ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಪ್ರವಾಸಿ ಬಸ್‌ನಲ್ಲಿ ಬೆಂಕಿ, ತಪ್ಪಿದ ಭಾರಿ ಅನಾಹುತ

 

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಪ್ರವಾಸಿ ಬಸ್‌ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ (Fire accident) ಕಾಣಿಸಿಕೊಂಡು ಅಪಾಯದ ಸನ್ನಿವೇಶ ನಿರ್ಮಾಣವಾಯಿತು. ಆದರೆ, ಚಾಲಕ ಮೆರೆದ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿತು.ಇದು ಗುಜರಾತ್ ನಿಂದ ಬಂದಿದ್ದ ಪ್ರವಾಸಿಗರನ್ನು ಹೊತ್ತು ಚಾಮುಂಡಿ ಬೆಟ್ಟಕ್ಕೆ ಸಾಗುತ್ತಿದ್ದ ಬಸ್‌. ಬೆಳಗ್ಗೆ ಸುಮಾರು ೫೦ರಷ್ಟು ಪ್ರಯಾಣಿಕರನ್ನು ಹೊತ್ತು ಅದು ಚಾಮುಂಡಿ ಬೆಟ್ಟದ ಕಡೆಗೆ ಹೊಗುತ್ತಿತ್ತು. ಆಗ ಬಸ್‌ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿತು.ಚಾಮುಂಡಿಬೆಟ್ಟ ಬಸ್ ನಿಲ್ದಾಣದ ಸಮೀಪ ಸಾಗುತ್ತಿದ್ದಾಗ ಬಸ್‌ನ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಶುರುವಾಯಿತು. ಬಳಿಕ ಪೈಪ್‌ನಿಂದ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಚಾಲಕ ಕೂಡಲೇ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ. ಕೂಡಲೇ ಬೆಂಕಿಯ ಸಂಪರ್ಕದ ವೈರ್ ಗಳನ್ನು ಕತ್ತರಿಸಿ ಹಾಕಿದ.ಡೀಸೆಲ್ ಲೀಕೇಜ್‌ನಿಂದಾಗಿ ಈ ರೀತಿ ಬೆಂಕಿ ಹುಟ್ಟಿಕೊಂಡಿತು ಎಂದು ಬಳಿಕ ತಿಳಿದುಬಂತು. ಒಂದೊಮ್ಮೆ ಬಸ್‌ ನಿಲ್ಲಿಸದೆ ಮುಂದೆ ಸಾಗಿದ್ದರೆ, ಬೆಂಕಿ ಹತ್ತಿಕೊಂಡಿದ್ದೇ ಗೊತ್ತಾಗದೆ ಇರುತ್ತಿದ್ದರೆ, ಬೆಂಕಿಗೆ ಕನೆಕ್ಟ್‌ ಅದ ಪೈಪ್‌ಗಳನ್ನು ಕತ್ತರಿಸದೆ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಚಾಲಕನ ಸಮಯಪ್ರಜ್ಞೆಯನ್ನು ಎಲ್ಲರೂ ಹೊಗಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ಗೆ ಮೇಜರ್‌ ಟ್ವಿಸ್ಟ್‌

Fri Jan 6 , 2023
  ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್‌ ೧೯ರಂದು ಬೆಳಕಿಗೆ ಬಂದ ಉಗ್ರಗಾಮಿ ಚಟುವಟಿಕೆಗಳಿಗೆ (Shivamogga terror) ಸಂಬಂಧಿಸಿ ತೀವ್ರ ತನಿಖೆಯನ್ನು ನಡೆಸುತ್ತಿರುವ ಎನ್‌ಐಎ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಗುರುವಾರ ಮಂಗಳೂರಿನ ಪಿಎ ಎಂಜಿನಿಯರಿಂಗ್‌ ಕಾಲೇಜಿಗೆ ದಾಳಿ ನಡೆಸಿ ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್‌ ತಾಜುದ್ದೀನ್‌ ಶೇಖ್‌ನನ್ನು ಬಂಧಿಸಿದ್ದ ಎನ್‌ಐಎ, ಶಿವಮೊಗ್ಗದಲ್ಲಿ ಹುಜೇರ್‌ ಫರಾನ್‌ ಬೇಗ್‌ ಎಂಬಾತನನ್ನು ವಶಕ್ಕೆ ಪಡೆದಿದೆ.ಸೆಪ್ಟೆಂಬರ್‌ ೧೯ರಂದು ಬೆಳಕಿಗೆ ಬಂದ ಶಿವಮೊಗ್ಗ ಟೆರರ್‌ ಚಟುವಟಿಕೆಗೆ […]

Advertisement

Wordpress Social Share Plugin powered by Ultimatelysocial