ಚೀನಾದಲ್ಲಿ ಎಲಾನ್ ಮಸ್ಕ್ ವಿರುದ್ಧ ಭುಗಿಲೆದ್ದ ಆಕ್ರೋಶ!

ಚೀನಾ ಬಾಹ್ಯಾಕಾಶದಲ್ಲಿ ಎಲ್ಲರಿಗಿಂತ ಮುಂದೆ ನಾನೇ ಓಡ್ಬೇಕು ಅಂತ ಶತಪ್ರಯತ್ನ ನಡೆಸ್ತಿದೆ. ಅದಕ್ಕಾಗಿ ತನ್ನದೇ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡ್ತಿದೆ. ಆದ್ರೆ ಸ್ಪೇಸ್ ಎಕ್ಸ್​ ಮುಖ್ಯಸ್ಥ ಎಲಾನ್ ಮಸ್ಕ್​​ರ ಸ್ಟಾರ್​ ಲಿಂಕ್​​ನ ಉಪಗ್ರಹಗಳು ಡಿಕ್ಕಿಯಾಗೋದ್ರಿಂದ ಜಸ್ಟ್​ ಮಿಸ್ ಆಗಿದೆ ಅಂತ ಚೀನಾ ಹೇಳಿದೆ.

ವಿಶ್ವಸಂಸ್ಥೆಯ ಬಾಹ್ಯಾಕಾಶ ಸಂಸ್ಥೆಗೆ ಚೀನಾ ನೀಡಿರೋ ವರದಿಯಲ್ಲಿ ಈ ಮಾಹಿತಿ ನೀಡಿದೆ. ಒಟ್ಟು ಎರಡು ಸಲ.. ಒಂದು ಜುಲೈ 1, ಎರಡನೇದು ಅಕ್ಟೋಬರ್ 21ರಂದು ಡಿಕ್ಕಿಯಾಗೋ ಅಪಾಯ ಎದುರಾಗಿತ್ತು. ಆದ್ರೆ ನಮ್ಮ ವಿಜ್ಞಾನಿಗಳ ಸಮಯ ಪ್ರಜ್ಞೆಯಿಂದ ಈ ಅಪಾಯ ತಪ್ಪಿದೆ ಅಂತ ಕೂಡ ಹೇಳಿದೆ. ಇದ್ರ ಬೆನ್ನಲ್ಲೇ ಚೀನಾದಲ್ಲಿ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಪರಿಶೀಲನೆ ನಡೆಸಿಲ್ಲ. ಈ ರೀತಿ ನಡೆದಿರೋದು ಹೌದಾ ಅಲ್ವಾ ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಲಿದೆ. ಆದ್ರೆ ಸ್ಪೇಸ್​​ಎಕ್ಸ್​ ಅಥವಾ ಎಲಾನ್ ಮಸ್ಕ್ ಆಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಷಿಯಲ್ ಮೀಡಿಯಾ ವೇಬೋದಲ್ಲಿ ಜನ ಬಗೆಬಗೆಯ ಕಮೆಂಟ್ ಮಾಡ್ತಿದ್ದು, ಒಬ್ಬ ವ್ಯಕ್ತಿಯಂತೂ ಸ್ಟಾರ್ ಲಿಂಕ್ ಉಪಗ್ರಹಗಳು ಬರೀ ಕಸ ಅಷ್ಟೆ ಅಂತ ಹೇಳಿದ್ದಾರೆ. ಮತ್ತೊಬ್ಬರು ಈ ಉಪಗ್ರಹಗಳು ಬಾಹ್ಯಾಕಾಶದಲ್ಲಿರೋ ಅಮೆರಿಕದ ಶಸ್ತ್ರಾಸ್ತ್ರ ಅಂತ ಹೇಳಿದ್ದಾರೆ. ನಾವು ಟೆಸ್ಲಾ ಕಾರು ತಗೊಂಡು ಮಸ್ಕ್​​​ಗೆ ಸ್ಟಾರ್​ಲಿಂಕ್​ ಉಪಗ್ರಹ ಉಡಾವಣೆಗೆ ದುಡ್ಡು ಕೊಡ್ತೀವಿ. ಆದ್ರೆ ಮಸ್ಕ್ ಚೀನಾ ಸ್ಪೇಸ್ ಸ್ಟೇಷನ್​​ಗೇ ಡಿಕ್ಕಿಯಾಗಲು ಪ್ರಯತ್ನಿಸ್ತಾರೆ ಅಂತ ಬರೆದಿದ್ರೆ, ಮತ್ತೊಬ್ಬರು ಟೆಸ್ಲಾವನ್ನು ಬಾಯ್​​ಕಾಟ್ ಮಾಡಕ್ಕೆ ರೆಡಿಯಾಗಿ ಅಂತ ಬರ್ಕೊಂಡಿದ್ದಾರೆ. ಅಂದಹಾಗೆ ಚೀನಾ ನಿರ್ಮಿಸ್ತಿರೋ ಈ ಸ್ಪೇಸ್​​ ಸ್ಟೇಷನ್​​ನ ಕೋರ್ ಈ ವರ್ಷ ಆರಂಭದಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಇದ್ರ ನಿರ್ಮಾಣ ಕಾರ್ಯ 2022ರಲ್ಲಿ ಪೂರ್ಣಗೊಳಿಸೋ ಗುರಿಯನ್ನು ಚೀನಾ ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಶ್ವದಲ್ಲಿ ಹೊಸ ದಾಖಲೆ ಬರೆದ ಕೊರೋನಾ!

Tue Dec 28 , 2021
ಒಂದ್ಕಡೆ ಒಮೈಕ್ರಾನ್ ಆಂತಕವಾದ್ರೆ, ಮತ್ತೊಂದ್ಕಡೆ ಯೂರೋಪಿನ ದೇಶಗಳಲ್ಲಿ ದಿನೇ ದಿನೇ ದಾಖಲೆಯ ಕೊರೋನಾ ಪತ್ತೆಯಾಗ್ತಿದೆ. ನಿನ್ನೆ ಒಂದೇ ದಿನ ಇಡೀ ವಿಶ್ವದಲ್ಲಿ 14.4 ಲಕ್ಷ ಮಂದಿಗೆ ಕೊರೋನಾ ಬಂದಿದೆ. ಕೊರೋನಾ ಶುರುವಾದ ಬಳಿಕ ಇಷ್ಟು ಮಂದಿಗೆ ಒಂದೇ ದಿನ ಕೊರೋನಾ ಬಂದಿರೋದು ಇದೇ ಮೊದಲಾಗಿದೆ. ಇನ್ನು ಕೊರೋನಾ ಹೆಚ್ಚುತ್ತಿರೋದು ವಿಮಾನಯಾನ ಸಂಸ್ಥೆಗಳ ಮೇಲೂ ಗಂಭೀರ ಪರಿಣಾಮ ಉಂಟು ಮಾಡ್ತಿವೆ. ಇದ್ರಿಂದಾಗಿ ಕಳೆದ ಶುಕ್ರವಾರದಿಂದ ಈವರೆಗೆ ಸುಮಾರು 11,500ರಷ್ಟು ವಿಮಾನಗಳ ಹಾರಾಟ […]

Advertisement

Wordpress Social Share Plugin powered by Ultimatelysocial