ಚಾಮರಾಜನಗರ: ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ

 

ಚಾಮರಾಜನಗರ: ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆದಿದೆ.

ವಿಶೇಷ ದರ್ಶನಕ್ಕೆ ಟಿಕೆಟ್ ನೀಡಲು ಸಿಬ್ಬಂದಿ ಕುಳಿತಿದ್ದ. ಈ ವೇಳೆ ಭಕ್ತನೊಬ್ಬನಿಗೆ ಲಾಡು ಜತೆಗೆ ಹಣದ ಚೀಲವನ್ನು ನೀಡಿದ್ದಾನೆ.

ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣದ ಚೀಲವನ್ನು ಇಡಲಾಗಿತ್ತು. ಅದರ ಬಗ್ಗೆ ಗೊತ್ತಿಲ್ಲದೆ ಪ್ರಸಾದದ ಪ್ಯಾಕೆಟ್​ ಜತೆಗೆ ಹಣದ ಚೀಲವನ್ನು ಸಿಬ್ಬಂದಿ ನೀಡಿದ್ದಾನೆ.

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಜನದಟ್ಟಣೆ ಹೆಚ್ಚಾಗಿದ್ದರಿಂದ ಗಾಬರಿಯಲ್ಲಿ ದೇವಸ್ಥಾನದ ಸಿಬ್ಬಂದಿ ಯಾಮಾರಿದ್ದಾರೆ. ಈ ವಿಚಾರ ತಿಳಿದು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪೇಪರ್ ಮ್ಯಾಗಜೀನ್‌ಗಾಗಿ ನಟ ರಣ್‌ವೀರ್ ಸಿಂಗ್ ಬೆತ್ತಲಾಗಿ ಕ್ಯಾಮರಾ ಮುಂದಿದ್ದರು.

Fri Jul 29 , 2022
  ಬಾಲಿವುಡ್ ನಟ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ವಿವಾದ ಸೃಷ್ಟಿಸಿ ನಟನ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ. ಆದರೆ ಈ ರೀತಿ ಆಗುತ್ತೆ ಅಂತ 5 ವರ್ಷಗಳ ಹಿಂದೆ ಕಿಂಗ್ ಖಾನ್ ಶಾರುಖ್ ಭವಿಷ್ಯ ನುಡಿದಿದ್ದರು ಅಂದರೆ ನಿಮಗೂ ಅಚ್ಚರಿ ಆಗುತ್ತದೆ. ಪೇಪರ್ ಮ್ಯಾಗಜೀನ್‌ಗಾಗಿ ನಟ ರಣ್‌ವೀರ್ ಸಿಂಗ್ ಬೆತ್ತಲಾಗಿ ಕ್ಯಾಮರಾ ಮುಂದಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ‘ಗುಂಡೇ’ ನಟನ ವರ್ತನೆಯ ಬಗ್ಗೆ […]

Advertisement

Wordpress Social Share Plugin powered by Ultimatelysocial