ಮ್ಯಾಕ್ಸ್ ವೆಲ್ ದಂಡಯಾತ್ರೆ.. ಫೋರು.. ಸಿಕ್ಸರ್ ಗಳ ಸುನಾಮಿ

ಮ್ಯಾಕ್ಸ್ ವೆಲ್ ದಂಡಯಾತ್ರೆ.. ಫೋರು.. ಸಿಕ್ಸರ್ ಗಳ ಸುನಾಮಿ

ಮ್ಯಾಕ್ಸ್ ವೆಲ್ ದಂಡಯಾತ್ರೆ.. ಫೋರು.. ಸಿಕ್ಸರ್ ಗಳ ಸುನಾಮಿ

ಬಿಗ್ ಬ್ಯಾಷ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟರ್, ಆಸ್ಟ್ರೇಲಿಯಾ ಕ್ರಿಕೆಟರ್ ಗ್ಲೇನ್ ಮ್ಯಾಕ್ಸ್ ವೆಲ್ ಧೂಳೆಬ್ಬಿಸಿದ್ದಾರೆ.

ಪ್ರಸಕ್ತ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡ ಸಾರಥ್ಯ ವಹಿಸಿರುವ ಮ್ಯಾಕ್ಸಿ, ಪ್ರತಿ ಮ್ಯಾಚ್ ನಲ್ಲೂ ಹೌರಾ ಎನ್ನುವಂತಹ ಪ್ರದರ್ಶನ ನೀಡುತ್ತಿದ್ದಾರೆ. ಅದರಂತೆ ನಿನ್ನೆ ಸಿಡ್ನಿ ಸಿಕ್ಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸಿ ರನ್ ಸುನಾಮಿ ಎಬ್ಬಿಸಿದ್ದಾರೆ.

ಬೌಂಡರಿ.. ಸಿಕ್ಸರ್ ಗಳೊಂದಿಗೆ ಆಕಾಶವೇ ಮಿತಿ ಎಂಬಂತೆ ರೊಚ್ಚಿಗೆದ್ದು ಬ್ಯಾಟ್ ಬೀಸಿದ ಮ್ಯಾಕ್ಸಿ 57 ಎಸೆತಗಳಲ್ಲಿ ಸೆಂಚೂರಿ ಬಾರಿಸಿ ಬಿಸಾಕಿದರು. ಪಂದ್ಯದಲ್ಲಿ 57 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ ವೆಲ್ 103 ರನ್ ಚಚ್ಚಿದರು.

ಕೇವಲ 54 ಎಸೆತಗಳಲ್ಲಿ 12 ಬೌಂಡರಿ, ಮೂರು ಸಿಕ್ಸರ್ ನೊಂದಿಗೆ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದರು. ಮೊದಲ ಐವತ್ತು ರನ್ ಗಳಿಗೆ 33 ಎಸೆತಗಳನ್ನು ತೆಗೆದುಕೊಂಡ ಮ್ಯಾಕ್ಸಿ, ನಂತರ ಟಾಪ್ ಗೇರ್ ನಲ್ಲಿ ಬ್ಯಾಟ್ ಬೀಸಿದರು. ಟಾಪ್ ಗೇರ್ ನಲ್ಲಿ ಎದುರಾಳಿ ತಂಡದ ಬೌಲರ್ ಗಳನ್ನು ಧೂಳಿಪಟ ಮಾಡಿದ ಮ್ಯಾಕ್ ವೆಲ್ 21 ಎಸೆತಗಳಲ್ಲಿ 50 ರನ್ ಸಿಡಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಸೋತ ಬಿಜೆಪಿಗೆ ರಮೇಶ್ ಜಾರಕಿಹೊಳಿ ಮತ್ತೊಂದು ಶಾಕ್.?

Thu Dec 16 , 2021
ಪಕ್ಷದ 13 ಶಾಸಕರು, ಮೂವರು ಸಂಸದರಿದ್ದರೂ ಭದ್ರಕೋಟೆ ಬೆಳಗಾವಿಯಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿಗೆ ಈ ಸೋಲು ಅನಿರೀಕ್ಷಿತವಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಹೋದರ ಲಖನ್ ಅವರಿಗೆ ಎರಡನೇ ಅಭ್ಯರ್ಥಿಯಾಗಿ ಟಿಕೆಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರೂ, ವರಿಷ್ಠರು ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದ್ದರು. ಪಕ್ಷೇತರರಾಗಿ ಕಣಕ್ಕಿಳಿದ ಲಖನ್ ಜಯಗಳಿಸಿದ್ದು, ಬಿಜೆಪಿ ನಾಯಕರಿಗೆ […]

Advertisement

Wordpress Social Share Plugin powered by Ultimatelysocial