ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​

ಇಸ್ಲಮಾಬಾದ್​: ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​) 2022 ಟೂರ್ನಿಯಲ್ಲಿ ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್​ ತಂಡದ ವೇಗಿ ಹ್ಯಾರೀಸ್​ ರೌಫ್​, ಸಹ ಆಟಗಾರ ಕಮ್ರಾನ್​ ಗುಲಾಮ್​​ ಕಪಾಳಕ್ಕೆ ಬಾರಿಸಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.ಸೋಮವಾರ (ಫೆ.22) ಪೇಶಾವರ್​ ಜಲ್ಮಿ ತಂಡದ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಕಮ್ರಾನ್​ ಗುಲಾಮ್​ ಕ್ಯಾಚ್​ ಬಿಟ್ಟಿದ್ದಕ್ಕೆ ಕೋಪಗೊಂಡ ಹ್ಯಾರೀಸ್​ ರೌಫ್​ ಕಪಾಳಕ್ಕೆ ಬಾರಿಸಿದರು.ರೌಫ್​ ಎಸೆದ ಓವರ್​ನಲ್ಲಿ ಪೇಶಾವರ ಜಲ್ಮಿ ತಂಡದ ಮೊಹಮ್ಮದ್​ ಹ್ಯಾರೀಸ್ ಬ್ಯಾಟ್​ ಬೀಸಿದರು. ಈ ವೇಳೆ ಚೆಂಡು​ ಬೌಂಡರಿ ಬಳಿಯಿದ್ದ ಕ್ಷೇತ್ರ ರಕ್ಷಕ ಗುಲಾಮ್​ ಕೈ ಸೇರುತ್ತದೆ. ವಿಕೆಟ್​ ಬಿದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ವೇಳೆ ರೌಫ್​, ಗುಲಾಮ್​ ಕೆನ್ನಗೆ ಜೋರಾಗಿ ಬಾರಿಸುತ್ತಾರೆ. ಆದರೆ, ಸ್ಪಲ್ಪವೂ ಕೋಪಗೊಳ್ಳದ ಗುಲಾಮ್​ ಕೂಲ್​ ಆಗಿಯೇ ಇರುತ್ತಾರೆ. ಆದರೆ, ರೌಫ್​ ಮಾತ್ರ ಉದ್ವೇಗಕ್ಕೆ ಒಳಗಾಗಿರುತ್ತಾರೆ.ರೌಫ್​, ಭಾವೋದ್ವೇಗಕ್ಕೆ ಒಳಗಾಗಲು ಕಾರಣವೇನೆಂದರೆ, ಅದೇ ಓವರ್​ನಲ್ಲಿ ಗುಲಾಮ್​ ಎದುರಾಳಿ ತಂಡದ ಆಟಗಾರ ಹಜರತುಲ್ಲಾ ಜಜಾಯ್​ ಕ್ಯಾಚ್​ ಬಿಟ್ಟಿರುತ್ತಾರೆ. ಈ ವೇಳೆ ರೌಫ್​, ಗುಲಾಮ್​ ಕಡೆಗೆ ಕೆಂಗಣ್ಣ ಬೀರಿರುತ್ತಾರೆ.ರೌಫ್​ ಕಪಾಳಕ್ಕೆ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ರೌಫ್​ ವರ್ತನೆ ನೋಡಿ ಕೋಪಗೊಂಡಿರುವ ಪಾಕ್​ ಕ್ರೀಡಾಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ವರ್ತನೆ ಒಳ್ಳೆಯ ಆಟಗಾರನ ಲಕ್ಷಣವಲ್ಲ ಎಂದು ಜರಿದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ನ ರಕ್ಷಣಾ-ಕೈಗಾರಿಕಾ ಸಂಕೀರ್ಣದಲ್ಲಿ ಚೀನಾ ಆಸಕ್ತಿ ಹೊಂದಿದೆ!!

Tue Feb 22 , 2022
ಉಕ್ರೇನಿಯನ್ ವಾಯುಯಾನ ಕಂಪನಿ ಮೋಟಾರ್ ಸಿಚ್‌ನಲ್ಲಿ ಪ್ರಮುಖ ಪಾಲನ್ನು ಖರೀದಿಸುವ ಚೀನಾದ ಬಿಡ್ ಅನ್ನು ಉಕ್ರೇನ್ ತಿರಸ್ಕರಿಸಿದಾಗಿನಿಂದ ಮತ್ತು ಒಪ್ಪಂದದಲ್ಲಿ ಭಾಗಿಯಾಗಿರುವ ಚೀನಾದ ವ್ಯಕ್ತಿಗಳು ಮತ್ತು ಘಟಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗಿನಿಂದ, ಬೀಜಿಂಗ್ ಉಕ್ರೇನಿಯನ್ ಮಿಲಿಟರಿ ತಂತ್ರಜ್ಞಾನವನ್ನು ಪಡೆಯಲು ರಹಸ್ಯ ತಂತ್ರಗಳನ್ನು ಬಳಸಿದೆ ಎಂದು ವರದಿಯಾಗಿದೆ. ಉಕ್ರೇನ್‌ನಿಂದ ಟ್ಯಾಂಕ್ ಇಂಜಿನ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಆಸಕ್ತಿ ಹೊಂದಿರುವ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನೊಂದಿಗೆ ಚೀನಾವು ತಂತ್ರಜ್ಞಾನ ಕಳ್ಳತನವನ್ನು ನಡೆಸುತ್ತಿದೆ […]

Advertisement

Wordpress Social Share Plugin powered by Ultimatelysocial