ಬಾಸ್ಮತಿಯೇತರ ಅಕ್ಕಿ ರಫ್ತು ಹೆಚ್ಚಳ

ಭಾರತದ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯ ರಫ್ತಿನಲ್ಲಿ ಕಳೆದ ಏಪ್ರಿಲ್-‌ ಅಕ್ಟೋಬರ್‌ ( Rice export ) ಅವಧಿಯಲ್ಲಿ ಏರಿಕೆಯಾಗಿದೆ.ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯ ರಫ್ತಿನಲ್ಲಿ 7.37% ಏರಿಕೆಯಾಗಿದ್ದು, 126.97 ಲಕ್ಷ ಟನ್ನುಗಳಿಗೆ ವೃದ್ಧಿಸಿದೆ.ಅಕ್ಕಿ ರಫ್ತು ಕುರಿತ ಕೆಲ ನಿರ್ಬಂಧಗಳ ಹೊರತಾಗಿಯೂ ರಫ್ತು ಚಟುವಟಿಕೆ ಸುಧಾರಿಸಿತ್ತು. 2021-22ರ ಇದೇ ಅವಧಿಯಲ್ಲಿ 118.25 ಲಕ್ಷ ಟನ್‌ ರಫ್ತು ನಡೆದಿತ್ತು.ಅಕ್ಕಿಯ ಕೆಲ ಪ್ರಭೇದಗಳ ರಫ್ತಿಗೆ ನಿರ್ಬಂಧ ಇದ್ದರೂ, ಒಟ್ಟಾರೆ ರಫ್ತು ಹೆಚ್ಚಳವಾಗಿತ್ತು ಎಂದು ಆಲ್‌ ಇಂಡಿಯಾ ಎಕ್ಸ್‌ ಪೋರ್ಟರ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ವಿಜಯ್‌ ಸೇಥಿಯಾ ತಿಳಿಸಿದ್ದಾರೆ. ಒಟ್ಟಾರೆ ಅಕ್ಕಿ ರಫ್ತಿನಲ್ಲಿ ಬಾಸ್ಮತಿ ಅಕ್ಕಿ ರಫ್ತು 24.97 ಲಕ್ಷ ಟನ್ನುಗಳಿಗೆ ಏರಿಕೆಯಾಗಿತ್ತು.ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮುದಾಯ ನೀಡಿರುವ ಡೆಡ್‌ಲೈನ್ ಇಂದು ಮುಕ್ತಾಯಗೊಳ್ಳುತ್ತಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬತ್ತ ಕುತೂಹಲ ಮೂಡಿದೆ.ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ‌ಚರ್ಚೆ ಬಳಿಕ ಮೀಸಲಾತಿ ಬಗ್ಗೆ ಸಿಎಂ ತೀರ್ಮಾನ ‌ಪ್ರಕಟಿಸುವ ಸಾಧ್ಯತೆ ಇದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸಂಜೆ ಐದಕ್ಕೆ ಸಚಿವ ಸಂಪುಟ ‌ಸಭೆ ನಿಗದಿಯಾಗಿದೆ. ಡಿಸೆಂಬರ್ 29ಕ್ಕೆ 2ಎ ಮೀಸಲಾತಿ ಘೋಷಿಸುವ ಭರವಸೆಯನ್ನು ಸಿಎಂ ನೀಡಿದ್ದರು.ಡಿ.‌22ರಂದು ಪಂಚಮಸಾಲಿ ಸಮಾಜದಿಂದ ಪಂಚಲಕ್ಷ ವಿರಾಟ್‌ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ 2 ಲಕ್ಷಕ್ಕಿಂತ ಅಧಿಕ ಪಂಚಮಸಾಲಿ ‌ಸಮುದಾಯದವರು ಪಾಲ್ಗೊಂಡಿದ್ದರು. ಅಂದು ಪಂಚಮಸಾಲಿ ‌ಶಾಸಕರ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸುವರ್ಣಸೌಧ ಮುತ್ತಿಗೆ ನಿರ್ಧಾರದಿಂದ ಸಮುದಾಯ ಹಿಂದೆ ಸರಿದಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ವೆಂಕಟರಾಜು ಮತ್ತು ಹೇಮಾವತಿ ದಂಪತಿಗಳಿಂದ ಕೋಟ್ಯಾಂತರ ಚೀಟಿ ಹಣ ವಂಚನೆ.

Thu Dec 29 , 2022
ನೂರಾರು ಜನರಿಂದ ಹಣ ಪಡೆದು ಪರಾರಿಯಾಗಿದ್ದ ದಂಪತಿ. ಕಾಟನ್ ಪೇಟೆ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ದಂಪತಿ. ಪ್ರತಿಬಾರಿ ಕೋರ್ಟ್ ಗೈರಾಗಿದ್ದ ದಂಪತಿಗಳು. ಕೋರ್ಟ್ ಜಾಮೀನ ಮೇಲೆ ಹೊರಗಿರುವ ಐನಾತಿ ದಂಪತಿಗಳು. ಇಂದು ಕೋರ್ಟ್ ಗೆ ಹಾಜರಾಗಿದ್ದ ಸಂದರ್ಭದಲ್ಲಿ ಜನರ ಕೈಗೆ ಲಾಕ್. ಚೀಟಿ ಹಣ ಮೋಸ ಮಾಡಿ ತಲೆಮರೆಸಿಕೊಂಡಿದ್ದ ದಂಪತಿ ಇಂದು ಜನರ ಕೈಯಲ್ಲಿ ಲಾಕ್. ಕೆಲ ವರ್ಷದ ಹಿಂದೆ ಚೀಟಿ ಹಣ ತೆಗೆದುಕೊಂಡು ಪರಾರಿಯಾಗಿದ್ದ ದಂಪತಿ. ಪೊಲೀಸರಿಂದ […]

Advertisement

Wordpress Social Share Plugin powered by Ultimatelysocial