ಮೂತ್ರಪಿಂಡದ ಸಮಸ್ಯೆ ಎದುರಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ.

ಬೆಂಗಳೂರು :ಮೂತ್ರಪಿಂಡವು ರಕ್ತವನ್ನು ಸ್ವಚ್ಛಗೊಳಿಸಲು ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಆದರೆ ಅನೇಕ ಬಾರಿ ಕಿಡ್ನಿಯ ಸಮಸ್ಯೆಗಳು ತಲೆದೋರುತ್ತವೆ. ಮೂತ್ರಪಿಂಡಡ ಸಮಸ್ಯೆ ಎದುರಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ.

ಪ್ರತಿದಿನ ನಿಂಬೆ ಹಣ್ಣಿನ ಪಾನೀಯವನ್ನು ಮೂರು ರೀತಿಯಲ್ಲಿ ಸೇವಿಸುವುದರಿಂದ ಕಿಡ್ನಿಯನ್ನು ಸ್ವಚ್ಚಗೊಳಿಸುವುದು ಸಾಧ್ಯವಾಗುತ್ತದೆ. ಕಿಡ್ನಿ ಶುಚಿಗೊಳಿಸುವ ಈ ಪಾನೀಯವನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ನೋಡೋಣ.

ದೇಹದಲ್ಲಿ ಮೂತ್ರಪಿಂಡದ ಪ್ರಾಮುಖ್ಯತೆ ಏನು?
ಮೂತ್ರಪಿಂಡದ ಮುಖ್ಯ ಕಾರ್ಯವೆಂದರೆ ಮೂತ್ರದ ಮೂಲಕ ದೇಹದಿಂದ ಕೊಳಕು ಮತ್ತು ದ್ರವವನ್ನು ತೆಗೆದುಹಾಕುವುದು. ಇದಲ್ಲದೆ, ಮೂತ್ರಪಿಂಡವುಮಾನವ ದೇಹದಲ್ಲಿನ ಉಪ್ಪು, ಪೊಟ್ಯಾಸಿಯಮ್ ಮತ್ತು ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ. ನಮ್ಮ ದೇಹದ ಇತರ ಭಾಗಗಳು ಕಾರ್ಯನಿರ್ವಹಿಸಲು ಅಗತ್ಯವಾದ ಹಾರ್ಮೋನುಗಳು ಕೂಡಾ ಮೂತ್ರಪಿಂಡದಿಂದ ಬಿಡುಗಡೆಯಾಗುತ್ತವೆ.

ನಿಂಬೆ ಮೂತ್ರಪಿಂಡಗಳಿಗೆ ಪ್ರಯೋಜನಕಾರಿಯಾಗಿದೆ :
ಹಾರ್ವರ್ಡ್ ವರದಿಯ ಪ್ರಕಾರ, ಪ್ರತಿದಿನ 2 ನಿಂಬೆ ರಸವನ್ನು ಕುಡಿಯುವುದರಿಂದ ಮೂತ್ರದ ಸಿಟ್ರೇಟ್ ಹೆಚ್ಚಾಗುತ್ತದೆ ಮತ್ತು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕಳು ಸಹಾಯ ಮಾಡುತ್ತದೆ. ದಿನಕ್ಕೆ 2 ರಿಂದ 2.5 ಲೀಟರ್ ಮೂತ್ರ ವಿಸರ್ಜಿಸುವ ಜನರಿಗೆ ಕಿಡ್ನಿ ಸ್ಟೋನ್ ಆಗುವ ಅಪಾಯ ಕಡಿಮೆ.

ಕಿಡ್ನಿಗಾಗಿ ನಿಂಬೆ ಪಾನೀಯಗಳು :
1. ಪುದಿನಾ ಜೊತೆ ನಿಂಬೆ
ಒಂದು ಲೋಟ ನೀರಿಗೆ ನಿಂಬೆ ರಸ, ಪುದೀನ ಎಲೆಗಳುಮತ್ತು ಸ್ವಲ್ಪ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಇದನ್ನೂ ಸೇವಿಸಿ. ಮೂತ್ರಪಿಂಡದ ಆರೋಗ್ಯಕ್ಕೆ ಇದು ಬೆಸ್ಟ್ ಪಾನೀಯ. ಕಿಡ್ನಿ ಆರೋಗ್ಯಕ್ವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ.

2. ಮಸಾಲಾ ಲೆಮನ್ ಸೋಡಾ
ಒಂದು ಲೋಟದಲ್ಲಿ ನಿಂಬೆ ರಸ, ಜೀರಿಗೆ-ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ಸೋಡಾ ಮಿಶ್ರಣ ಮಾಡಿ ಸೇವಿಸಿ. ಈ ರೀತಿಯಾಗಿ ನಿಮ್ಮ ಮೂತ್ರಪಿಂಡಕ್ಕೆ ಅಗತ್ಯವಿರುವ ಆರೋಗ್ಯಕರ ಪಾನೀಯವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.

3. ಎಳ ನೀರಿನೊಂದಿಗೆ ನಿಂಬೆ :
ಮೂತ್ರಪಿಂಡದ ಆರೋಗ್ಯಕ್ಕಾಗಿ ಎಳನೀರನ್ನು ಸೇವಿಸಬಹುದು. ಅದರಲ್ಲೂ ಏಳನೀರಿನೊಂದಿಗೆ ನಿಂಬೆ ರಸ ಬೆರೆಸಿದರೆ ಅದು ಉತ್ತಮ ರಿಸಲ್ಟ್ ನೀಡುತ್ತದೆ. ಇದನ್ನೂ ನಿತ್ಯವೂ ಸೇವಿಸಬಹುದು.

ಮೇಲೆ ತಿಳಿಸಿದ ಪಾನೀಯವನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಕುಡಿಯಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನದಿಂದ ಪತ್ರಿಕಾಗೋಷ್ಠಿ

Thu Feb 16 , 2023
ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನದಿಂದ ಪತ್ರಿಕಾಗೋಷ್ಠಿ ಸಿದ್ದರಾಮಯ್ಯ ವಿರುದ್ದ ಸಚಿವ ಅಶ್ವಥ್ ನಾರಾಯಣ್ ಪ್ರಚೋದನೆಕಾರಿ ಹೇಳಿಕೆ ನೀಡಿದ ಹಿನ್ನಲೆ. ಅಶ್ವಥ್ ನಾರಾಯಣ್ ಹೇಳಿಕೆಗೆ ಕಿಡಿಕಾರಿದ ಸಿದ್ದರಾಮಯ್ಯ ಅಭಿಮಾನಿ ಬಳಗ. ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ನಡೆದ ಸುದ್ದಿಗೋಷ್ಠಿ. ನಾಳೆ ನರಸೀಪುರದಲ್ಲಿ ಅಶ್ವಥ್ ನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಿದ್ದು ಅಭಿಮಾನಿಗಳ ತೀರ್ಮಾನ. ಸಿದ್ದರಾಮಯ್ಯನವರು ಈ ರಾಜ್ಯ ಕಂಡ ಧೀಮಂತ ನಾಯಕ. ಇಂತಹ ವ್ಯಕ್ತಿಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ. […]

Advertisement

Wordpress Social Share Plugin powered by Ultimatelysocial