಘನರಾಜ್ ಸರ್ಜಾ ನಟಿಸಿರುವ ಚಿತ್ರ ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಮತ್ತೆ ನಟನೆಗೆ ಮರಳಿರುವ ಚಿತ್ರ “ತತ್ಸಮ ತದ್ಭವ”ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ. ನಿರ್ದೇಶಕ ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ […]

Advertisement

Wordpress Social Share Plugin powered by Ultimatelysocial