ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ಪುನರ್ ನಾಮಕರಣ ಮಾಡಲಾಗಿದೆ. ಇನ್ನು ಈ ಬಗ್ಗೆ ಸರ್ಕಾರದಿಂದ ಆದೇಶ ಕೂಡ ಹೊರಡಿಸಲಾಗಿದೆ.ಪರಿಶಿಷ್ಟ ಜಾತಿಯ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದರಿಂದ ಐದನೇ ತರಗತಿವರೆಗೆ ಶಿಕ್ಷಣ ನೀಡಲು 68 ವಸತಿ ಶಾಲೆಗಳನ್ನು ತೆರೆಯಲಾಗಿದೆ. ಇನ್ನು ಈ ಶಾಲೆಯಲ್ಲಿ ೮೫೦೦ ವಿದ್ಯಾರ್ಥಿಗಳು ವ್ಯಾಸಂಘ ಮಾಡುತ್ತಿದ್ದು, ಇವರೆಲ್ಲರು ಓದುತ್ತಿರುವ ಶಾಲೆಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಲಾಗಿದೆ. […]

ಚೀನಾದಲ್ಲಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಇತ್ತಿಚಿನ ದಿನಗಳಲ್ಲಿ  ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಷಿಯಾನ್ ನಗರದಲ್ಲಿನ ಕೋವಿಡ್-19 ಪ್ರಕರಣಗಳ ಏರಿಕೆ ದೇಶಾದ್ಯಂತ ಹರಡುವ ಆತಂಕ ಉಂಟುಮಾಡಿದ್ದು, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಗೆ ಹೋಗದಂತೆ ಚೀನಾದಲ್ಲಿ ಸೂಚನೆ ನೀಡಲಾಗಿದೆ. ಇದಲ್ಲದೆ ಜನರ ವಾಹನ ಚಾಲನೆಯನ್ನೂ ಸಹ ನಿಷೇಧ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನ ಚೀನಾದಲ್ಲಿ ಕೈಗೊಳ್ಳಲಾಗುತ್ತಿದೆ.ಷಿಯಾನ್ ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಈ ಭಾಗದಲ್ಲಿ 10 ದಿನಗಳ ವರೆಗೆ ಲಾಕ್ […]

ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದ ಸಮೀಪವಿರುವ ತೋಟದ ಮನೆಯೊಳಗೆ ನುಗ್ಗಿದ ಚಿರತೆ,ರೈತ ಸೋಮೇಶ್ ಎಂಬುವವರ ತೋಟದ ಮನೆಗೆ ನುಗ್ಗಿದ ಚಿರತೆ  ಮನೆಯೊಳಗೆ ನುಗ್ಗಿದ ಚಿರತೆ ಕಂಡು ಹೌಹಾರಿದ ರೈತ ವಿಚಲಿತನಾಗದೇ ಮನೆ ಬೀಗ ಹಾಕಿ ಹೊರಬಂದು ಅಕ್ಕಪಕ್ಕದ ಜನರ ಸಹಾಯ ಪಡೆದಕೊಂಡು ರೈತ ಬಿ.ಆರ್.ಟಿ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂಧಿಗಳು ಸುಮಾರು 4 ರಿಂದ 5 ವರ್ಷದ ಗಂಡು ಚಿರತೆ ಸೆರೆ  […]

ನಾಗಮಂಗಲ ತಾಲ್ಲೂಕಿನ  ಕೆಂಪನಕೊಪ್ಪಲು ಗ್ರಾಮದ ಗೇಟ್‌ನ ಚಾಮರಾಜನಗರ – ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ, ಸ್ವಿಫ್ಟ್‌ ಕಾರು ಮತ್ತು ಮಿನಿ ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಕಾರಣ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಸಾವನ್ನಪ್ಪಿದ ವ್ಯಕ್ತಿಗಳನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ಮೂಲದ ೩೫ ವರ್ಷದ ಸುದೀಪ್ , ೩೦ ವರ್ಷದ ಶ್ರೀಜಾ  ಮತ್ತು ೫೫ ವರ್ಷದ ಸಂಗಮ್ಮ  ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ೧೫ ವರ್ಷದ ಬಾಲಕಿ ಶ್ರೇಯಾ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು […]

ಹಾಲಿವುಡ್: ಜನಪ್ರಿಯ ಮ್ಯಾಟ್ರಿಕ್ಸ್ ಸರಣಿಯ ನಾಲ್ಕನೇ ಅವತರಣಿಕೆ ‘ಮ್ಯಾಟ್ರಿಕ್ಸ್- ರಿಸರೆಕ್ಷನ್ಸ್’ ಸಿನಿಮಾ ಇತ್ತೀಚಿಗಷ್ಟೆ ವಿಶ್ವಾದ್ಯಂತ ತೆರೆ ಕಂಡಿತ್ತು. ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು. ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ಟ್ರೋಲಿಂಗ್ ಗೆ ಒಳಗಾಗಿದ್ದರು. ಈ ಬಗ್ಗೆ ಕಿಡಿಕಾರಿರುವ ಪ್ರಿಯಾಂಕಾ ಚೋಪ್ರಾ ತಾವು ಪಾತ್ರದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಪಾತ್ರದ ತೂಕವಷ್ಟೆ ಮುಖ್ಯ ಎಂದು […]

ಈಡಿ ದೇಶವೆ ಬಹುನಿರೀಕ್ಷಿತದಲ್ಲಿ ಕಾದು ಕುಳುತ್ತಿತ್ತು, ಮಕ್ಕಳಿಗೆ ಲಸಿಕೆ ಯಾವಾಗಾ ಅಂತ. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ನಾಳೆಯಿಂದಲೇ ೧೫ ರಿಂದ ೧೮ ವಯಸ್ಸಿನವರಿಗೆ ಸಿ.ಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ  ಲಸಿಕೆ ನೀಡಲು ಅಭಿಯಾನ ನಡೆಯಲಿದೆ. ಹಾಗಾಗಿ ಇಂದು ಬೆಳೆಗ್ಗೆಯಿಂದ ಶಾಲಾ ಕಾಲೇಜುಗಳಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಕೊಪ್ಪಳ ಸೇರಿಸಂತೆ ಹಲವು ಜಿಲ್ಲೆಗಳಲ್ಲಿ ನಾಳೆಯಿಂದ ಮಕ್ಕಳಿಗೆ ಲಸಿಕೆ ನೀಡುವು ಅಭಿನಾನ ನಡೆಯಲಿದ್ದು, ಇದಕ್ಕಾಗಿ ಲಸಿಕೆ ನೀಡುವ ಶಾಲಾ […]

ಬಿಬಿಎಂಪಿಯ  ಮಾರ್ಗಸೂಚಿಯಂತೆ ಈಗಾಗಲೇ ಬೆಂಗಳೂರಿನಲ್ಲಿ  ಲಸಿಕ ಕೇಂದ್ರಗಳ ಸಿದ್ಧತೆ ಮಾಡಲಾಗಿದೆ. ನಗರದ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡಿದೆ ಪಾಲಿಕೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ರಾಜ್ಯಾದ್ಯಂತ ಲಸಿಕಾಕರಣಕ್ಕೆ ಚಾಲನೆ ಸಿಕ್ಕಿದ್ದು ಬಿಬಿಎಂಪಿ ಸಕಲ ತಯಾರಿ ನಡೆಸಿದೆ. ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡು , ಮಕ್ಕಳಿಗಾಗಿ ರೆಜಿಸ್ಟ್ರೇಷನ್, ವ್ಯಾಕ್ಸಿನೇಷನ್, […]

ಸಂಕ್ರಾಂತಿ  ನಂತ್ರ ಸಚಿವ ಸಂಪುಟ ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ,ರಾಜಕೀಯ ಪಕ್ಷ ಅಂದ ಮೇಲೆ‌ ನಿರಂತರ ಬದಲಾವಣೆ   ಇದ್ದೆಇರುತ್ತೆ.ಈಗ ನಡೆದಿರೋ ಚರ್ಚೆ ಕೇವಲ ಊಹಾಪೋಹ ಅನ್ಸುತ್ತೆ,ಉಳಿದ ನಾಲ್ಕೈದು ಸಚಿವ ಸ್ಥಾನ ತುಂಬೊದು ಬಿಡೋದು ಸಿಎಂಗೆ ಬಿಟ್ಟವಿಚಾರವಾಗಿದೆ. ಇನ್ನು ಯತ್ನಾಳ್ ಆಗಿರಬಹುದು  ರೇಣುಕಾಚಾರ್ಯ ಅವರ  ಹೇಳಿಕೆ ಪಕ್ಷದ ಹೇಳಿಕೆ ಅಲ್ಲ, ಸಂಕ್ರಾಂತಿ ನಂತರ ಅಥವಾ ಮೊದಲು ಸಚಿವ ಸಂಪುಟ ಬದಲಾವಣೆ ಆಗುತ್ತಾ  ಅನ್ನೋದು ಸಿಎಂ ಗೆ ಬಿಟ್ಟಿದ್ದು ಎಂದು ಕಲಬುರಗಿಯಲ್ಲಿ […]

Advertisement

Wordpress Social Share Plugin powered by Ultimatelysocial