ಇಂದು ರಾಜ್ಯದ್ಯಂತ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾಗಿದೆ. ಇಂತಹ ಸಂದರ್ಭದಲ್ಲಿ ವಿವಿಧೆಡೆ ನಟ ದರ್ಶನ್ ಅಭಿಮಾನಿಗಳು, ಹಾಲು, ಪುಷ್ಟ ಸೇರಿದಂತೆ ವಿವಿಧ ಅಭಿಷೇಕಗಳನ್ನು ದರ್ಶನ್ ಕಟೌಟ್ ಗೆ ಮಾಡುತ್ತಿದ್ದಾರೆ. ಆದರೆ ತುಮಕೂರಿನಲ್ಲಿ ಮಾತ್ರ, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಕಟೌಟ್ ಗೆ ಮದ್ಯಾಭಿಷೇಕ ಮಾಡಿ, ಅತಿರೇಕ ಮೆರೆದಿದ್ದಾರೆ.
ತುಮಕೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಟೌಟ್ ಗೆ ದರ್ಶನ್ ಅಭಿಮಾನಿಗಳು ಮದ್ಯದ ಅಭಿಷೇಕ ಮಾಡಿರೋದು, ಈಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಿದೆ. ಚಿತ್ರಮಂದಿರಕ್ಕೆ ಆಗಮಿಸಿದಂತ ಸಾರ್ವಜನಿಕರು ಕೂಡ ಕಿರಿಕಿರಿ ಅನುಭವಿಸುವಂತಾಯಿತು. ಇದರಿಂದಾಗಿ ನಟ ದರ್ಶನ್ ಅಭಿಮಾನಿಗಳ ಅತೀರೇಕದ ವರ್ತನೆಗೆ ಸಾರ್ವಜನಿಕರು ಕೂಡ ಕಿಡಿಕಾರಿದ್ದಾರೆ.
ಇದನ್ನೂ ಓದಿ:ನಾಗಾಲ್ಯಾಂಡ್ಯಿಂದ ಬಂದ ಹ್ಯಾಕ್ ಚೋರರು ..!