ಭಾನುವಾರ ಲಾಕ್‌ಡೌನ್ ತೆರವುಗೊಳಿಸುವ ವಿಚಾರವಾಗಿ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಐಟಿ ಕ್ಷೇತ್ರ ಉದ್ಯಮಿಗಳು ಹಾಗೂ ಶ್ರಮಿಕರಿಗೆ ಶಾಪಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದರು. ಜೂ.೧ರಿಂದ ಥಿಯೇಟರ್ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅನುಮತಿ ನೀಡುವ ಯೋಚನೆ ಸರ್ಕಾರಕ್ಕಿದ್ದು, ಅವಶ್ಯಕತೆ ನೋಡಿಕೊಂಡು ಸಡಿಲಿಕೆ ಮಾಡಲಾಗುತ್ತದೆ. ಮೇ೩೧ರ ಕೇಂದ್ರದ ಮಾರ್ಗಸೂಚಿಗಳನ್ನು ನೊಡಿಕೊಂಡು ಹೊಟೇಲ್‌ಗಳನ್ನ ತೆರೆಯುವುದರ ಬಗ್ಗೆ ಹೊಸ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು.

ಇಡೀ ಜಗತ್ತನೆ ಕಾಡುತ್ತಿರುವ ಕೊರೊನಾ ವೈರಸ್, ಸದ್ಯ ಹಲವು ದೇಶಗಳಲ್ಲಿ ಏರುಗತಿಯಲ್ಲಿದ್ದರು ಸಹಿತ ನ್ಯೂಜಿಲೆಂಡ್ ಮಾತ್ರ ಕೋವಿಡ್ ವಿರುದ್ಧ ಜಯಸಾಧಿಸಿದೆ.  ನ್ಯೂಜಿಲೆಂಡ್‌ನಲ್ಲಿ ಈಗ ಕೇವಲ ಒಂದು ಕೋವಿಡ್ ಪ್ರಕರಣ ಬಾಕಿ ಉಳಿದಿದ್ದು, ೮ ದಿನಗಳಿಂದ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಆದ್ರೂ ಕೂಡಾ ನ್ಯೂಜಿಲೆಂಡ್ ಪರೀಕ್ಷೆಗಳನ್ನು ಮಾತ್ರ ನಿರಂತರವಾಗಿ ನಡೆಸ್ತಿದೆ.  ಸೋಂಕು ಪ್ರಕರಣಗಳು ಕಂಡು ಬಾರದ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಸಡಿಲಗೊಳಿಸಲು ಮುಂದಾಗಿದೆ.

ಔರಂಗಾಬಾದ್ ಮೂಲದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕೊರೊನಾ ವಾರಿಯರ್ಸ್ ನೆರವಿಗಾಗಿ ಕಾಂಟ್ಯಾಕ್ಟ್ ಲೆಸ್ ರೋಬೋಟ್ ಕಂಡು ಹಿಡಿದಿದ್ದಾನೆ. ಔರಂಗಾಬಾದ್‌ನಲ್ಲಿ ಏಳನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಸಾಯಿ ಸುರೇಶ್ ದಂಗದಾಲ್, ಈ ಕಾಂಟ್ಯಾಕ್ಟ್ ಲೆಸ್ ರೋಬೋವನ್ನು ಅಭಿವೃದ್ಧಿ ಪಡಿಸಿರುವ ವಿದ್ಯಾರ್ಥಿ. ರೋಗಿಗಳಿಗೆ ಔಷಧ ಮತ್ತು ಆಹಾರವನ್ನು ನೀಡಲು ಈ ವಿಶೇಷ ರೋಬೋ ಸಹಕಾರಿಯಾಗಲಿದ್ದು,, ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದು ನೆರವಾಗಿದೆ.  ಬ್ಯಾಟರಿ ಮೂಲಕ ಚಲಿಸುವ […]

ಕೊರೊನಾ ಲಾಕ್‌ಡೌನ್ ಹಿನ್ನಲೆ ಬಸ್, ರೈಲು ಸಂಚಾರವನ್ನ ಸರ್ಕಾರ ರದ್ದುಗೊಳಿಸಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಮತ್ತೆ ಕೆಲಸಕ್ಕೆ ಮರಳಲು ಪ್ರಯಾಣಿಕರಿಗೆ ರೈಲು, ಬಸ್ ವ್ಯವಸ್ಥೆ ಮಾಡಲಾಗುತ್ತಿದೆ.  ಜೂ. ೧ರಿಂದ ದೇಶಾದ್ಯಂತ್ ರೈಲು ಸಂಚಾರ ಆರಂಭವಾಗಲಿದ್ದು, ಎಲ್ಲಾ ರಾಜ್ಯಗಳಿಂದ ಬೆಂಗಳೂರಿಗೆ ರೈಲು ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.  ಉತ್ತರ ಭಾಗದಿಂದ ರಾಜಧಾನಿಗೆ ಸುಮಾರು೨೫-೩೦ಸಾವಿರ ಜನ ಬರುವ ನಿರೀಕ್ಷೆಯಿದೆ. ಹೀಗಾಗಿ ರೈಲ್ವೆ ಇಲಾಖೆ ರೈಲು ಸಂಚಾರಕ್ಕೆ ಅನುಮತಿ ನೀಡಿದೆ.

ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಮೇ ೩೧ರಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ದೇಶದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಅಹಮದಾಬಾದ್, ಚೆನೈ, ಪುನೈ, ಸೂರತ್ ನಗರಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಮತ್ತೆ ಈ ನಗರಗಳಲ್ಲಿ ಲಾಕ್‌ಡೌನ್ ೫.೦ ಜಾರಿಯಗುತ್ತಾ ಎಂಬುದನ್ನ ಕಾಯ್ದು ನೋಡಬೇಕಾಗಿದೆ. ಈ ಲಿಸ್ಟ್ನಲ್ಲಿ ಕರ್ನಾಟಕವು ಇರಲಿದೆಯಾ ಎಂಬ ಕುತೂಹಲ ಮೂಡುತ್ತಿದೆ.

ಕೋವಿಡ್-೧೯ ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಃ ಆರಂಭವಾಗಲಿದೆ. ದೇಶೀಯ ವಿಮಾನಯಾನ ಆರಂಭಿಸಲು ವಿಮಾನಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಮೇ.೨೫ ಮಂಗಳೂರಿನಿಂದ ಬೆಂಗಳೂರು, ಮುಂಬೈ ಮತ್ತು ಚೆನ್ನೈಗೆ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. ಮಂಗಳೂರಿನಿಂದ ಇಂಡಿಗೋ ೩ ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಸ್ಪೈಸ್ ಜೆಟ್ ವಿಮಾನವು ಬೆಳಗ್ಗೆ ೮.೩೦, ರಾತ್ರಿ ೭ ಗಂಟೆಗೆ ಹಾಗೂ ಇಂಡಿಗೋ ವಿಮಾನ ಸಂಜೆ ೫.೫೫ಕ್ಕೆ, […]

ಕಳೆದ ಎರಡು ತಿಂಗಳಿನಿಂದ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿದ್ದ ದತ್ತು ಪುತ್ರ ಉಮೇಶ್ ಬಳ್ಳೂರು ರವರ ಮನೆಯಲ್ಲಿದ್ದ   ಪರಿಸರ ಪ್ರೇಮಿ, ಸಾಲುಮರದ ತಿಮ್ಮಕ್ಕರವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿzÀÝgÀÄ, ಗಂಭೀರ ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿದ್ದ ತಿಮ್ಮಕ್ಕನವರನ್ನು ಹಾಸನ ನಗರದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಈಗ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು, ಆರೋಗ್ಯ ಸುಧಾರಣೆ ಗಮನಿಸಿ ಆಸ್ಪತ್ರೆಯಿಂಡ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆಂದು […]

ಬೆಂಗಳೂರು: ಕೊರೊನಾಘಾತಕ್ಕೆ ನಾಡಿನ ಶ್ರಮಿಕ ರ‍್ಗ ತತ್ತರಿಸಿದೆ. ನಗರ-ಮಹಾ ನಗರಗಳಿಂದ ಹಳ್ಳಿಗಳತ್ತ ಮಹಾ ಮರುವಲಸೆಯ ರ‍್ವ ಕಂಗೆಡಿಸುತ್ತಿದೆ. ಬೆಂಗಳೂರೊಂದರಿಂದಲೇ ಸುಮಾರು ೨ ಲಕ್ಷ ಮಂದಿ ಅನ್ಯ ಜಿಲ್ಲೆ ಮತ್ತು ಪರ ರಾಜ್ಯಗಳಿಗೆ ವಾಪಸಾಗಿದ್ದಾರೆ. ಒಂದೆಡೆ ಕೋವಿಡ್ ೧೯ ಎದುರಿಸುವ ಸವಾಲು, ಮತ್ತೊಂದೆಡೆ ಕರ‍್ಮಿಕರ ಮರು ವಲಸೆ ನಿಭಾಯಿಸಬೇಕಾದ ಮಹಾ ಸವಾಲು ರಾಜ್ಯ-ಕೇಂದ್ರ ಸರಕಾರಗಳ ಮುಂದಿದೆ. ನಗರಗಳಿಂದ ತವರು ತಲುಪಿರುವ ಲಕ್ಷಾಂತರ ಕರ‍್ಮಿಕರಲ್ಲಿ ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗ ಲಭಿಸುವುದು ಅಸಾಧ್ಯ. ಬೇರೆ […]

ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಗಳನ್ನು ಒದಗಿಸುತ್ತೇವೆ ಎಂದು ಸಚಿವ ಶ್ರೀ ರಾಮುಲು   ಹೇಳಿದ್ದಾರೆ. ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಗರ್ಭಿಣಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದ ಕಾರಣ ವಾಣಿವಿಲಾಸ ಆಸ್ಪತ್ರೆಯ ಸಿಬ್ಬಂದಿಯಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅಲ್ಲಿ ಪಿಪಿಇ ಕಿಟ್ ಇರಲಿಲ್ಲ ಎಂಬುದು ಸತ್ಯ. ಇದರಿಂದಾಗಿ ಆತಂಕ ಮನೆಮಾಡಿತ್ತು. ಈಗ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ. ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಗಾಬರಿಯಾಗುವ […]

ಲಾಕ್ ಡೌನ್ ಸಮಯದಲ್ಲಿ ನೆಮ್ಮದಿಯಿಂದ ಇದ್ದ ಗ್ರಾಮಸ್ಥರಿಗೆ ಸಂಕಷ್ಟ ಬಂದೊದಗಿದೆ. ಕುಡಿತದಿಂದ  ಹೊಡೆದಾಟ, ಕೌಟುಂಬಿಕ  ದೌರ್ಜನ್ಯಗಳು ಹೆಚ್ಚಾಗುತ್ತಿರುವುದರಿಂದ ಮಹಿಳೆಯರು ಮದ್ಯದಂಗಡಿ ಬಂದ್ ಮಾಡುವಂತೆ  ಗಲಾಟೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. ಮೊನ್ನೆಯಿಂದ ವೈನ್ ಶಾಪ್ ಆರಂಭವಾದ ಹಿನ್ನೆಲೆಯಲ್ಲಿ, ಮದ್ಯಪಾನ ಮಾಡಿ ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದಕ್ಕೆ ಗ್ರಾಮದ ಮಹಿಳೆಯರು ಒಂದಾಗಿ ಬಂದು ವೈನ್ ಶಾಪ್ ಮೇಲೆ ಕಲ್ಲು ತೂರಾಡಿ ತಮ್ಮ ಆಕ್ರೋಶವನ್ನು […]

Advertisement

Wordpress Social Share Plugin powered by Ultimatelysocial