ಚಂಡಿಗಡ್: ಬರೋಡಾ ಕ್ರಿಕೆಟಿಗ ವಿಷ್ಣು ಸೋಲಂಕಿ ಅವರು 2022ರ ರಣಜಿ ಟ್ರೋಫಿ!

ಚಂಡಿಗಡ್: ಬರೋಡಾ ಕ್ರಿಕೆಟಿಗ ವಿಷ್ಣು ಸೋಲಂಕಿ ಅವರು 2022ರ ರಣಜಿ ಟ್ರೋಫಿ ಸೀಸನ್ ನಲ್ಲಿ ಶತಕದೊಂದಿಗೆ ಮಿಂಚಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸೋಲಂಕಿ ಉತ್ತಮ ಪ್ರದರ್ಶನ ನೀಡಿದ್ದಾರೆ.ಆದರೆ ಎಲ್ಲ ಕ್ರಿಕೆಟಿಗರಂತೆ ಶತಕ ಸಿಡಿಸಿ ಸಂಭ್ರಮಿಸಿದ್ದಾರೆಂದು ತಿಳಿದರೆ ಅದೆ ತಪ್ಪು.ವಿಷ್ಣು ಸೋಲಂಕಿಯವರ ಶತಕದ ಹಿಂದೆ ಒಂದು ದುರಂತದ ನೋವಿದೆ, ವಿಷ್ಣು ಸೋಲಂಕಿ ಅವರ ಪುತ್ರಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ಆರೋಗ್ಯ ಸಮಸ್ಯೆಯಿಂದ ಮಗು ಜನಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ. ಈ ನೋವಿನಿಂದ ಹೊರಬರಲು ವಿಷ್ಣು ರಣಜಿ ಟ್ರೋಫಿಯಲ್ಲಿ ಬ್ಯುಸಿಯಾಗಿದ್ದಾರೆ.ಸೋಲಂಕಿ ತನ್ನ ಮಗಳು ಸತ್ತಿದ್ದಾಳೆ ಎಂದು ತಿಳಿಯುತ್ತಿದ್ದಂತೆ ನೋವಿನಿಂದ ಹೊರಟು ಮಗಳ ಅಂತ್ಯಕ್ರಿಯೆಯನ್ನ ಮುಗಿಸಿದ್ದಾರೆ. ನೋವನ್ನ ಮರೆಯುವ ಸಲುವಾಗಿ ಮತ್ತೆ ಕ್ರೀಡಾಂಗಣದೊಳಗೆ ಕಾಲಿಟ್ಟಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸೋಲಂಕಿ ಶತಕ ಸಿಡಿಸಿದ್ದಾರೆ. ಹುಟ್ಟಿದ ಮಗುವನ್ನು ಕಳೆದುಕೊಂಡರೂ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ. ಈ ವಿಚಾರದಲ್ಲಿ ವಿಷ್ಣು ಸೋಲಂಕಿ ಅವರನ್ನು ಮೆಚ್ಚದೇ ಇರುವಂತಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬರೋಡಾ ಆಲ್ ರೌಂಡರ್ 161 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ ಶತಕದ ಸಿಡಿಸಿದ್ದಾರೆ. ಪ್ರಸ್ತುತ ಬರೋಡಾ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 398 ರನ್ ಗಳಿಸಿದೆ.ಇದಕ್ಕೂ ಮುನ್ನ ಚಂಡೀಗಢ ಮೊದಲ ಇನಿಂಗ್ಸ್‌ನಲ್ಲಿ 168 ರನ್‌ಗಳಿಗೆ ಆಲೌಟ್ ಆಗಿತ್ತು. ಬರೋಡಾ ಮೊದಲ ಇನಿಂಗ್ಸ್‌ನಲ್ಲಿ ಈಗಾಗಲೇ 230 ರನ್‌ಗಳ ಮುನ್ನಡೆ ಸಾಧಿಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರನ್ನು ಖರೀದಿಸುವಾಗ ಯಾವುದನ್ನು ಪಡೆಯಬೇಕು?

Sat Feb 26 , 2022
CNG ಕಾರಿನಂತಹ ಉತ್ತಮ ಮೈಲೇಜ್ ಮತ್ತು ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ಹೊಂದಿರುವ ಹಲವಾರು ಪ್ರಯೋಜನಗಳಿವೆ. ಈ ಕಾರಣಗಳಿಂದಾಗಿ, ಪಳೆಯುಳಿಕೆ ಇಂಧನ ಚಾಲಿತ ಕಾರುಗಳಿಗೆ ಹೋಲಿಸಿದರೆ ಭಾರತೀಯ ಗ್ರಾಹಕರು CNG ಕಾರುಗಳನ್ನು ಹೊಂದಲು ಹೆಚ್ಚು ಒಲವು ತೋರುತ್ತಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಗಳೊಂದಿಗೆ ಪ್ರತಿಧ್ವನಿಸುತ್ತಾ, ತಯಾರಕರು ತಮ್ಮ ಅಸ್ತಿತ್ವದಲ್ಲಿರುವ ಮಾದರಿಗಳ CNG ಆವೃತ್ತಿಗಳನ್ನು ಹೊರತರಲು ಪ್ರಾರಂಭಿಸಿದ್ದಾರೆ. ಆದರೆ ಕಾರ್ಖಾನೆಯ ಸಿಎನ್‌ಜಿ ಕಾರುಗಳ ಜೊತೆಗೆ, ನಿಮ್ಮ ಕಾರಿಗೆ ರಿಟ್ರೊಫಿಟ್ ಮಾಡಿದ ಸಿಎನ್‌ಜಿ ಕಿಟ್ ಪಡೆಯುವ ಆಯ್ಕೆಯೂ […]

Advertisement

Wordpress Social Share Plugin powered by Ultimatelysocial