ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ರೀತಿ ಫಂಚರ್ ಆದ ಬಸ್ ಇದ್ದಂತೆ.

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ರೀತಿ ಫಂಚರ್ ಆದ ಬಸ್ ಇದ್ದಂತೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಥೆ ಆಗಲೇ ಮುಗಿದಿದೆ. ಅದನ್ನು ಸುಡಬೇಕೋ ಉಳಬೇಕೋ ಎನ್ನುವುದೇ ಸದ್ಯ ಇರುವ ಪ್ರಶ್ನೆ. ಬಸವಕೃಪಾ (ಲಿಂಗಾಯತ) ಆದರೆ ಊಳಬೇಕು. ಕೇಶವ ಕೃಪಾ (ಆರ್‌ಎಸ್‌ಎಸ್) ಆದರೆ ಸುಡಬೇಕು ಎನ್ನುವ ಸ್ಥಿತಿಯಿದೆ ಎಂದರು.ಬಿಜೆಪಿಯವರಿಗೆ ರಾಮ ಮಂದಿರ ಆಯಿತು, ಗೋ ಹತ್ಯೆ ಆಯಿತು. ಈಗ ಹಿಜಾಬ್ ಹಿಡಿದಿದ್ದಾರೆ. ಹಿಜಾಬ್ ಅಂದರೆ ಬಿಜೆಪಿಯವರಿಗೆ ಅರ್ಥವೇ ಗೊತ್ತಿಲ್ಲ. ಹಿಜಾಬ್ ಅಂದರೆ ತಲೆ ಮೇಲೆ ಸೆರಗು ಹೊತ್ತುಕೊಳ್ಳುವುದು. ಕೆಲ ಮಹಿಳೆಯರು ಮುಖದ ತುಂಬ ಸೆರಗು ಹೊತ್ತುಕೊಳ್ಳುತ್ತಾರೆ. ಅದು ತಪ್ಪಾ. ಅವರು ಸಮವಸ್ತ್ರ ಮಾಡಲಿ. ಮಕ್ಕಳು ವೇಲ್ ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೆ ಇವರಿಗೆ ಏನು ಕಷ್ಟ ಎಂದು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿ ಹವಾಮಾನ ನವೀಕರಣಗಳು: ಮುಂದಿನ ವಾರ ನಗರದಲ್ಲಿ ಮಳೆಯಾಗುವ ನಿರೀಕ್ಷೆಯಿದೆ; AQI 'ಮಧ್ಯಮ' ವಲಯದಲ್ಲಿ ಮುಂದುವರಿಯುತ್ತದೆ

Sun Feb 13 , 2022
  ಭಾನುವಾರ ಬೆಳಗ್ಗೆ 8 ಗಂಟೆಗೆ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವ ಪಾದರಸದೊಂದಿಗೆ ಗಣನೀಯವಾಗಿ ಕುಸಿದಿದೆ. ರಾಜಧಾನಿಯ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ 1.6 ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಕೆಲವು ದಿನಗಳಲ್ಲಿ ಮುಖ್ಯವಾಗಿ ಸ್ಪಷ್ಟವಾದ ಆಕಾಶ ಆದರೆ ಬೆಳಗಿನ ಸಮಯದಲ್ಲಿ ಮಧ್ಯಮ ಮಂಜು ಇರುತ್ತದೆ. ಹವಾಮಾನ ಅಧಿಕಾರಿಯೊಬ್ಬರು, “ಮುಂದಿನ ಕೆಲವು ದಿನಗಳಲ್ಲಿ ಗರಿಷ್ಠ ತಾಪಮಾನವು 24-25 ಡಿಗ್ರಿ […]

Advertisement

Wordpress Social Share Plugin powered by Ultimatelysocial