ನಿರುದ್ಯೋಗ ಸಮಸ್ಯೆ ತೊಲಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಉದ್ಯೋಗ ನೀತಿ ಜಾರಿ – ಸಿಎಂ ಬೊಮ್ಮಾಯಿ

ನಿರುದ್ಯೋಗ ಸಮಸ್ಯೆ ತೊಲಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಉದ್ಯೋಗ ನೀತಿ ಜಾರಿ - ಸಿಎಂ ಬೊಮ್ಮಾಯಿ

ಬೆಳಗಾವಿ : ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತೊಲಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಉದ್ಯೋಗ ನೀತಿ ಜಾರಿಗೊಳಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜಿಲ್ಲೆಯ ಗೋಗಟೆಯಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ನೀತಿಯ ಮೂಲಕ ಯುವ ಪೀಳಿಗೆಯ ಸಮಸ್ಯೆಯಾಗಿರುವ ನಿರುದ್ಯೋಗಕ್ಕೆ ಮುಕ್ತಿ ಕಾಣಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಸಚಿವ ಅಶ್ವತ್ಥ್ ನಾರಾಯಣ್, ರಾಜ್ಯದಲ್ಲಿನ ಪ್ರತಿಯೊಬ್ಬ ವಿದ್ಯಾವಂತರಿಗೂ ಉದ್ಯೋಗ ಸಿಗುವ ನಿಟ್ಟಿನಲ್ಲಿಯೇ ಸಕಲರಿಗೂ ಉದ್ಯೋಗ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಉದ್ಯೋಗ ಮೇಳದಲ್ಲಿ ಹಲವು ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಿದ್ದರು. 14 ಕಂಪನಿಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಮಹೀಂದ್ರಾ ಆಂಡ್ ಮಹಿಂದ್ರಾ, ನಂದಿ ಫೌಂಡೇಶನ್ 31 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿತು. ಅಲ್ಲದೇ, ಒಡಂಬಡಿಕೆಗೆ ಸಹಿ ಹಾಕಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ಮೆಟ್ರೋ ಹಂತ-2A: 577 ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಅಸ್ತು

Fri Dec 24 , 2021
ಬೆಂಗಳೂರು: ತಾಂತ್ರಿಕ ತಜ್ಞರ ಸಮಿತಿ(ಟಿಇಸಿ)ಯ ಶಿಫಾರಸಿನಂತೆ ನಮ್ಮ ಮೆಟ್ರೋ ಯೋಜನೆಯ 2ಎ ಹಂತದ ವಿವಿಧ ಸ್ಥಳಗಳಲ್ಲಿ 833 ಮರಗಳ ಪೈಕಿ 577 ಮರಗಳನ್ನು ಕಡಿಯಲು, 212 ಮರಗಳನ್ನು ಸ್ಥಳಾಂತರಿಸಲು ಮತ್ತು 44 ಮರಗಳನ್ನು ಉಳಿಸಿಕೊಳ್ಳಲು ಕರ್ನಾಟಕ ಹೈಕೋರ್ಟ್ ಗುರುವಾರ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ(ಬಿಎಂಆರ್‌ಸಿಎಲ್) ಗುರುವಾರ ಅನುಮತಿ ನೀಡಿದೆ. ತಜ್ಞರ ಸಮಿತಿ ಶಿಫಾರಸಿನಂತೆ 577 ಮರಗಳನ್ನು ಕಡಿಯಲು ಅನುಮತಿಸಬಹುದೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ತಜ್ಞರಲ್ಲ ಎಂದು ಹೈಕೋರ್ಟ್ ಹೇಳಿದೆ. […]

Advertisement

Wordpress Social Share Plugin powered by Ultimatelysocial