ಚಾರ್ಲ್ಸ್ ಡಿಕನ್ ಮಹಾನ್ ಕಥೆಗಾರ.

ಚಾರ್ಲ್ಸ್ ಡಿಕನ್ಸ್ ಇಂಗ್ಲೆಂಡಿನ ಪೋರ್ಟ್ಸ್ ಮೌತ್ ಎಂಬಲ್ಲಿ 1812ರ ಫೆಬ್ರುವರಿ 7ರಂದು ಜನಿಸಿದರು. ಆತ ತನ್ನ ತಂದೆ ತಾಯಂದಿರ ಎಂಟನೆಯ ಮಗು. ಆತನ ತಾಯಿ ರಾಜಮನೆತನದ ಸೇವಕಿಯಾಗಿಯೂ, ತಂದೆ ನೌಕಾದಳದಲ್ಲಿನ ಗುಮಾಸ್ತರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.ಚಾರ್ಲ್ಸ್ ಇನ್ನೂ ಬಾಲ್ಯದಲ್ಲಿರುವಾಗಲೇ ಆತನ ತಂದೆ ಅತೀವ ಸಾಲ ಮಾಡಿ ಜೈಲು ಸೇರಿಬಿಟ್ಟ. ಹೀಗಾಗಿ ಚಾರ್ಲ್ಸ್ ಕಪ್ಪು ಪಾಲೀಶ್ ತಯಾರಿಕಾ ಘಟಕದಲ್ಲಿ ಬಾಲ ಕಾರ್ಮಿಕನಾಗಿ ಅತ್ಯಂತ ದಾರುಣ ಬಡತನದ ದಿನಗಳಲ್ಲಿ ಬದುಕನ್ನು ಸವೆಸುವ ದುರ್ದೆಶೆಯನ್ನು ಅನುಭವಿಸಿದ. ಈ ತೆರನಾದ ಆತನ ಬದುಕಿನ ಎಳೆಯನ್ನು ಆತನ ಬದುಕಿನ ಒಂದು ಭಾಗವೇ ಎಂಬಂತಿರುವ ‘ಡೇವಿಡ್ ಕಾಪರ್ ಫೀಲ್ಡ್’ ಕಥಾನಕ ಕಣ್ಣಮುಂದೆ ನಿಲ್ಲುವಂತೆ ಮಾಡುತ್ತದೆ. ಬದುಕಿನ ಈ ದಾರುಣ ಅನುಭವಗಳು ಆತನಲ್ಲಿ ಸಾಮಾಜಿಕ ಸಮಾನತೆ ಮತ್ತು ಮಾನವನ ಬದುಕಿನ ರೀತಿಯಲ್ಲಿ ಆಗಬೇಕಾದ ಸುಧಾರಣೆಗಳ ಬಗೆಗೆ ಕೂಲಂಕಷವಾಗಿ ಚಿಂತಿಸಲು ಪ್ರೇರೇಪಣೆ ನೀಡಿದವು.ಬದುಕಿನಲ್ಲಿ ದಾರುಣ ಸ್ಥಿತಿ ಎದುರಾಗಿದ್ದರೂ ಓದಿನ ಹವ್ಯಾಸ ಚಾರ್ಲ್ಸ್ ಡಿಕನ್ಸನಲ್ಲಿ ಮನೆಮಾಡಿಕೊಂಡಿತ್ತು. ಆ ಕಾಲದ ಶ್ರೇಷ್ಠ ಕಲಾತ್ಮಕ ಮತ್ತು ಸಾಹಿತ್ಯಕ ಕೃತಿಗಳ ಬಗ್ಗೆ ಆತ ಅಭಿರುಚಿ ಬೆಳೆಸಿಕೊಂಡು ಮೇರುಮಟ್ಟದ ಚಿಂತಕನಾಗಿ ರೂಪುಗೊಳ್ಳತೊಡಗಿದ್ದ. ಚಿಕ್ಕವಯಸ್ಸಿನಲ್ಲಿ ಆತನನ್ನು ನೋಡಿಕೊಳ್ಳುತ್ತಿದ್ದ ದಾದಿ ಹೇಳುತ್ತಿದ್ದ ಕಥೆಗಳು ಮತ್ತು ರಂಗಮಂಚದಲ್ಲಿ ಕಂಡ ಪ್ರದರ್ಶನಗಳು ಆತನನ್ನು ಅತೀವವಾಗಿ ಪ್ರಭಾವಿಸಿದ್ದವು. ಜೊತೆಗೆ ಓದುವ ಹವ್ಯಾಸ ಆತನಿಗೆ ಪ್ರಿಯವೆನಿಸಿತ್ತು. ಮಿಗೆಲ್ ದೆ ಸೆರವಾಂಟಸ್ ಬರೆದ ‘ಡಾನ್ ಕಕ್ವಿಕ್ಸೋಟ್’, ಹೆನ್ರಿ ಫೀಲ್ಡಿಂಗನ ‘ಟಾಮ್ ಜೋನ್ಸ್’ ಮತ್ತು ‘ಅರೇಬಿಯನ್ ನೈಟ್ಸ್’ ಮುಂತಾದ ಸಾಹಸ ಕಥೆಗಳು ಆತನಿಗೆ ಬಲು ಇಷ್ಟವಾಗಿದ್ದವು. ಈ ಎಲ್ಲ ಪ್ರಭಾವಗಳು ಆತನ ಕೃತಿ ರಚನೆಗಳನ್ನು ಕುತೂಹಲಕಾರಿ ಧಾರಾವಾಹಿಯಾಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದವು.ತಂದೆ ಸೆರೆಮನೆಯಿಂದ ಬಿಡುಗಡೆಗೊಂಡ ನಂತರದಲ್ಲಿ ಡಿಕನ್ಸನು ವೆಲ್ಲಿಂಗ್ಟನ್ ಹೌಸ್ ಅಕಾಡೆಮಿ ಶಾಲೆಯಲ್ಲಿ ಒಂದಿಷ್ಟು ಕಲಿತ. ಆತ ಶಾಲೆಯಲ್ಲಿ ಕಲಿತದ್ದು ಕಡಿಮೆ. ಆದರೂ ಶೀಘ್ರಲಿಪಿಯನ್ನು ತಾನೇ ಸ್ವಯಂ ಅಭ್ಯಸಿಸಿ ಪತ್ರಕರ್ತನಾಗಿ ತನ್ನ ಭವಿತವ್ಯವನ್ನು ಬರೆಯ ಹೊರಟ. ತನ್ನ ಹದಿನಾರನೆಯ ವಯಸ್ಸಿನಲ್ಲಿ ಕೋರ್ಟಿನಲ್ಲಿ ವರದಿಗಾರನಾಗಿ ಹುದ್ದೆ ಗಳಿಸಿದ ಡಿಕನ್ಸ್ ಮುಂದೆ ಪಾರ್ಲಿಮೆಂಟಿನ ಕಲಾಪಗಳನ್ನು ಭಿತ್ತರಿಸುವ ‘ಮಿರರ್ ಆಫ್ ಪಾರ್ಲಿಮೆಂಟ್’ ಪತ್ರಿಕೆಯ ವರದಿಗಾರನಾದ. ಈ ಸಮಯದಲ್ಲಿ ಬ್ರಿಟಿಷ್ ಗ್ರಂಥಾಲಯದಲ್ಲಿ ತೀವ್ರ ಅಧ್ಯಯನ ನಿರತನಾಗುವುದರ ಜೊತೆಗೆ ಹವ್ಯಾಸಿ ರಂಗ ತಂಡಗಳೊಂದಿಗೆ ಅಭಿನಯಿಸತೊಡಗಿದ. ಅಭಿನಯ ಕಲೆಯಲ್ಲಿ ಆತ ಹೊಂದಿದ್ದ ಅನುಭೂತಿಗಳು ಆತನಿಗೆ, ತನ್ನ ಪಾತ್ರಗಳ ಸೃಷ್ಟಿಯಲ್ಲಿ ತನ್ನನ್ನೇ ತಾನು ಅಭಿವ್ಯಕ್ತಿಸಿಕೊಳ್ಳಬಲ್ಲ ಪ್ರಾವೀಣ್ಯತೆಯನ್ನು ಮೈಗೂಡಿಸಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿ. ಕೆ. ಸತ್ಯ ಪ್ರಸಿದ್ಧ ಕಲಾವಿದ

Tue Feb 7 , 2023
ಜಿ. ಕೆ. ಸತ್ಯ ಪ್ರಸಿದ್ಧ ಕಲಾವಿದರಾಗಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಕನ್ನಡಪರ ಹೋರಾಟಗಾರರಾಗಿ, ಕಾರ್ಮಿಕ ಒಕ್ಕೂಟದ ನಾಯಕರಾಗಿ ಹೀಗೆ ಬಹುಮುಖಿ ವ್ಯಕ್ತಿತ್ವದವರು.ಜಿ. ಕೆ. ಸತ್ಯ ಅವರು 1943ರ ಫೆಬ್ರವರಿ 7ರಂದು ಜನಿಸಿದರು.ಬಹುಮುಖಿ ಪ್ರತಿಭೆಯ ಜಿ. ಕೆ. ಸತ್ಯ ಅವರು ಎದ್ದು ಕಾಣುವುದು ಅವರ ಸುಂದರ ರೇಖಾಚಿತ್ರಗಳಿಂದ. 1960ರ ವರ್ಷದಿಂದ 5 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾಲೋಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸತ್ಯ ಅವರ ಪ್ರಾರಂಭಿಕ ಚಿತ್ರಗಳು ಜನಪ್ರಗತಿಯಂತಹ ಪತ್ರಿಕೆಗಳಲ್ಲಿ ಕಂಡುಬರುತ್ತವೆ.ನಾಡಿನ ಪ್ರಸಿದ್ಧ ಚಿತ್ರಕಲಾವಿದರೂ […]

Advertisement

Wordpress Social Share Plugin powered by Ultimatelysocial