ರಾಜ್ಯದ ‘ಪೌರ ಕಾರ್ಮಿಕ’ರಿಗೆ ಸಿಹಿಸುದ್ದಿ : ಶೀಘ್ರವೇ ಖಾಯಂಗೊಳಿಸುವ ಬಗ್ಗೆ ಸರ್ಕಾರ ನಿರ್ಧಾರ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಪೌರಕಾರ್ಮಿಕರು   ಖಾಯಂ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಖಾಯಂ ಮಾಡುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರವೇ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದ್ದಾರೆ.ಈ ಮೂಲಕ ಖಾಯಂ ನಿರೀಕ್ಷೆಯಲ್ಲಿದ್ದಂತ ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.ಸೋಮವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಶಾಸಕ ಪಿ ರಾಜೀವ್ ಮಾಡಿದ ಪ್ರಸ್ತಾಪಕಕ್ಕೆ ಉತ್ತರ ನೀಡಿದಂತ ಸಿಎಂ ಬಸವರಾಜ ಬೊಮ್ಮಾಯಿವರು, ಪೌರ ಕಾರ್ಮಿಕರನ್ನು ಗುತ್ತಿಗೆದಾರರ ಮೂಲಕ ನೇಮಕಮಾಡಿಕೊಳ್ಳಲಾಗಿತ್ತು. ಅವರ ಸರಿಯಾಗಿ ವೇತನ ಪಾವತಿ ನೀಡುತ್ತಿರಲಿಲ್ಲ. ಈಗ ಸರ್ಕಾರ ಆ ಪೌರ ಕಾರ್ಮಿಕರ ಖಾತೆಗೆ ನೇರವಾಗಿ ವೇತನ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.ಈ ಬಾರಿಯ ಬಜೆಟ್ ನಲ್ಲಿ ಸರ್ಕಾರದಿಂದ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ಆರೋಗ್ಯಕ್ಕಾಗಿ 2 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಅವರಿಗೆ ವೈದ್ಯಕೀಯ ಸೇವೆ ಸೇರಿದಂತೆ ಸೂಕ್ತ ಸವಲತ್ತುಗಳನ್ನು ಒದಗಿಸಿಕೊಡುವಂತ ನಿಟ್ಟಿನಲ್ಲಿಯೂ ರಾಜ್ಯ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಹೇಳಿದರು.ಪೌರ ಕಾರ್ಮಿಕರ ಎಲ್ಲಾ ಇಲಾಖೆಗಳಿಂದ ಮಾಹಿತಿಯನ್ನು ಪಡೆದು, ರಾಜ್ಯ ಸರ್ಕಾರ ಆರ್ಥಿಕ ಹೊರೆಯ ಬಗ್ಗೆ ಚರ್ಚಿಸಿ, ಪೌರ ಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುವ ಬಗ್ಗೆ ಶೀಘ್ರವೇ ಸೂಕ್ತ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನುಪಮ್ ಖೇರ್ ಅವರ ದಿ ಕಾಶ್ಮೀರ್ ಫೈಲ್ಸ್ ಗಂಗೂಬಾಯಿ ಕಥಿಯಾವಾಡಿ ಅವರನ್ನು ಸೋಲಿಸುತ್ತದೆ!

Tue Mar 15 , 2022
ಅನುಪಮ್ ಖೇರ್ ಅಭಿನಯದ ದಿ ಕಾಶ್ಮೀರ್ ಫೈಲ್ಸ್ ಪಟ್ಟಣದ ಚರ್ಚೆಯಾಗಿದೆ. ಈ ಚಿತ್ರವು ಪ್ರೇಕ್ಷಕರ ಹೃದಯವನ್ನು ಗೆದ್ದಿದೆ ಮಾತ್ರವಲ್ಲದೆ ಹಿಂದಿ ಚಲನಚಿತ್ರೋದ್ಯಮದಲ್ಲಿ ಥಿಯೇಟರ್ ವ್ಯವಹಾರವನ್ನು ಪುನರುಜ್ಜೀವನಗೊಳಿಸಿದೆ. ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ಈ ಚಿತ್ರವು ಮಾರ್ಚ್ 11, 2022 ರಂದು ಬಿಡುಗಡೆಯಾಯಿತು ಮತ್ತು ಸೋಮವಾರದ ಅದ್ಭುತ ವ್ಯಾಪಾರದಿಂದಾಗಿ ಗಂಗೂಬಾಯಿ ಕಥಿವಾಡಿ ಮತ್ತು ಸೂರ್ಯವಂಶಿಯಂತಹ ಬಾಲಿವುಡ್ ದಿಗ್ಗಜರನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. ಕಾಶ್ಮೀರ ಫೈಲ್ಸ್ ಇದುವರೆಗೆ ಭಾರತದಲ್ಲಿ ಒಟ್ಟು 42.20 ಕೋಟಿ […]

Advertisement

Wordpress Social Share Plugin powered by Ultimatelysocial