ಗೂಡಿಗೆ ತೆರಳಿ ಕಾಗೆಗಳ ಮೊಟ್ಟೆ ಒಡೆದ ಕೋತಿ..!

ಕೊಚ್ಚಿ: ಕೋತಿಗಳು   ಏನಾದರೊಂದು ಕುಚೇಷ್ಟೆ  ಮಾಡುತ್ತಾ ಇರುತ್ತವೆ. ಆದರೆ ಇಲ್ಲೊಂದು ಕೋತಿಗೆ ಕಾಗೆಗಳ   ಹಿಂಡು ಸರಿಯಾಗಿ ಪಾಠ ಕಲಿಸಿದೆ. ಕಾಗೆಯ ಗೂಡಿನಲ್ಲಿದ್ದ ಮೊಟ್ಟೆಯನ್ನು  ನಾಶಪಡಿಸಿದ್ದ ಕೋತಿಯ ಮೇಲೆ ಕಾಗೆಗಳ ಹಿಂಡು ದಾಳಿ  ಮಾಡಿದೆ.
ಮೊಟ್ಟೆ ನಾಶ ಮಾಡಿದ ಕಾರಣ ಕಾಗೆಗಳು ಕೋತಿಯನ್ನು ಬೆನ್ನು ಬಿಡದೆ ಕೊಕ್ಕಿನಲ್ಲಿ ಕುಕ್ಕಿದೆ.ಅಂದಹಾಗೆಯೇ ಮೂವಟ್ಟುಪುಳದಲ್ಲಿ ಈ ಘಟನೆ ನಡೆದಿದೆ. ಗೂಡಿನಲ್ಲಿದ್ದ ಮೊಟ್ಟೆಗಳನ್ನು ನಾಶಪಡಿಸಿದ ನಂತರ ಕೋತಿಯನ್ನು ಕಂಡು, ಕಾಗೆಗಳು ಮಂಗ ಹೋದಲ್ಲೆಲ್ಲಾ ಬೆನ್ನಟ್ಟಿವೆ. ಕಾಗೆಗಳ ದಾಳಿಯಿಂದ ಗಾಯಗೊಂಡಿರುವ ಕೋತಿ ಚಿಂತಾಜನಕ ಸ್ಥಿತಿಯಲ್ಲಿದೆ. ಮಾತ್ರವಲ್ಲದೆ, ಕಾಗೆಗಳ ದಾಳಿಯಿಂದ ಕೋತಿಗೆ ತಿನ್ನಲು, ಕುಡಿಯಲು ಸಾಧ್ಯವಾಗದಂತಾಗಿದೆ.ಕೋತಿಯ ಸ್ಥಿತಿ ಕಂಡು ಮೂವಟ್ಟುಪುಳ ಪ್ರಾಣಿಪ್ರಿಯರ ಸಂಘವು ಮಂಗನಿಗೆ ಆಹಾರ, ನೀರು ನೀಡಿ ಬದುಕಿಸಿದ್ದಾರೆ. ಮಕ್ಕಳ ಉದ್ಯಾನವನದ ಮುಂದೆ ಈ ಕೋತಿಯನ್ನು ಕಂಡು ಸ್ಥಳೀಯರು ಕೂಡ ಕೋತಿಗೆ ಆಹಾರ, ನೀರು, ಹಣ್ಣು, ಬ್ರೆಡ್, ನೀಡುತ್ತಿದ್ದಾರೆ.ಮೂವಟ್ಟುಪುಳವಿನಲ್ಲಿ ಉದ್ಯಾನವನವಿರುವ ಕಾರಣ ಹಗಲಿನಲ್ಲಿ ಇಲ್ಲಿಗೆ ಆಹಾರಕ್ಕಾಗಿ ಬರುವ ಮಂಗಗಳ ಹಿಂದೆ ಕಾಗೆಗಳು ಬರುತ್ತಿದ್ದವು. ಇದರೊಂದಿಗೆ ಸ್ಥಳೀಯರು ಸಂಘಟಿತರಾಗಿ ಕಾಗೆಗಳನ್ನು ಕಲ್ಲೆಸೆದು ಓಡಿಸಿದರು. ವಿವಿಧ ಪ್ರಾಣಿ ಸಂಘಗಳು ಕೋತಿಯ ರಕ್ಷಣೆ ಮಾಡುತ್ತಿದ್ದಾರೆ. ದೇಹದಾದ್ಯಂತ ಗಾಯಗೊಂಡಿದ್ದ ಕೋತಿಯನ್ನು ಹಿಡಿದು ಪ್ರಾಣಿ ಸಂಘದವರು ಕಾಡಿಗೆ ಬಿಡಲು ಯತ್ನಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ಶೀಘ್ರವೇ ಸ್ಥಳಕ್ಕೆ ಆಗಮಿಸಿ ಕೋತಿಯನ್ನು ಹಿಡಿಯುವುದಾಗಿ ಭರವಸೆ ನೀಡಿದ್ದಾರೆ.ಕೋತಿಗಳ   ಆಟ ಒಂದಲ್ಲ-ಎರಡಲ್ಲ, ಅವುಗಳ ಮನಸ್ಸು ಚಂಚಲ, ಆಡುವ ಆಟ ಮಾತ್ರ ಅತಿ ಭಯಂಕರ. ದೇಗುಲಗಳ ಬಳಿಯಲ್ಲಿ ಬಾಳೆ ಹಣ್ಣಿಗಾಗಿ, ಅಥವಾ ತಿನ್ನುವ ಪದಾರ್ಥಕ್ಕಾಗಿ ಕೋತಿಗಳು ಬರುವುದನ್ನು ನೋಡಿದ್ದೇವೆ. ಕಳೆದ ವರ್ಷ ಮಧ್ಯಪ್ರದೇಶದಲ್ಲೊಂದು ಐನಾತಿ ಕೋತಿ, ಒಂದು ಲಕ್ಷ ರೂಪಾಯಿಯನ್ನ ಎಗರಿಸಿಕೊಂಡು ಹೋಗಿದೆ. ಅರೇ, ಕೋತಿ ಹೇಗಪ್ಪ ದುಡ್ಡು ತೆಗೆದುಕೊಂಡು ಹೋಗುತ್ತೆ ಅಂತ ಕೇಳಬೇಡಿ. ಕೋತಿ ನೇರವಾಗಿ ಹಣವನ್ನು ಎತ್ತಿಕೊಂಡು ಹೋಗಿಲ್ಲ. ವ್ಯಕ್ತಿಯೊಬ್ಬ ತನ್ನ ಟವಲ್ ನಲ್ಲಿ ಒಂದು ಲಕ್ಷ ರೂಪಾಯಿಯನ್ನು ಸುತ್ತಿಟ್ಟಿದ್ದ. ಇದರ ಅರಿವಿರದ ಮಂಗಣ್ಣ ಈತನ ಟವಲ್ ಅನ್ನು ಎಗರಿಸಿಕೊಂಡು ಹೋಗಿದೆ. ಇತ್ತ ದುಡ್ಡು ಕಳೆದುಕೊಂಡ ಆಸಾಮಿ ಮಾತ್ರ ಬಾಯಿ ಬಿಡುತ್ತಾ ನೋಡಿಕೊಂಡು ಕೂತಿದ್ದ. ಕೋತಿ ಎಗರಿಸಿದ ಹಣವನ್ನು ಹಿಂಪಡೆಯಲು ವ್ಯಕ್ತಿ ಹರಸಾಹಸಪಟ್ಟರು. ಮೊದಲೇ ಕೇಳಬೇಕೆ ಕೋತಿ ಕೈಗೆ ಸಿಗದೆ ವ್ಯಕ್ತಿಯನ್ನು ಆಟ ಆಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BOX OFFICE:ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಬಾಲಿವುಡ್ನ 100 ಕೋಟಿ ಕ್ಲಬ್ಗೆ ಪಾದಾರ್ಪಣೆ;

Wed Feb 2 , 2022
ಪುಷ್ಪಾ: ದಿ ರೈಸ್ – ಭಾಗ 1 ಬಾಕ್ಸ್ ಆಫೀಸ್‌ನಲ್ಲಿ ಭಾರಿ ಅಲೆಯನ್ನು ಸೃಷ್ಟಿಸಿತು. ನಿಧಾನಗತಿಯ ಆರಂಭದ ನಂತರ ಚಿತ್ರದ ವ್ಯಾಪಾರವು ಚಿಮ್ಮಿ ರಭಸದಿಂದ ಬೆಳೆಯಿತು. ಥಿಯೇಟರ್‌ಗಳಿಗೆ ಪ್ರೇಕ್ಷಕರು ಮತ್ತು ವಿಮರ್ಶಕರು ಚಿತ್ರಕ್ಕೆ ಥಂಬ್ಸ್ ಅಪ್ ನೀಡುವುದರೊಂದಿಗೆ, ಪುಷ್ಪಾ ಬಾಕ್ಸ್ ಆಫೀಸ್‌ನಲ್ಲಿ ಮೂಲಾದಲ್ಲಿ ರಾರಾಜಿಸುತ್ತಿದೆ. ವಾಸ್ತವವಾಗಿ, ಚಿತ್ರವು ಇನ್ನೂ ಥಿಯೇಟರ್‌ಗಳಲ್ಲಿ ಓಡುವುದನ್ನು ಮುಂದುವರೆಸಿದೆ, ಸಾಂಕ್ರಾಮಿಕ ರೋಗದಿಂದಾಗಿ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳ ಬಿಡುಗಡೆಯನ್ನು ಮರುಹೊಂದಿಸಲು ನಿರ್ಧರಿಸಿದ್ದಾರೆ. ಕುತೂಹಲಕಾರಿಯಾಗಿ, ಪುಷ್ಪಾ: ದಿ […]

Advertisement

Wordpress Social Share Plugin powered by Ultimatelysocial