ಕೋವಿಡ್-19 ಹಿನ್ನೆಲೆ ನಾಗರೀಕರಿಗೆ ಅಗತ್ಯ ಸೇವೆಗಳನ್ನು ಮನೆಗಳಿಗೆ ತಲುಪಿಸುವ ಉದ್ದೇಶದಿಂದ ನಗರಾದ್ಯಂತ “ಹೋಮ್ ಡಿಲಿವೆರಿ ಸಹಾಯವಾಣಿ”ಗೆ ಸನ್ಮಾನ್ಯ ಮುಖ್ಯಮಂತ್ರಿಗಳು, ಪೂಜ್ಯ ಮಹಾಪೌರರು ಮುಖ್ಯಮಂತ್ರಿ ರವರ ಗೃಹ ಕಛೇರಿ ಕೃಷ್ಣದಲ್ಲಿ ಚಾಲನೆ ನೀಡಿದರು. ಈ ವೇಳೆ ಉಪಮುಖ್ಯಮಂತ್ರಿಗಳು ಡಾ. ಸಿ.ಎನ್.ಅಶ್ವತ್ಥ ನಾರಾಯಣ್, ಸಂಸದರಾದ ಶ್ರೀ ಪಿ.ಸಿ.ಮೋಹನ್, ಶ್ರೀ ತೇಜಸ್ವಿ ಸೂರ್ಯ, ಕಂದಾಯ ಸಚಿವರು ಶ್ರೀ ಆರ್.ಅಶೋಕ್,  ರಾಜ್ಯ ಸಭಾ ಸದಸ್ಯರು ರಾಜೀವ್ ಚಂದ್ರಶೇಖರ್, ಉಪಮಹಾಪೌರರು ಶ್ರೀ ರಾಮಮೋಹನ ರಾಜು, ಆಡಳಿತ ಪಕ್ಷದ […]

ದೇಶದಾದ್ಯಂತ ಕೋವಿಡ್ 19 ನಿಂದ ಜನತೆ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು  ನಮ್ಮ ರಾಜ್ಯದಲ್ಲೂ ಕೂಡ ಬಡವರಿಗೆ ಜೀವನಕ್ಕೆ ಅಗತ್ಯ ವಸ್ತುಗಳನ್ನು ಕೊಳ್ಳಲು ಕಷ್ಟವಾದ ಹಿನ್ನೆಲೆ  ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಡಿ ಕೆ ಶಿವಕುಮಾರ್ ಅವರ ಆದೇಶದಂತೆ ಮೇರೆಗೆ   ಪರಿಹಾರ ನಿಧಿ ಸ್ಥಾಪಿಸಿದ್ದು ಪಕ್ಷದ ಶಾಸಕರೆಲ್ಲ ತಮ್ಮ ದೇಣಿಗೆಯನ್ನು ನೀಡಿದ್ದು ಅದೇ ರೀತಿ ಗಣಿನಾಡು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ರವರು ಇಂದು ಬಳ್ಳಾರಿ ನಗರದಲ್ಲಿ […]

ಮೈಸೂರು : ಎನ್.ಆರ್.ಠಾಣಾ ವ್ಯಾಪ್ತಿಯ ಆಲೀಂನಗರದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲೀಂನಗರದಲ್ಲಿ ಆಶಾಕಾರ್ಯಕರ್ತೆ ಸುಮಯಾ ಫಿರ್ದೋಸಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಧಮ್ಕಿ ಹಾಕಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುಬೇಕು. ಧಮ್ಕಿ ಹಾಕಿದವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ. ಸುಗ್ರೀವಾಜ್ಞೆ ಜಾರಿಯಾದ ಬಳಿಕ ಆರೋಪಿಗಳಿಗೆ ಶಿಕ್ಷೆ […]

ಬೆಂಗಳೂರು.ಏ.20:  ಕೆಳ ರ‍್ಯಾಂಕಿಂಗ್ ಆಟಗಾರರಿಗೆ ನೆರವು ನೀಡಲು ಸ್ಟಾರ್ ಆಟಗಾರರಾದ ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮುಂದೆ ಬಂದಿದ್ದಾರೆ. ಪುರುಷರ ಟೆನಿಸ್ ಆಡಳಿತ ಸಂಸ್ಥೆ ಎಟಿಪಿ ಸ್ಲಾಂ ಟೆನಿಸ್ ಸಂಘಟಕರ ಜತೆಗೂಡಿ ದತ್ತಿನಿಧಿಯೊಂದನ್ನು ಆರಂಭಿಸಲು ಯೋಜನೆ ನಿರೂಪಿಸಿದ್ದಾರೆ.      

ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ರ‍್ತವ್ಯ ನಿರತ ಪೊಲೀಸ್ ಮೇಲೆ ಪುಂಡರು ಗುಂಪು ಗುಂಪಾಗಿ ಹಲ್ಲೆ ನಡೆಸಿದ್ದಾರೆ. ಕೊರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಪಾದರಾಯನಪುರವನ್ನು ಸಂಪರ‍್ಣ ಸೀಲ್ ಡೌನ್ ಮಾಡಲಾಗಿದ್ದು, ರಸ್ತೆ, ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಆ ವೇಳೆ ಕೊರೊನಾ ಸೋಂಕಿತ ೫೯ ಮಂದಿಯನ್ನು ಬೇರೆಡೆ ಸ್ಥಳಾಂತರಿಸಲು ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿಗಳು ಮುಂದಾದಾಗ ಆ ವೇಳೆ ಪುಂಡರು ಪೊಲೀಸರು ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಹಾಕಿದ ಚೆಕ್ ಪೋಸ್ಟ್, […]

ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಬಳಿಕ 1 ವಾರ ತರಗತಿಗಳು ನಡೆಯುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆಮಾತನಾಡಿದ ಅವರು, ಲಾಕ್ ಡೌನ್ ಮುಗಿದ ಬಳಿಕ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕ 1 ವಾರ ತರಗತಿಗಳನ್ನು ಆರಂಭಿಸಲಾಗುವುದು. ರಜೆ ಇರುವುದರಿಂದ ವಿದ್ಯಾರ್ಥಿಗಳಿಗೆ ಚೇತನ ತುಂಬಬೇಕು. ಪರೀಕ್ಷೆ ಎದುರಿಸಲು ಉತ್ಸಾಹ ತುಂಬುವ ಕೆಲಸ ಮಾಡಬೇಕು ಹೀಗಾಗಿ 1 ವಾರ ತರಗತಿ […]

ಏ .6 ರಿಂದ 11 ರವರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ಆಯಾ ಜಿಲ್ಲಾ ಕಚೇರಿಗಳಲ್ಲಿ ಜಿಲ್ಲಾಮಟ್ಟದ ಸಭೆಗಳು ನಡೆಯಲಿವೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಪೊಲೀಸ್, ಕೃಷಿ,ತೋಟಗಾರಿಕಾ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಎಲ್ಲಾ ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರೈತರು,ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ,ಬೀಜ ಗೊಬ್ಬರಗಳ ಸರಬರಾಜು ಹಾಗೂ ಉಳಿದಂತಹ ಕೃಷಿ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ವರದಿ: ಪೊಲಿಟಿಕಲ್ […]

ದೇಶದಲ್ಲಿ ಈವರೆಗೆ ಶ್ರೀಮಂತರಿಗೆ ಮಾತ್ರವೇ ಕೊರೊನಾ ಬಂದಿರೋದು. ಅದು ವಿಮಾನ ಯಾನ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಹೊರತು, ಪೌರ ಕಾರ್ಮಿಕರಿಗೆ, ಬಡವರಿಗೆ ಯಾರಿಗೂ ಬಂದಿಲ್ಲ ಎಂಬುದಾಗಿ ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರನಲ್ಲಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಇಡೀ ದೇಶದಲ್ಲಿ ಬಡವರಿಗೆ, ಪೌರ ಕಾರ್ಮಿಕರಿಗೆ ಯಾರಿಗೂ ಇದುವರೆಗೆ ಕರೋನಾ ಬಂದಿಲ್ಲ. ವಿಮಾನಯಾನದಲ್ಲಿ ಪ್ರಯಾಣ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಮಾತ್ರವೇ. ಬಡವರಿಗೆ ಇದುವರೆಗೆ ಎಲ್ಲಿಯೂ […]

ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಕರೋನಾ ಸೋಂಕಿತ ವ್ಯಕ್ತಿ ವೈದ್ಯರನ್ನು ತಬ್ಬಿಕೊಳ್ಳುತ್ತಾನೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಬೆದರಿಕೆ ಹಾಕತ್ತಾನೆ. ಇದು ಭಯೋತ್ಪಾದನೆ ಮುಂದುವರಿದ ಭಾಗವಾಗಿದೆ. ಕ್ವಾರಂಟೈನ್ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಇಂತಹವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು ಅವರಿಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದರು. ಇನ್ನೂ ಕೇರಳ ಕೊರೊನಾ ರೆಡ್ ಜೋನ್ ಕುರಿತು ಮಾತನಾಡಿದ ಅವರು, […]

ಬೆಂಗಳೂರಿನಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿದ್ದು , ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮನೆಯಿಂದ ಯಾರೂ ಹೊರಗೆ ಬರಬಾರದು. ಈಗಾಗಲೇ ಹೀಗಾಗಿ ಮನೆಯ ಮುಂದೆ, ಬಾಲ್ಕನಿಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ದೀಪ ಬೆಳಗಿಸಿ. ಮನೆಯಿಂದ ಯಾರೂ ಹೊರಗೆ ಬರಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ದೀಪ ಬೆಳಗಿಸುವುದು ನಾಲ್ಕಕ್ಕಿಂತ ಹೆಚ್ಚು ಜನ ಸೇರುವುದು, ಪಟಾಕಿ ಹಚ್ಚುವುದು ಮಾಡಬಾರದು.ಯಾವುದೇ ವ್ಯಕ್ತಿ […]

Advertisement

Wordpress Social Share Plugin powered by Ultimatelysocial