ಒಡಿಶಾದಲ್ಲಿ ಸೋನು ಸೂದ್ರ ಪೋಸ್ಟರ್‌ ಒಂದನ್ನು ಹಾಕಿ ಅವರ ಅಭಿಮಾನಿಗಳು, ‘ಕೊರೋನಾ ಫೈಟರ್‌ ಕಿಂಗ್ ಸೋನು ಸೂದ್’ ಎಂದು ಮೆಚ್ಚುಗೆಯ ಕ್ಯಾಪ್ಷನ್ ಹಾಕಿದ್ದಾರೆ. ಹೌದು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ತೆರಳಲು ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರ ರಿಯಲ್ ಲೈಫ್ ಹೀರೊ ಆಗಿದ್ದಾರೆ. ಅವರ ಈ ಸತ್ಕಾರ್ಯಕ್ಕೆ ಇಡೀ ದೇಶವೇ ಮೆಚ್ಚಿಕೊಂಡಿದೆ. ಸೋನು ಜೊತೆಗೆ ಒಡಿಶಾ ನಟರಾದ ಸಬ್ಯಸಾಚಿ […]

ಕೊವಿಡ್-19 ರೋಗದ ಹಿನ್ನೆಲೆಯಲ್ಲಿ ಜೂ.18ರಂದು ನಿಗದಿಯಾಗಿರುವ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗಾಗಿ ಜಿಲ್ಲಾಡಳಿತ ಸರ್ವ ಸಿದ್ದತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ 18 ಪರೀಕ್ಷಾ ಕೇಂದ್ರಗಳಿಗೆ ನಗರಸಭೆ ಪಟ್ಟಣ ಪಂಚಾಯ್ತಿ ಪುರಸಭೆ ಗ್ರಾಮ ಪಂಚಾಯ್ತಿಗಳ ಮೂಲಕ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 13892 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ 792 ವಿದ್ಯಾರ್ಥಿಗಳು ಹೊರಜಿಲ್ಲೆಯಲ್ಲಿ ಓದುತ್ತಿದ್ದು ಆ ವಿದ್ಯಾರ್ಥಿಗಳು […]

ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 6720 ಕ್ಕೆ ಏರಿಕೆಯಾಗಿದೆ, 88 ಜನರು ಇದುವರೆಗೂ ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3119. ಈ ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಆಂಧ್ರಪ್ರದೇಶದಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ಕೊರೊನಾ ಸಂದರ್ಭದಲ್ಲಿ ಅಧಿವೇಶನ ನಡೆಸುತ್ತಿರುವ ಮೊದಲ ರಾಜ್ಯ ಇದಾಗಿದ್ದು. ಜೂನ್ 30ರೊಳಗೆ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತದೆ. ರಾಜ್ಯಪಾಲ ಬಿಸ್ವಾ ಭೂಷಣ್‌ ಹರಿಚಂದನ್‌ ವಿಧಾನಸಭೆಯ ಉಭಯ ಕಲಾಪಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ […]

ದೇಶದಲ್ಲಿ ಕೊರೊನಾ ವೈರಸ್ ಮಾಹಮಾರಿ ವಕ್ಕರಿಸುತ್ತಿದೆ ಕಳೆದ 24 ಗಂಟೆಯಲ್ಲಿ 10,667 ಮಂದಿಗೆ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,43,091 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 380 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ. ಹಾಗೂ 1,80,013 ಜನರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಇನ್ನೂ ಉಳಿದ 1,53,178 ರೋಗಿಗಳು ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಶದಲ್ಲಿ ಒಟ್ಟು ಇವರಗೆ 9,900 ಜನರು ಕೊರೊನಾ ಬಲಿಯಾಗಿದ್ದಾರೆ.    

ದೇಶದ್ಯಾಂತ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ದೆಹಲಿ ಆಸ್ಪತ್ರೆಗಳ ವ್ಯವಸ್ಥೆಯ ಕುರಿತು ಸುಪ್ರೀಂಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ  ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟುವುದು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೇಗವನ್ನು ಹೆಚ್ಚಿಸುವುದು ಸೇರಿದಂತೆ ದೆಹಲಿಯಲ್ಲಿ ಕೋವಿಡ್-19 ರೋಗಿಗಳಾಗಿಯೇ ವಿಶೇಷ ಅಸ್ಪತ್ರೆ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ […]

ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಕುರಿತಂತೆ ಮೂರು ದಿನಗಳಲ್ಲಿ ವಿವರವಾದ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರಕರಣವನ್ನು ಜೂನ್ 17 ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ. ದೇಶಾದ್ಯಾಂತ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಜನರಿಗೆ ಸಾಲ ಮತ್ತು ಇನ್ನತರೆ ಕಂತು ಕಟ್ಟಲು ಸಂಕಷ್ಟದಲ್ಲಿದ್ದಾಗ ಸಾಲಗಳ ಇಎಂಐ ಕಟ್ಟಲು ಆರ್ ಬಿಐ 6 ತಿಂಗಳು ಮುಂದೂಡಿಕೆ ಅವಕಾಶವನ್ನು ಕೊಟ್ಟಿತ್ತು, ಈ ಕುರಿತು ಇದಕ್ಕೆ […]

ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿಯವರು ಇಂದು ಅಗಲಿದ್ದಾರೆ. ಅಂದಹಾಗೇ 100 ವರ್ಷ ವಯಸ್ಸಾಗಿದ್ದ ಅವರಿಗೆ ವಯೋಸಹಜ ಕಾರಣದಿಂದ ಇಂದು ಬೆಳಗಿನ ಜಾವ 2.20 ರ ಸರಿಸುಮಾರಿಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. 1939 ರಲ್ಲಿ ನಾಗ್ಪುರದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ಪರ ಸೆಂಟ್ರಲ್ ಪ್ರಾವಿನ್ಸಸ್ ಪರ ಆಡುವ ಮೂಲಕ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿದ್ದರು. ಹಾಗೂ 1940 ರಲ್ಲಿ 9 ಪ್ರಥಮ […]

ಹೊಸದಿಲ್ಲಿ: ಕೊರೊನಾ ಸೋಂಕಿತರ ಇರುವಿಕೆಯನ್ನು ಗುರುತಿಸಬಲ್ಲ ಆರೋಗ್ಯ ಸೇತು ಮೊಬೈಲ್‌ ಅಪ್ಲಿಕೇಶನ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಅನೇಕ ತಂತ್ರಜ್ಞಾನ ಪರಿಣಿತರು, ಆಯಪ್‌ ಡೆವಲಪರ್‌ಗಳು ಆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲ್ಪಡುವವರ ಮಾಹಿತಿಯು ಸುರಕ್ಷಿತವಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಆರೋಗ್ಯ ಸೇತು ಮೊಬೈಲ್‌ ಆಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. https://github.com/nic-delhi/AarogyaSetu_Android.git ಎಂಬ ಲಿಂಕ್‌ ಅನ್ನು ಬಳಸಿಕೊಂಡು ಆರೋಗ್ಯ ಸೇತುವಿನ ಬಗ್ಗೆ ಇರುವ […]

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ 100 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮಹಾಮಾರಿ ಸೋಂಕಿತರ ಸಂಖ್ಯೆರಾಜ್ಯದಲ್ಲಿ  2282 ಕ್ಕೆ ಏರಿಕೆಯಯಾಗಿದೆ. ಕೆಲ ದಿನಗಳಿಂದ ಪ್ರತಿನಿತ್ಯ ಕನಿಷ್ಟ 100 ಪ್ರಕರಣಗಳು ಪತ್ತೆಯಾಗುತ್ತಿದೆ.ಇಂದು ರಾಜ್ಯದಲ್ಲಿ ಯಾದಗಿರಿ-14,ಹಾಸನ-13, ಬೆಳಗಾವಿ – 13, ದಾವಣಗೆರೆ – 10, ಬೀದರ್ – 10‌ ಪ್ರಕರಣಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇನ್ನು ಸಂಜೆ ಎಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ನವದೆಹಲಿ: ಕೊವಿಡ್-೧೯ ಟ್ರ‍್ಯಾಕ್ ಮಾಡಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ನಿಂದ ಸಾರ್ವಜನಿಕರ ಖಾಸಗಿ ಮಾಹಿತಿಗಳು ಸೋರಿಕೆ ಆಗುತ್ತದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದ ಬಿಜೆಪಿ, ಯಾರೂ ಹೆದರಬೇಕಿಲ್ಲ. ಆರೋಗ್ಯ ಸೇತು ಆ್ಯಪ್‌ನಲ್ಲಿ ಎಲ್ಲರ ಮಾಹಿತಿಗಳೂ ಭದ್ರವಾಗಿರುತ್ತವೆ. ಸೋರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ನಿನ್ನೆ ರಾತ್ರಿ ಫ್ರೆಂಚ್ ಹ್ಯಾಕರ್ ರಾಬರ್ಟ್ ಬ್ಯಾಪ್ಟಿಸ್ಟ್ ಎಂಬುವರು ಟ್ವೀಟ್ ಮಾಡುವ […]

Advertisement

Wordpress Social Share Plugin powered by Ultimatelysocial