ನ್ಯಾಟೋ ಕಣ್ಗಾವಲು ಪಡೆಯ ಹೆಲಿಕ್ಯಾಪ್ಟರ್ ಮಿಸ್ಸಿಂಗ್

ಕೆನಡಾದ ನ್ಯಾಟೋ ಕಣ್ಗಾವಲು ಪಡೆಯ ಮಿಲಿಟರಿ ಹೆಲಿಕ್ಯಾಪ್ಟರ್ ಕಾಣೆಯಾಗಿದೆ ಎಂದು ಕೆನಡಾ ಸಶಸ್ತ್ರ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿ ಮತ್ತು ಗ್ರೀಸ್ ನಡುವಿನ ಸಮುದ್ರದ ಮೇಲೆ ಗಸ್ತು ಕೆಲಸ ನಿರ್ವಹಿಸುತ್ತಿತ್ತು. ಇದೇ ವೇಳೆ ಕಾರ್ಯಾಚರಣೆಯಲ್ಲಿ ಕಣ್ಮರೆಯಾಗಿದೆ ಎನ್ನಲಾಗಿದೆ. ಈ ಹೆಲಿಕ್ಯಾಪ್ಟರನ್ನು ಕೆನಡಾದ ಫ್ರೀಗೇಟ್ ಫ್ರೆಡೆರಿಕ್ಟನ್ ಗೆ ನಿಯೋಜನೆ ಮಾಡಲಾಗಿತ್ತು. ‘ನಮ್ಮ ಸಿಹೆಚ್-೧೪೮ ಸೈಕ್ಲೋನ್ ಹೆಲಿಕಾಪ್ಟರಗಳನ್ನು ಗುಣಮಟ್ಟ ಅಭಿವೃದ್ದಿ ಮಾಡುವ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಎಂಸಿಎಸ್ ಫ್ರೆಡೆರಿಕ್ಟನಲ್ಲಿ ನಿಯೋಜನೆ ಮಾಡಿದ್ವಿ. ಸದ್ಯ ನ್ಯಾಟೋ ನಮ್ಮ ಸೈನ್ಯಕ್ಕೆ ಕೊಡುಗೆ ನೀಡುತ್ತಿದೆ ಎಂದು ಕೆನಡಾ ಸಶಸ್ತ್ರ ಪಡೆಗಳು ಹೇಳಿಕೆ ನೀಡಿವೆ. ಸದ್ಯ ಗ್ರೀಸ್ನ ಕರಾವಳಿ ಪ್ರದೇಶದಲ್ಲಿ ಹೆಲಿಕಾಪ್ಟರ್ ತನ್ನ ಸಂಪರ್ಕ ಕಳೆದುಕೊಂಡಿದೆ. ಈಗಾಗಲೇ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

 

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಲವರ್ ಬಾಯ್ ರಿಷಿ ಕಪೂರ್ ಬೆಳೆದು ಬಂದ ಹಾದಿ..!

Thu Apr 30 , 2020
ಬಾಲಿವುಡ್ ನ ಲವರ್ ಬಾಯ್ ರಿಷಿ ಕಪೂರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದ ನಟ ರಿಷಿ ಕಪೂರ್ ಮುಂಬೈನಲ್ಲಿ ವಿಧಿವಶವಾಗಿದ್ದಾರೆ. ಹಿಂದಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದ ರಿಷಿ ಕುಮಾರ್ ಬಹು ದೊಡ್ಡ ನಟನಾಗಿ ಬೆಳೆದವರು.. ಅವರಿಗೆ ಕನ್ನಡ ನಂಟು ಇತ್ತು ಅನ್ನೋದು ವಿಶೇಷ. ಬಹಳ ವರ್ಷಗಳ ಹಿಂದೆ ಕನ್ನಡದಲ್ಲಿ ಹಿಟ್ ಆಗಿದ್ದ ನಾಗರಹಾವು ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಯಿತು. ಹಿಂದಿಯಲ್ಲಿ ಜಹ್ರೀಲಾ ಇನ್ಸಾನ್ ಅಂತ ಟೈಟಲ್ ಫಿಕ್ಸ್ […]

Advertisement

Wordpress Social Share Plugin powered by Ultimatelysocial