ನವದೆಹಲಿ: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(BBC) ಮಾಧ್ಯಮ ಸಂಸ್ಥೆಯನ್ನು ಭಾರತದಲ್ಲಿ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಈ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ ಎಂಬ ಕಾರಣ ನೀಡಿ, ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. 2002 ಗುಜರಾತ್ ದಂಗೆಯ ಕುರಿತು ಬಿಬಿಸಿ ಎರಡು ಭಾಗಗಳಲ್ಲಿ ಸಾಕ್ಷ್ಯ ಚಿತ್ರವನ್ನು ರೂಪಿಸಿತ್ತು. ಈ ಡ್ಯಾಕುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಋಣಾತ್ಮಕವಾಗಿ ತೋರಿಸಲಾಗಿದೆ ಎಂದು ಆರೋಪಿಸಿ, ಭಾರತದಲ್ಲಿ […]

ನವದೆಹಲಿ, ಫೆಬ್ರವರಿ 9: ಇಂಧನದ ಅಂತಾರಾಷ್ಟ್ರೀಯ ಬೆಲೆಯು ಅದರ ಪ್ರಸ್ತುತ ಬೆಲೆ ಮೆಟ್ರಿಕ್ ಟನ್‌ಗೆ 750 ಡಾಲರ್‌ಗಿಂದ ಕಡಿಮೆಯಾದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇನ್ನೂ ಕಡಿಮೆ ದರಗಳಲ್ಲಿ ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಗೆ ತಿಳಿಸಿದೆ. ದೈನಂದಿನ ಅಂತಾರಾಷ್ಟ್ರೀಯ ಬೆಲೆಯನ್ನು ವಿವಿಧ ಅಂಶಗಳಿಂದ ನಿರ್ಧರಿಸಲಾಗುತ್ತದೆ. ನಾನು ಓದಿದ ಒಂದು ವಿಶ್ಲೇಷಣೆಯು ಅನಿಲ ತುಂಬಾ ಲಭ್ಯವಿರುತ್ತದೆ. ಕೆಲವು ವರ್ಷಗಳಲ್ಲಿ ಎಲ್ಲವೂ ಹಿಂದಿನ ವಿಷಯವಾಗಿರುತ್ತದೆ ಎಂದು ಹೇಳಿದೆ ಎಂದು […]

ನಾಲ್ಕು ವರ್ಷ ಕಳೆದ್ರು ಸಿಗದ ಪರಿಹಾರ ನೆರೆ ಸಂತ್ರಸ್ತ ಮಲೆ ಮನೆ ಮದುಗುಂಡಿ ಗ್ರಾಮಸ್ಥರಿಂದ ಪ್ರತಿಭಟನೆ ಮೂಡಿಗೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ತಾಲೂಕು ಕಚೇರಿಗೆ ನುಗ್ಗಲು ಯತ್ನ ಪ್ರತಿಭಟನಾಕಾರರನ್ನು ತಡೆದ ಪೊಲೀಸ್ರು *ವಿಷ ಸೇವಿಸಲು ಮುಂದಾದ ಪ್ರತಿಭಟನೆಕಾರರು ಸೀಮೆಎಣ್ಣೆ ಸುರಿದುಕೊಂಡ ಮತ್ತೊಬ್ಬ ಪ್ರತಿಭಟನಾಕಾರ ಆತ್ಮಹತ್ಯೆ ಯತ್ನ ಬಾಟಲಿ ಹಾಗೂ ಸೀಮೆಎಣ್ಣೆ ಕ್ಯಾನ್ ಕಿತ್ತುಕೊಂಡು ಪೊಲೀಸ್ರು 2019 ಮಳೆ, ಪ್ರವಾಹದಿಂದ ಕೊಚ್ಚಿ ಹೋದ ಮನೆ ಹಾಗೂ ಜಮೀನು     […]

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಮೊದಲ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ನಿಕ್ಷೇಪಗಳು ಪತ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್- ಹೈಮಾನ್ ಎಂಬಲ್ಲಿ 56 ಲಕ್ಷ ಟನ್‌ನಷ್ಟು ಲಿಥಿಯಂ ಕಂಡುಬಂದಿದೆ. ಪ್ರಸ್ತುತ ಭಾರತ ಲಿಥಿಯಂ, ನಿಕಲ್ ಮತ್ತು ಕೋಬಾಲ್ಟ್‌ನಂತಹ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ, ಇವಿ ಬ್ಯಾಟರಿಗಳ ತಯಾರಿಕೆಗೆ ಲಿಥಿಯಂ ಪ್ರಮುಖ ವಸ್ತುವಾಗಿದ್ದು, ಭಾರತದಲ್ಲಿಯೇ ಲಿಥಿಯಂ ನಿಕ್ಷೇಪ ಕಾಣಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. […]

ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿನ ಭಾರಿ ಬದಲಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಮ್ಮ ಲೇಖನದಲ್ಲಿ ನಿಮಗೆ ಸ್ಪಷ್ಟವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರಿಂದ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಕ್ರಮದಲ್ಲಿ ಭಾರಿ ಬದಲಾವಣೆಗಳಾಗಿದ್ದು ಈ ಹೊಸ ನಿಯಮಗಳೇನು ಎಲ್ಲವನ್ನು ತಿಳಿಯಿರಿ. ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಹೊರಡಿಸಿರುವ ಎಲ್ಲಾ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರವು […]

ಕೆಕೆಆರ್​ಟಿಸಿಯಿಂದ ನಡೆದಿದ್ದ ಕಂಡಕ್ಟರ್ ಹುದ್ದೆಗಳ ನೇಮಕಾತಿಯ ದೇಹದಾರ್ಢ್ಯ ಪರೀಕ್ಷೆಯಲ್ಲಿ ಪಾಸಾಗಲು 55 ಕಿಲೋ ತೂಕ ಇರಬೇಕು. ಹೀಗಾಗಿ ಕಡಿಮೆ ತೂಕವಿದ್ದ ನಾಲ್ಕು ಜನ ದೇಹಕ್ಕೆ ಕಬ್ಬಿಣ, ಕಲ್ಲುಗಳನ್ನು ಕಟ್ಟಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾರೆ.ಕಲಬುರಗಿ : ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಮೊದಲು ಬೆಳಕಿಗೆ ಬಂದಿದ್ದು ಕಲಬುರಗಿಯಲ್ಲಿ. ಕಿಂಗ್ ಪಿನ್​ಗಳ ಸಹಾಯದಿಂದ ಅನೇಕ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ, ಹೊರಗಿನಿಂದ ಬಂದ ಉತ್ತರವನ್ನು ಬರೆದು ಆಯ್ಕೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. […]

ಹುಬ್ಬಳ್ಳಿ: ನೀವು ವಾಹನ ಸವಾರರಾ? ಪೊಲೀಸ್ ಇಲಾಖೆ  ನೀಡಿದ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಹೊರಟಿದ್ದೀರಾ? ಹಾಗಿದ್ರೆ ನೀವು ತುಂಬಾ ಹಣ ಇಟ್ಕೊಂಡು ಹೋಗಿ. ಹೀಗೆ ಯಾಕೆ ಹೇಳುತ್ತಿದ್ದೀರಾ ಅಂತ ಪ್ರಶ್ನೆ ಮಾಡ್ತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ! ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸ್ ಇಲಾಖೆ ನೀಡಿರುವ ದಂಡ ರಿಯಾಯಿತಿ ಕೆಲವೊಬ್ಬರಿಗೆ ವರವಾಗಿದ್ದರೆ ಮತ್ತೆ ಕೆಲವರಿಗೆ ಶಾಪವಾಗಿ ಮಾರ್ಪಟ್ಟಿದೆ. ತಾವಾಗಿಯೇ ದಂಡ ಚೆಕ್  ಮಾಡಿಸಲು ಹೋಗಿ ಸಾವಿರಾರು ರೂಪಾಯಿ […]

  ಕೇಂದ್ರ ಸರ್ಕಾರವು ಸ್ಥಳೀಯ ಎಲ್‌ಪಿಜಿ ಸಿಲಿಂಡರ್‌ ಅಗ್ಗವಾಗುವ ಸೂಚನೆಯನ್ನು ಗುರುವಾರ ನೀಡಿದೆ. ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಈ ಬಗ್ಗೆ ಗುರುವಾರ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಎಲ್‌ಪಿಜಿ ದರವು ಇನ್ನಷ್ಟು ಅಗ್ಗವಾಗಬಹುದು ಎಂದು ತಿಳಿಸಿದ್ದಾರೆ. ಹೇಗೆ ಅಗ್ಗವಾಗುವುದು ಎಂಬುವುದನ್ನು ಕೂಡಾ ಉಲ್ಲೇಖಿಸಿದ್ದಾರೆ. ಅಂತಾರಾಷ್ಟ್ರೀಯ ಇಂಧನ ದರವು ಇಳಿಕೆಯಾದರೆ ಎಲ್‌ಪಿಜಿಯನ್ನು ಇನ್ನಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಪ್ರತಿ ಮೆಟ್ರಿಕ್ ಟನ್‌ಗೆ 750 ಡಾಲರ್‌ ಇದೆ. ಇದರಿಂದ […]

ಬೆಂಗಳೂರು: ಆತ ಮೊದಲ ಪತ್ನಿಯ ಕಣ್ತಪ್ಪಿಸಿ ಎರಡನೇ ಮದುವೆ ಆಗಿದ್ದ. ಇದೀಗ ಆಕೆಯ ಸೀಮಂತ ಕಾರ್ಯಕ್ರಮದ ವೇಳೆ ಮೊದಲ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಬಂದು ಪ್ರಶ್ನಿಸಿದ್ದಾರೆ. ಇದರಿಂದ ಚಂದ್ರಲೇಔಟ್​​ನಲ್ಲಿ ನಡೆಯುತ್ತಿದ್ದ ಸೀಮಂತ ಕಾರ್ಯದಲ್ಲಿ ಮಾರಾಮಾರಿ ನಡೆದಿದ್ದು, ರಣರಂಗವಾಗಿ ಬದಲಾಗಿದೆ.  ತೇಜಸ್ ಎಂಬಾತ 2008ರಲ್ಲಿ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ತೇಜಸ್ ಮೊದಲ ಪತ್ನಿಯ ಕಣ್ತಪ್ಪಿಸಿ, ಎರಡನೇ ಮದುವೆ ಆಗಿದ್ದಾನೆ. ಎರಡನೇ ಪತ್ನಿಯ ಸೀಮಂತ ಕಾರ್ಯ ನಡೆಯುತ್ತಿದ್ದ ವಿಚಾರ ಗೊತ್ತಾಗಿ, […]

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ-2027 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಹೊಸದಾಗಿ ಸೋಲಾರ್‌ ಘಟಕ ಸ್ಥಾಪಿಸಲು ಈಗಿರುವ 3.5 ಎಕರೆ ಜಮೀನಿನ ಮಿತಿಯನ್ನು 4 ಎಕರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ಪವನ ವಿದ್ಯುತ್‌ ಯೋಜನೆಗೆ ಅನುಮತಿ ಪಡೆದ ಕಾರ್ಯಾರಂಭ ಮಿತಿ ಮೂರು ವರ್ಷದಿಂದ ಎರಡು ವರ್ಷಕ್ಕೆ ಇಳಿಸಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಪುನರ್‌ ನವೀಕರಿಸಬಹುದಾದ ಇಂಧನ […]

Advertisement

Wordpress Social Share Plugin powered by Ultimatelysocial