ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 5 ಲಕ್ಷ ಗಡಿ ದಾಟುತ್ತಿದೆ.ಈ ಕುರಿತು ಕೇಂದ್ರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೌದು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ.  ದೇಶದ ಹೊಸ ಭಾಗಗಳಿಗೂ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು, ಪ್ರಧಾನಿ ಮೋದಿ ಮೌನವಾಗಿದ್ದಾರೆ. ಅದರ ವಿರುದ್ಧ ಹೋರಾಟವನ್ನು ನಿರಾಕರಿಸಿ ಶರಣಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.    

ಕಳೆದ 21 ದಿನಗಳಿಂದ ಸತತವಾಗಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ ಬೆಲೆ ಏರಿಕೆಯನ್ನು ಖಂಡಿಸಿರುವ NSUI ಇಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಶವದಂತೆ ಬೈಕ್ ಹೊತ್ತು ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ಹಾಗೆಯೇ NSUI ರಾಜ್ಯಾಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಬೈಕ್ ಗೆ ಶವದಂತೆ ಸಂಸ್ಕಾರ ಮಾಡಿ ಕೊನೆಗೆ ಬೆಂಕಿ ಹಚ್ಚಿ ಬೈಕನ್ನು […]

ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿಯ ಮುಂಗಟ್ಟುಗಳು ಸಂಸ್ಥೆಗಳು ಹಾಗೂ ಇತರೆ ಮಳಿಗೆಗಳು ಕಟ್ಟುನಿಟ್ಟಾಗಿ ಮಾಸ್ಕ್ , ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು ಮಳಿಗೆಗಳ ಮುಂದೆ ಜನಸಂದಣಿ ಧೂಮಪಾನ, ಸೇರಿದಂತೆ, ಸುಖಾಸುಮ್ಮನೆ ನಿಂತಿರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಮಳಿಗೆ ಮಾಲೀಕರುಇದರ ಬಗ್ಗೆ ಗಮನಹರಿಸಬೇಕು. ಸೋಂಕು ಹರಡದಂತೆ ತಮ್ಮ ಜವಾಬ್ದಾರಿಯನ್ನು ನಡೆಯಬೇಕಾಗಿದೆ ಎಂದು […]

ಇನ್ಮುಂದೆ ಬೆಂಗಳೂರಿಗರು ಚಿಂತಿಸುವ ಅಗತ್ಯವಿಲ್ಲ ಪ್ರತೀ ಎರಡು ವಾರ್ಡ್ ಗಳಿಗೆ ಒಂದೊಂದು ಆ್ಯಂಬುಲೆನ್ಸ್ ಗಳನ್ನು ಮೀಸಲಿಡಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದಿನಕಳೆದಂತೆ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದೇ ರೋಗಿಗಳು ಪರದಾಡುತ್ತಿರುವ ಸುದ್ದಿಗಳ ನಡುವೆಯೇ ಕಂದಾಯ ಸಚಿವ ಈ ಸಂಬಂಧ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಡ್‌ ದೃಢಪಟ್ಟ ರೋಗಿಗಳು ಕಾಯುವ ಸ್ಥಿತಿ ಬರಬಾರದೆಂದು ಹೇಳಿದ್ದಾರೆ. ಹಾಗೂ ತಪಾಸಣಾ ವರದಿ ಬಂದ 6–8 […]

ಕರ್ತವ್ಯ ನಿರತದಲ್ಲಿದ್ದಾಗ ಕಿಲ್ಲರ್ ಕೊರೊನಾ ಸೋಂಕು ತಗುಲಿ ಮೃತಪಟ್ಟವರಿಗೆ ಪೋಲಿಸ್ ಇಲಾಖೆಯು 30 ಲಕ್ಷ ರೂಪಾಯಿಗಳ ಧನಸಹಾಯವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಕಲಾಸಿಪಾಳ್ಯ ಠಾಣೆಯ ಹೆಚ್ ಸಿ ಬೇಲೂರಯ್ಯ,ವಿವಿ ಪುರಂ ಠಾಣೆಯ ಎ ಎಸ್ ಐ ಶಿವಣ್ಣ, ಹಾಗೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಕಲ್ಕಯ್ಯ ಹಿರೇಮಠ್ ಮೃತಪಟ್ಟ ಪೋಲಿಸ್ ಸಿಬ್ಬಂದಿಗಳು. ಈ ಸಂಧರ್ಭದಲ್ಲಿ ಗೃಹ ಸಚಿವರು ಮತ್ತು ಪೋಲಿಸ್ ಇಲಾಖೆ ಮುಖ್ಯಸ್ಥರಾದ ಡಿಜಿ ಅಂಡ್ ಐಜಿಪಿ ಶ್ರೀ […]

ರಾಜ್ಯದಲ್ಲಿ ಕೊರೊನಾ ವೈರಸ್ ದಿನೇ ದಿನೇ ತನ್ನ ಕಬಂದ ಬಾಹು ಹರಡುತ್ತಿದ್ದು, ಸೋಂಕಿಗೆ ತುತ್ತಾದವರು ಭೀತಿಗೊಳಗಾಗಿ ದಯವಿಟ್ಟು ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ ಎಂದು ಕಮೀಷನರ್ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯಿಂದ ದಯವಿಟ್ಟು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಕೊರೊನಾ ಭಯದಿಂದ ಇಂದು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮುನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಸೋಂಕಿತ […]

ಬೆಂಗಳೂರು ಹಾಗು ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಜಂಟಿ‌ ಕಾರ್ಯಾಚರಣೆ ನಡೆಸಿದ್ದಾರೆ. ಎಂಡಿಎಂಎ ಟ್ಯಾಬ್ಲೆಟ್ ಆರ್ಡರ್ ಮಾಡಿದ್ದ ಭಾರತೀಯ ಮೂಲದ ಮಲೇಷಿಯನ್ ಪ್ರಜೆಯನ್ನ ಬಂಧಿಸಿದ್ದಾರೆ. ಕವಿ ಕುಮಾರ್ (25) ಬಂಧಿತ ಆರೊಪಿ. ವೃತ್ತಿಯಲ್ಲಿ ಬೆಂಗಳೂರಿನ ಅಮೇಜಾನ್ ಘಟಕದಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿ ಕೆಲಸ ಮಾಡ್ತಿದ್ದ. ಲಾಕ್ ಡೌನ್ ನಿಂದ ಚೆನ್ನೈಗೆ ಹೋಗಲಾರದೆ ಕೋರಮಂಗಲದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ. ಇದೇ ಸಮಯದಲ್ಲಿ ಜರ್ಮನಿಯಿಂದ ಎಂಡಿಎಂಎ ಟ್ಯಾಬ್ಲೆಟ್ ಗಾಗಿ ಆರ್ಡರ್ ಮಾಡಿದ್ದಾನೆ. ಆದ್ರೆ […]

ರಾಜ್ಯದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಇದರಿಂದಾಗಿ ಲಾಕ್‌ ಡೌನ್‌ ಘೋಷಣೆ ಮಾಡಲಾಗಿತ್ತು. ಇದರ ಪರಿಣಾಮ ಸರ್ಕಾರಕ್ಕೆ ಆದಾಯದ ಕೊರತೆಯಾಗಿದ್ದು ಮಿತವ್ಯಯ ಸಾಧಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದೇನೆಂದರೆ ಸರ್ಕಾರಿ ನೌಕರರಿಗೆ ವರ್ಗಾವಣೆ ಪ್ರಕ್ರಿಯೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಬ್ರೇಕ್‌ ಹಾಕಲಾಗಿದ್ದು, ವಿಶೇಷ ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಸರ್ಕಾರಿ ನೌಕರರ ವರ್ಗಾವಣೆ ಮಾಡಬಹುದೆಂದು ತಿಳಿಸಲಾಗಿದೆ. ಅಲ್ಲದೇ ಬಹಳಷ್ಟು ಸರ್ಕಾರಿ ನೌಕರರು […]

ರಾಜ್ಯದಾದ್ಯಂತ ಇಂದು ಮಾಸ್ಕ್ ದಿನಾಚರೆಣೆಗೆ ಬಿ.ಬಿ.ಎಂ.ಪಿ. ಹಾಗೂ ಆರೋಗ್ಯ ಇಲಾಖೆ ವತಿಯಿಂದ ಚಾಲನೆ ನೀಡಿದ ಮುಖ್ಯಮಂತ್ರಿಗಳು ವಿಧಾನಸೌಧದಿಂದ ಕಬ್ಬನ್ ಪಾರ್ಕ್ ವರೆಗೂ ಪಾದಯಾತ್ರೆ ಮಾಡಿ ಎಲ್ಲಾ ಜಿಲ್ಲೆಗಳಲ್ಲೂ ಮಾಸ್ಕ್ ದಿನವನ್ನು ಆಚರಿಸಲಾಗುತ್ತಿದ್ದು, ಪಾದಯಾತ್ರೆ ವೇಳೆ ಮಾಸ್ಕ್ ಧರಿಸುವುದು ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್-19 ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ […]

ಕೋವಿಡ್‌-19 ಹಿನ್ನೆಲೆಯಲ್ಲಿ ನಾನಾ ಉದ್ಯಮಗಳು ಸೊರಗಿವೆ, ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಜೂನ್ 20 ರಿಂದ ಜುಲೈ 7ರವರೆಗೆ 205 ಕಾರ್ನರ್ ಸೈಟ್ ಗಳ ಇ-ಹರಾಜು ನಡೆಯಲಿದೆ ಎಂದು ಬಿಡಿಎ ಆಯುಕ್ತ ಎಚ್ ಆರ್ ಮಹಾದೇವ್ ಹೇಳಿದ್ದಾರೆ, ಈ ಸಂಬಂಧ ಕುರಿತು ಇಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಪ್ರಾಧಿಕಾರ ನಿರ್ಮಿಸಿರುವ ಬನಶಂಕರಿ ಲೇಔಟ್‌, ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ನಾನಾ ಬಡಾವಣೆಗಳಲ್ಲಿರುವ ಒಟ್ಟು 205 ಮೂಲೆ ನಿವೇಶನಗಳನ್ನು […]

Advertisement

Wordpress Social Share Plugin powered by Ultimatelysocial