ಕೈವ್‌ನಲ್ಲಿ ಹೆಲಿಕಾಪ್ಟರ್ ಪತನ, ಉಕ್ರೇನ್‌ನ ಆಂತರಿಕ ಸಚಿವ ಸೇರಿ 16 ಮಂದಿ ಸಾವು.

ಕೈವ್‌: ಉಕ್ರೇನ್‌ನ ರಾಜಧಾನಿ ಕೈವ್‌ ಹೊರಗಿನ ಶಿಶುವಿಹಾರದ ಬಳಿ ಇಂದು ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಗವರ್ನರ್ ತಿಳಿಸಿದ್ದಾರೆ.

ಸತ್ತವರಲ್ಲಿ ಉಕ್ರೇನ್‌ನ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಇತರ ಅಧಿಕಾರಿಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಹಲವರು ರೋಧಿಸುತ್ತಿರುವುದು ಕೇಳಿ ಬರುತ್ತಿದೆ.

ಬ್ರೋವರಿ ನಗರದಲ್ಲಿ, ಶಿಶುವಿಹಾರ ಮತ್ತು ವಸತಿ ಕಟ್ಟಡದ ಬಳಿ ಹೆಲಿಕಾಪ್ಟರ್ ಬಿದ್ದಿದೆ ಎಂದು ಕೈವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಕ್ಸಿ ಕುಲೆಬಾ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ದುರಂತದ ಸಮಯದಲ್ಲಿ, ಮಕ್ಕಳು ಮತ್ತು ಉದ್ಯೋಗಿಗಳು ಶಿಶುವಿಹಾರದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸಪೇಟೆ ಉದ್ಯಮಿಯ ಪುತ್ರಿಯಿಂದ ಸನ್ಯಾಸತ್ವ ಸ್ವೀಕಾರ.

Wed Jan 18 , 2023
ವಿಜಯನಗರ: ಜೈನ ಸಮುದಾಯ ದ ಯುವತಿ ಮುಮುಕ್ಷಾ ವಿಧಿ ಕುಮಾರಿ ಇಂದು (ಜ.18) ಮಹಾವೀರ ಜೈನ ಸನ್ಯಾಸ ದೀಕ್ಷೆ  ಸ್ವೀಕರಿಸಲಿದ್ದಾರೆ. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ದೀಕ್ಷಾ ಕಾರ್ಯಕ್ರಮ‌ ಹೊಟೇಲ್ ಮಲ್ಲಿಗೆಯಲ್ಲಿ ನಡೆಯಲಿದೆ. ಹೊಸಪೇಟೆ ಯ ಉದ್ಯಮಿಯಾದ ದಿವಂಗತ ಕಾಂತಿಲಾಲಾ ಜಿ ಜಿರಾವಲಾ ಮತ್ತು ರೇಖಾದೇವಿ ಜಿರಾವಲಾ ದಂಪತಿಯ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ ಮೂರನೇಯವರು. 10ನೇ ತರಗತಿಯಲ್ಲಿ ಶೇ.94.8, ಪಿಯುಸಿಯಲ್ಲಿ ಶೇ.99 ರಷ್ಟು ಫಲಿತಾಂಶ ಪಡೆದಿದ್ದು, ಪ್ರತಿಭಾನ್ವಿತ […]

Advertisement

Wordpress Social Share Plugin powered by Ultimatelysocial