ಮಹಾರಾಷ್ಟ್ರ: ದೇಶದಲ್ಲಿ ಡೆಡ್ಲಿ ವೈರಸ್ ಕೊರೊನಾ ಆರ್ಭಟ ಜೋರಾಗಿದೆ. ಅತಿ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿವೆ. ಇದರ ಮಧ್ಯೆ ಅಲ್ಲಿನ ಸರ್ಕಾರ ಮಹತ್ವದ ಆದೇಶ ಹೊರಹಾಕಿದೆ. ರಾಜ್ಯದಲ್ಲಿನ ಎಲ್ಲರಿಗೂ ಉಚಿತ ಆರೋಗ್ಯ ವಿಮೆ ಮಾಡಿಸಲು ನಿರ್ಧಾರ ಕೈಗೊಂಡಿರುವ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ, ಮಹಾತ್ಮ ಜ್ಯೋತಿಬಾ ಪುಲೆ ಜನ್ ಆರೋಗ್ಯ ಯೋಜನೆ ಅಡಿ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ […]

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವಿಪರೀತವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ  ಕೊರೋನಾ ಪರೀಕ್ಷಾ ಬಸ್ ಅನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಬಸ್ ಅನ್ನು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ, ಆದಿತ್ಯ ಠಾಕ್ರೆ ಮತ್ತು ರ‍್ವೀನ್ ಪರದೇಶಿ ಉದ್ಘಾಟಿಸಿದರು.   ಕೊರೊನಾವೈರಸ್ ಅನ್ನು ಪತ್ತೆಹಚ್ಚಲು ಜ್ವರ, ಔ೨ ಸ್ಯಾಚುರೇಶನ್ ಮತ್ತು ಎಐ ಆಧಾರಿತ ಎಕ್ಸರೆಗಳ ಸಂಯೋಜನೆಯನ್ನು ಬಳಸಿಕೊಂಡು ಸಾಮೂಹಿಕ ತಪಾಸಣೆಗಾಗಿ ಈ ಬಸ್ ರಚನೆ ಮಾಡಲಾಗಿದೆ. ಬಸ್ನಲ್ಲಿ ಹೆಚ್ಚುವರಿ […]

ಚೆನ್ನ್ಯೆ:ಕೊರೊನಾ ಲಾಕ್‌ಡೌನ್ ಬೆನ್ನಲ್ಲೇ ಇಂದಿನಿಂದ ಬ್ಯಾಂಕಿಂಗ್ ಹಾಗೂ ಎಟಿಎಂ ಸಂಬಂಧಿಸಿದಂತೆ ಕೆಲವು ಹೊಸ ಬದಲಾವಣೆ ಆಗಲಿವೆ. ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂದಿನಿಂದ ಎಟಿಎಂ ಮಷಿನ್‌ಗಳನ್ನು ಪ್ರತಿ ಬಾರಿ ಬಳಕೆ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ಈಗಾಗಲೇ ಈ ಕ್ರಮವನ್ನು ಉತ್ತರ ಪ್ರದೇಶದ ಘಾಜಿಯಾಬಾದ್, ತಮಿಳುನಾಡಿನ ಚೆನ್ನ್ಯೆನಲ್ಲಿ ಜಾರಿಗೆ ತರಲಾಗಿದೆ. ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ಎಟಿಎಂ ಕೇಂದ್ರವನ್ನೇ ಸೀಲ್‌ಡೌನ್ ಮಾಡಲಾಗುತ್ತದೆ. ಇಂದಿನಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಉಳಿತಾಯ […]

ತಿರುವನಂತಪುರಂ (ಕೇರಳ): ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ ದಂಡ ಬೀಳೋದು ಗ್ಯಾರೆಂಟಿ. ಆದರೆ ಕೇರಳದ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವೈನಾಡುವಿನ ಅಂಗಡಿಗಳಲ್ಲಿ ಸೋಪ್ ಹಾಗೂ ಸ್ಯಾನಿಟೈಸರ್ ಇಲ್ಲದೇ ಇದ್ದರೆ ದಂಡ ಹಾಕುವುದಾಗಿ ಅಲ್ಲಿನ ಎಸ್‌ಪಿ ಆರ್.ಇಳಂಗೋ ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್ ಧರಿಸಿದೇ ಇದ್ದರೆ ೫ ಸಾವಿರ ರೂಪಾಯಿ ಹಾಗೂ ಅಂಗಡಿಗಳಲ್ಲಿ ಸೋಪು, ಸ್ಯಾನಿಟೈಸರ್ ಇಡದೇ ಇದ್ದರೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಜಿಲ್ಲಾಡಳಿತ […]

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಬಳಕೆ ಮಾಡುವ ಪಿಪಿಇ ಕಿಟ್‌ಗಳನ್ನು ತಯಾರಿಸಲು ನೈರುತ್ಯ ರೈಲ್ವೆ ಇಲಾಖೆ ಮುಂದಾಗಿದೆ. ಪಿಪಿಇ ಕಿಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಡಿಆರ್‌ಡಿಓ ಸೂಚನೆ ಮೆರೆಗೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ಮತ್ತು ಮೈಸೂರು ವರ್ಕ್ಶಾಪ್‌ಗಳಲ್ಲಿ ಕೊರೊನಾ ವಾರಿಯರ್ಸ್ಗೆ ರಕ್ಷಣೆ ನೀಡುವ ವೈಯಕ್ತಿಕ ಕಿಟ್ ತಯಾರಿಸಲಾಗುತ್ತಿದ್ದು, ಇದುವರೆಗೂ ಹುಬ್ಬಳ್ಳಿ ೪೫೦, ಮೈಸೂರಲ್ಲಿ ೨೦೦ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು ೨೦ ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕೊರೊನಾ ಪರೀಕ್ಷೆಗಾಗಿ ಚೀನಾದಿಂದ ಭಾರತಕ್ಕೆ ಬಂದ ವೈದ್ಯಕೀಯ ಸಲಕರಣೆಗಳು ನಕಲಿಯಾದವು, ಮತ್ತು ಅವುಗಳು ರೋಗ ಪರೀಕ್ಷೆಯಲ್ಲಿ ನಂಬಲರ್ಹವಾದ ಫಲಿತಾಂಶವನ್ನು ತೋರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಇದನ್ನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕೂಡ ಗಂಭೀರವಾಗಿ ಪರಿಗಣಿಸಿ ಚೀನಾದಿಂದ ಬಂದ ಪರೀಕ್ಷಾ ಸಾಧನಗಳು ಬಳಕೆಗೆ ಯೋಗ್ಯವೋ ಅಲ್ಲವೋ ಎನ್ನುವ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಲೇ ಇತ್ತು. ಇದೀಗ   ICMR ರಾಜ್ಯ ಸರ್ಕಾರಗಳಿಗೆ ಆ್ಯಂಟಿ ಬಾಡಿ ಬ್ಲಡ್ ಟೆಸ್ಟ್ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಹೊರಡಿಸಿದ್ದು  […]

ನವದೆಹಲಿ: ಕೊರೊನಾ ವೈರಸ್ ಭೀತಿಯಲ್ಲಿ ಇರುವ ಜನರಿಗೆ ಅದರ ವಿರುದ್ಧ ಹೋರಾಡಲು ಪತ್ತೆಹಚ್ಚುವ ಉತ್ತಮ ಪರೀಕ್ಷಾ ಸೌಲಭ್ಯಗಳು ಇಲ್ಲದೇ ಹೋದರೆ ಕೋವಿಡ್-೧೯ ಸವಾಲುಗಳನ್ನು ಜಯಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚೀನಾ: ಜಾಗತಿಕ ಮಹಾಮಾರಿ ಕೊರೊನಾ ವೈರಸ್‌ನ ಉಗಮ ಸ್ಥಾನ ವುಹಾನ್‌ನ ಯಾವುದೇ ಆಸ್ಪತ್ರೆಯಲ್ಲೂ ಈಗ ಕೊರೊನಾ ವೈರಸ್‌ನ ಸೋಂಕಿತರಿಲ್ಲ. ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಏ. ೨೬ರ ಹೊತ್ತಿಗೆ ವುಹಾನ್‌ನಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ಈ ಹಂತಕ್ಕೆ ನಿಯಂತ್ರಿಸಲು ಶ್ರಮಿಸಿದ ವುಹಾನ್ ಮತ್ತು ಅಲ್ಲಿನ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಹೇಳಿದ್ದಾರೆ.

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಿಳಿಸುವ ಯಂತ್ರವನ್ನು ಐಐಟಿ ಸಂಶೋಧಕರು ತಯಾರಿಸಿದ್ದಾರೆ. ದೆಹಲಿ ಐಐಟಿಯ ಪ್ರೊಫೆಸರ್ ಅನೂಪ್ ಕೃಷ್ಣನ್ ಮತ್ತು ತಂಡ ಸೇರಿಕೊಂಡು ಪ್ರಕ್ರಿತಿ(pracriti) ವೆಬ್ ಆಧಾರಿತ ಡ್ಯಾಶ್‌ಬೋರ್ಡ್ಅನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಆರೋಗ್ಯ ಸಚಿವಾಲಯ, ಡಬ್ಲ್ಯೂಹೆಚ್‌ಒ, ಸರ್ಕಾರ ನೀಡಿದ ಮಾಹಿತಿ ಮೇರೆಗೆ ರಾಜ್ಯ ಹಾಗೂ ಜಿಲ್ಲೆಗಳನುಸಾರ ಕೊರೊನಾ ಸೋಂಕಿತರ ಪ್ರಮಾಣ ದರವನ್ನು ಪತ್ತೆ ಹಚ್ಚಬಹುದಾಗಿದೆ.  ಪ್ರಕ್ರಿತಿ ಎಂದರೆ ಪ್ರಿಡಿಕ್ಷನ್ ಅಂಡ್ ಅಸೆಸ್‌ಮೆಂಟ್ ಆಫ್ ಕೊರೊನಾ ಇನ್ಫೇಕ್ಷನ್ಸ್ ಅಂಡ್ […]

ನವದೆಹಲಿ: ಲಾಕ್‌ಡೌನ್ ವೇಳೆ ತಮ್ಮ ಆರೋಗ್ಯ ಹದಗೆಡುತ್ತಿದೆ ಮತ್ತು ಯುವಜನತೆ ಜತೆಗೆನ ಸಂಬಂಧ ಹಾಳಾಗುತ್ತಿದೆ ಎಂದು ವೃದ್ಧರು ಭಾವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದರ ಜೊತೆಗೆ ಮಗ, ಮಗಳ ಜತೆಗೆನ ಸಂಬಂಧ ಹಾಳುಗುತ್ತಿದೆ ಎನ್ನುತ್ತಿದ್ದಾರೆ. ಏಜ್‌ವೆಲ್ ಫೌಂಡೇಶನ್ ಸಂಸ್ಥೆಯು ದೂರವಾಣಿ ಮೂಲಕ ೫,೦೦೦ ವೃದ್ಧರನ್ನು ಸಮೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಪ್ರತಿ ಇಬ್ಬರಲ್ಲೊಬ್ಬರಂತೆ ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ, ಬೆದರಿಕೆ, ನಿರ್ಲಕ್ಷ್ಯ, ಪ್ರತ್ಯೇಕವಾಸದ ಆರೋಪ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಏಂಕಾಗಿಯಾಗಿ […]

Advertisement

Wordpress Social Share Plugin powered by Ultimatelysocial