ಬೆಂಗಳೂರು: ವವಿಧ ಪಕ್ಷಗಳಿಂದ ಸಾಗಿಬಂದು ಇದೀಗ ಬಿಜೆಪಿಯಲ್ಲಿರುವ ಸಚಿವ ವಿ. ಸೋಮಣ್ಣ ಕಾಂಗ್ರೆಸ್‌ ಸೇರುತ್ತಾರೆಯೋ ಇಲ್ಲವೊ ಎಂಬ ಚರ್ಚೆ ನಡೆದಿರುವಾಗಲೆ, ಅವರು ಕಾಂಗ್ರೆಸ್‌ ಸೇರ್ಪಡೆಯಾಗಲು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಮುಖಂಡರು ವಿರೋಧಿಸಿದ್ದಾರೆ. ಯಾವುದೇ ಕಾರಣಕ್ಕೂ ಸೋಮಣ್ಣರನ್ನ ಸೇರಿಸಿಕೊಳ್ಳಬಾರದೆಂದು ಒತ್ತಾಯ ಮಾಡಿದ್ದಾರೆ. ಎಐಸಿಸಿ ನಾಯಕರ ಮುಂದೆಯೂ ವಿರೋಧ ವ್ಯಕ್ತಪಡಿಸಲಾಗಿದ್ದು, ಎಂತಹ ಸಂದರ್ಭದಲ್ಲೂ ನಾವು ಕಾಂಗ್ರೆಸ್ ತೊರೆದಿಲ್ಲ. ಅಧಿಕಾರದ ದಾಹದಿಂದ ಕಾಂಗ್ರೆಸ್ ತೊರೆದಿಲ್ಲ. ಈಗ ತಮ್ಮ ಸ್ವಾರ್ಥಕ್ಕಾಗಿ ಪಕ್ಷಕ್ಕೆ ಸೇರಲು ಸೋಮಣ್ಣ ಮುಂದಾಗಿದ್ದಾರೆ. […]

ಬೆಂಗಳೂರು: ರಾಜ್ಯದಲ್ಲಿ ಕಾಡ್ಗಿಚ್ಚು ವ್ಯಾಪಿಸುತ್ತಿದ್ದರೂ ಅದರತ್ತ ಗಮನ ಹರಿಸದೇ ಆಡಳಿತಾರೂಢ ಬಿಜೆಪಿ ಸರ್ಕಾರ ಚುನಾವಣಾ ಪ್ರಚಾರ ಮತ್ತು ಶೇ.40ರಷ್ಟು ಲೂಟಿಗಷ್ಟೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ರಾಜ್ಯದ ಹಲವೆಡೆ ದಿನದಿನಕ್ಕೂ ಕಾಡ್ಗಿಚ್ಚು ವ್ಯಾಪಿಸುತ್ತಿದೆ. ಬೆಂಕಿ ನಂದಿಸಲು ಶ್ರಮಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಶಸ್ತ್ರವಿಲ್ಲದೆ ಯುದ್ಧ ಮಾಡುವ ದುಃಸ್ಥಿತಿ ಬಂದೊದಗಿದೆ. ಅಪಾರ ಪ್ರಮಾಣದ ಅರಣ್ಯ ಸಂಪತ್ತು, ಪ್ರಾಣಿ ಪಕ್ಷಿಗಳು ಹಾಗೂ ಕಾಡಂಚಿನ ಜನರ ಅರಣ್ಯ ರೋಧನ ಸರ್ಕಾರಕ್ಕೆ ಕೇಳಿಸುತ್ತಿಲ್ಲ ಎಂದು ಪ್ರಶ್ನಿಸಲಾಗಿದೆ. […]

ನವದೆಹಲಿ: ಕೇಂದ್ರ ಸರಕಾರವು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುತ್ತಿದೆ. ಇದಲ್ಲದೇ ಕೇಂದ್ರ ಸರಕಾರ ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಹೆಣ್ಣು ಮಕ್ಕಳ ಬಂಗಾರದ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಹೆಣ್ಣು ಮಕ್ಕಳು ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳಿಗಾಗಿ ಕೇಂದ್ರವು ಪರಿಚಯಿಸಿದ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. ಈಗ ಅಂತರಾಷ್ಟ್ರೀಯ ಮಹಿಳಾ ದಿನದ […]

ಮಂಡ್ಯ: ಮುಂದಿನ ವಿಧಾನಸಭೆ ಚುನಾವಣೆ ರಣತಂತ್ರ ರೂಪಿಸುತ್ತಿರೋ ಬೆನ್ನಲ್ಲೆ ಸುಮಲತಾ ಅಂಬರೀಷ್‌  ಬಿಜೆಪಿ ಸೇರ್ಪಡೆ ಬಗ್ಗೆ ನಾಳೆ ಮಹತ್ವದ ತೀರ್ಮಾನವಾಗಲಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸುಮಲತಾ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್‌ನಿಂದ ಗ್ರೀನ್‌ ಸಿಗ್ನಲ್ ನೀಡುವ ಬಗ್ಗೆ ನಾಳೆ ಸುಮಲತಾ ನಿವಾಸದಲ್ಲೇ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಸುಮಲತಾ ಅಂಬರೀಷ್‌ ಮಹತ್ವದ ಘೋಷಣೆಯನ್ನು ಮಾಡಲಿದ್ದಾರೆ. ಸುಮಲತಾ ಅಂಬರೀಷ್‌ ಬಿಜೆಪಿ ಸೇರ್ಪಡೆ ಬಗ್ಗೆ ಆಪ್ತರೊಳಗಡೆ ಒಮ್ಮತ ತೀರ್ಮಾನ ಸಾಧ್ಯತೆಯಿದೆ. […]

ಸಿಂಪಲ್ ಸುನಿ ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಒಂದು ಸರಳ ಪ್ರೇಮಕಥೆ’. ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ನಟ ವಿನಯ್ ರಾಜ್ ಕುಮಾರ್ ಮಾತನಾಡಿ […]

ರಾಯಚೂರು, ಮಾರ್ಚ್‌, 09: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಈಗಾಗಲೇ ಚುನಾವಣಾ ಆಯೋಗವು ಜಿಲ್ಲಾವಾರು ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಯಚೂರು ಚುನಾವಣೆ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿಯವರನ್ನು ಆಯ್ಕೆ ಮಾಡಿದರೆ, ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್‌ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಬಿಸಿಲಿನ ನಾಡು ರಾಯಚೂರು ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ತೆಲುಗು ಸ್ಟಾರ್‌ ನಿರ್ದೇಶಕ ರಾಜಮೌಯನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ […]

ಹೈನುಗಾರರಿಗೆ ಪರಿಹಾರಧನದ ಚೆಕ್ ವಿತರಣೆ ಮಾಡದೆ ಮಹಾಮೋಸ..! ಚರ್ಮಗಂಟು ರೋಗ ಭಾದೆಯಿಂದ ಸಾವನ್ನಪ್ಪಿದ್ದ ರಾಸುಗಳಿಗೆ ಸರ್ಕಾರದಿಂದ‌ ಪರಿಹಾರ ಧನ ಬಿಡುಗಡೆ. ಸರ್ಕಾರದಿಂದ‌ ಹಣ ಬಿಡುಗಡೆಯಾದರೂ ಹೈನುಗಾರರಿಗೆ ಪರಿಹಾರಧನ ನೀಡದೆ ವಿಳಂಬ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಶುಪಾಲನಾ ಇಲಾಖೆ ಅಧಿಕಾರಿಗಳಿಂದ ವಿಳಂಬ ಮೂರು ತಿಂಗಳಿಂದ ಚೆಕ್ ಬ್ಯಾಂಕ್ ಗೆ ಸಂದಾಯ ಮಾಡದೆ ಅಧಿಕಾರಿಗಳ ಕಳ್ಳಾಟ. ಪರಿಹಾರದ ಧನದ ಚೆಕ್ ಗಳನ್ನು ಕಚೇರಿಯಲ್ಲೇ ಇಟ್ಟುಕೊಂಡು ಅಧಿಕಾರಿಗಳ ಕಳ್ಳಾಟ..! ೩ ತಿಂಗಳಿಂದ ಪಶುಪಾಲನಾ ಕಚೇರಿ […]

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿರುವ ಮಧ್ಯೆ, ಪುಣೆಯ ಕುಸ್ತಿಪಟು ತಾಲೀಮಿನ ಸಮಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾರುಂಜಿಯ ಮಾಮಸಾಹೇಬ್ ಮೊಹಲ್ ಕುಸ್ತಿ ಸಂಕುಲದಲ್ಲಿ ಬುಧವಾರ ಮುಂಜಾನೆ ತಾಲೀಮು ನಡೆಸಿ ಮೃತಪಟ್ಟಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಕುಸ್ತಿಪಟುವಿನ ಹೆಸರು ಸ್ವಪ್ನಿಲ್ ಪಡಲೆ. ತಾಲೀಮಿನ ವೇಳೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಅವರು ಪುಣೆಯ ಕುಸ್ತಿ ವಲಯದಲ್ಲಿ ಹೆಸರಾಂತ ಕುಸ್ತಿಪಟುವಾಗಿದ್ದು […]

ಘಾಜಿಯಾಬಾದ್(ಉತ್ತರ ಪ್ರದೇಶ): ಮುರಾದ್‌ನಗರದ ಅಗ್ರಸೇನ್ ವಿಹಾರ್ ಮೊದಲ ಹಂತದ ಕಾಲೋನಿಯಲ್ಲಿ ಬುಧವಾರ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೋಳಿ ಆಚರಿಸಿದ ನಂತರ, ದೀಪಕ್ (40) ಮತ್ತು ಶಿಲ್ಪಿ (36) ಸ್ನಾನ ಮಾಡಲು ಹೋಗಿ ತಮ್ಮ ಗ್ಯಾಸ್ ಗೀಸರ್ ಅನ್ನು ಸ್ವಿಚ್ ಆನ್ ಮಾಡಿದ್ದಾರೆ. ಆದರೆ, ಗ್ಯಾಸ್ ಸೋರಿಕೆಯನ್ನು ಗಮನಿಸಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ, ಅವರ ಪೋಷಕರು ಪ್ರಜ್ಞಾಹೀನ […]

ತೈಪೆ : ನೆರೆ ರಾಷ್ಟ್ರಗಳ ಜತೆಗೆ ಸದಾ ಕ್ಯಾತೆ ತೆಗೆಯುವ, ಭೂ ಅತಿಕ್ರಮಣಕ್ಕೆ ಹಪಾಹಪಿಸುವ ಚೀನಾ, ತೈವಾನ್‌ ಮೇಲಿನ ತನ್ನ ಉದ್ದೇಶಿತ ಕುತಂತ್ರ ಮುಂದುವರಿಸಿದ್ದು, ತೈವಾನ್‌ನ ದ್ವೀಪ ಪ್ರದೇಶದ ಜಲಾಂತರ್ಗಾಮಿ ಅಂತರ್ಜಾಲ ಸೇವೆಯ ಕೇಬಲ್‌ಗ‌ಳನ್ನು ಕತ್ತರಿಸಿಹಾಕಿದೆ. 14 ಸಾವಿರ ಮಂದಿ ವಾಸವಿರುವ ಮತ್ಸು ದ್ವೀಪವು 2 ಜಲಾಂತರ್ಗಾಮಿ ಅಂತರ್ಜಾಲ ಕೇಬಲ್‌ಗ‌ಳನ್ನು ಅವಲಂಬಿಸಿದ್ದು, ಚೀನಾದ ಕುತಂತ್ರದಿಂದ ಈಗ ಜನರು ಪರದಾಡುವಂತಾಗಿದೆ. ಫೆ.2 ರಂದು ಚೀನ ಮೀನುಗಾರಿಕೆ ಹಡಗೊಂದು ದ್ವೀಪ ಪ್ರದೇಶದ 50 […]

Advertisement

Wordpress Social Share Plugin powered by Ultimatelysocial