ಹೊಸ ಕುಟುಂಬ ಸದಸ್ಯರ ಹೆಸರು ರೇಷನ್‌ ಕಾರ್ಡ್‌ಗೆ ಹೀಗೆ ಅಪ್‌ಡೇಟ್ ಮಾಡಿ.

 

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಬಡ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಹಲವಾರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾನ್ ಅನ್ನ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಸರ್ಕಾರವು ಬಡ ಕುಟುಂಬಕ್ಕೆ ಗೋಧಿ, ಅಕ್ಕಿ, ಎಣ್ಣೆ, ಬೇಳೆ, ಹಿಟ್ಟು ಮೊದಲಾದವುಗಳನ್ನು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ನೀಡುತ್ತದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಈ ಯೋಜನೆಯಡಿಯಲ್ಲಿ ಒಟ್ಟಾಗಿ 3.91 ಲಕ್ಷ ಕೋಟಿ ರೂಪಾಯಿ ಸಬ್ಸಿಡಿಯನ್ನು ನೀಡುತ್ತದೆ. ಈವರೆಗೆ ದೇಶದಲ್ಲಿ 1,118 ಲಕ್ಷ ಟನ್ ರೇಷನ್ ಅನ್ನು ಪಡಿತರ ಅಂಗಡಿ ಮೂಲಕ ವಿತರಣೆ ಮಾಡಲಾಗಿದೆ. ಈ ಯೋಜನೆಯ ಪ್ರಯೋಜವನ್ನು ನೀವು ಪಡೆಯಬೇಕಾದರೆ ನಿಮ್ಮಲ್ಲಿ ರೇಷನ್ ಕಾರ್ಡ್ ಇರುವುದು ಮುಖ್ಯವಾಗಿದೆ.

ನಿಮ್ಮಲ್ಲಿ ರೇಷನ್ ಕಾರ್ಡ್ ಇದ್ದು, ಆ ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬೇಕಾದರೆ, ಅದನ್ನು ಆನ್‌ಲೈನ್‌ನಲ್ಲಿಯೇ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಸೇರ್ಪಡೆ ಮಾಡಬೇಕಾದರೆ, ಏನು ಮಾಡಬೇಕು, ಯಾವೆಲ್ಲ ದಾಖಲೆ ಬೇಕಾಗುತ್ತದೆ ಇಲ್ಲಿದೆ, ವಿವರ ಮುಂದೆ ಓದಿ…

ಬೇಕಾದ ದಾಖಲೆಗಳು ಯಾವುದು?

ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ಕುಟುಂಬದ ಯಜಮಾನರ ಬಳಿ ರೇಷನ್ ಕಾರ್ಡ್ ಹಾಗೂ ಅದರ ಜೆರಾಕ್ಸ್ ಪ್ರತಿ ಇರಬೇಕಾಗುತ್ತದೆ. ಹಾಗೆಯೇ ಮಗುವಿನ ಅಥವಾ ಕುಟುಂಬದ ಹೊಸ ಸದಸ್ಯರ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮುಖ್ಯವಾಗುತ್ತದೆ. ಮಗುವಾಗಿದಲ್ಲಿ ಪೋಷಕರ ಆಧಾರ್ ಕಾರ್ಡ್ ಅನ್ನು ನೀಡಬಹುದು. ಹೊಸ ವಿವಾಹಿತ ಮಹಿಳೆಯಾಗಿದ್ದರೆ ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ, ತನ್ನ ಪೋಷಕರ ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.

ಪ್ರಸ್ತುತ ರೇಷನ್ ಕಾರ್ಡ್ ನಿಮ್ಮ ಗುರುತಿನ ಪ್ರಮುಖ ಪುರಾವೆಗಳಲ್ಲಿ ಒಂದಾಗಿದೆ. ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಪಡಿತರ ಅಂಗಡಿಯಲ್ಲಿ ರೇಷನ್ ಅನ್ನು ಪಡೆಯಲು ಇದನ್ನು ಬಳಸಲಾಗುತ್ತದೆ. ಹಾಗೆಯೇ ಸರ್ಕಾರದ ಬೇರೆ ಯೋಜನೆಗಳ ಪ್ರಯೋಜನವನ್ನು ಪಡೆಯಲು ಕೂಡಾ ಈ ಕಾರ್ಡ್ ಅನ್ನು ಬಳಸಲಾಗುತ್ತದೆ. ನೀವು ಹೆಸರನ್ನು ಸೇರ್ಪಡೆ ಮಾಡಬೇಕಾದರೆ ನಿಮ್ಮ ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ರೇಷನ್‌ ಕಾರ್ಡ್‌ ಅಪ್‌ಡೇಟ್ ಮಾಡಿಕೊಳ್ಳಿ

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಹಂತ 2: ಹೋಮ್‌ ಪೇಜ್‌ನಲ್ಲಿರುವ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಆಯ್ಕೆ ಒತ್ತಿ ಕ್ಲಿಕ್ ಮಾಡಿ

ಹಂತ 3: ಹೊಸ ಫಾರ್ಮ್ ತೆರೆಯಲಿದೆ, ಹೊಸ ಕುಟುಂಬ ಸದಸ್ಯರ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ

ಹಂತ 4: ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಳ್ಳಿ

ಹಂತ 5: ಫಾರ್ಮ್ ಅನ್ನು ಸಬ್‌ಮಿಟ್ ಮಾಡಿದ ಬಳಿಕ ನಿಮಗೆ ರಿಜಿಸ್ಟ್ರೇಷನ್ ಸಂಖ್ಯೆ ಲಭ್ಯವಾಗಲಿದೆ.

ಹಂತ 6: ಪೋರ್ಟಲ್‌ನಲ್ಲಿ ನಿಮ್ಮ ಫಾರ್ಮ್‌ನ ಬಗ್ಗೆ ಮಾಹಿತಿ ತಿಳಿಯಲು ಈ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಬಳಸಿಕೊಳ್ಳಿ

ಹಂತ 7: ಅಧಿಕಾರಿಗಳು ಫಾರ್ಮ್ ಹಾಗೂ ದಾಖಲೆಗಳನ್ನು ಚೆಕ್‌ ಮಾಡಿಕೊಳ್ಳುತ್ತಾರೆ, ಎಲ್ಲ ಮಾಹಿತಿ ಸರಿಯಾಗಿದ್ದರೆ, ಫಾರ್ಮ್ ಅನ್ನು ಮಾನ್ಯ ಮಾಡಿ, ರೇಷನ್ ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಜನಪ್ರಿಯತೆ ನಟಿ ರಂಜನಿ ರಾಘವನ್.

Mon Jan 23 , 2023
  ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಜನಪ್ರಿಯತೆ ನಟಿ ರಂಜನಿ ರಾಘವನ್ ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ರಂಜನಿ ಸ್ಯಾಂಡಲ್​ವುಡ್​ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಕಿರುತೆರೆ, ಬೆಳ್ಳಿತೆರೆಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ರಂಜನಿ ರಾಘವನ್ ಕರಡಿ ರೆಸ್ಕೂ ಸೆಂಟರ್ ಗೆ ಭೇಟಿ ನೀಡಿದ್ರು. ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ಜೊತೆಗೆ ಪ್ರಾಣಿಗಳ ರಕ್ಷಣೆ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ […]

Advertisement

Wordpress Social Share Plugin powered by Ultimatelysocial