ಅಡುಗೆ ಮನೆಯಲ್ಲೇ ಇರುವ ಈ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ!

ಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು ಯಾವುದು? ಅದಕ್ಕೇನು ಮದ್ದು ಅನ್ನೋದನ್ನು ನೋಡೋಣ.

ಮುಟ್ಟಿನ ನೋವು :ಸ್ತ್ರೀಯರಿಗೆ ಪ್ರತಿ ತಿಂಗಳು ಮುಟ್ಟಿನ ನೋವು ಸಾಮಾನ್ಯ.

ಆ ನೋವಿನಿಂದ ಪಾರಾಗಲು ಪ್ರತಿನಿತ್ಯ ತಣ್ಣೀರಿಗೆ 2-3 ನಿಂಬೆಹಣ್ಣಿನ ರಸ ಬೆರೆಸಿ ಕುಡಿಯಿರಿ.

ದೀರ್ಘ ಕಾಲದ ತಲೆನೋವು : ನಿಮಗೆ ಆಗಾಗ ತಲೆನೋವು ಬರ್ತಾ ಇದ್ರೆ ಸೇಬು ಹಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ ಉಪ್ಪು ಹಾಕಿಕೊಂಡು ಪ್ರತಿದಿನ ಸೇವಿಸಿ.

ವಾಯು (ಗ್ಯಾಸ್ ಟ್ರಬಲ್) : ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಕಾಲು ಚಮಚದಷ್ಟು ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ರಿಲೀಫ್ ಸಿಗುತ್ತದೆ.

ಗಂಟಲು ನೋವು : ಗಂಟಲು ನೋವಿಗೆ ಸುಲಭವಾದ ಮನೆಮದ್ದಿದೆ. 2-3 ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಎಲೆಯ ಅಂಶ ಬಿಟ್ಟುಕೊಂಡ ಬಳಿಕ ಆ ನೀರಿನಿಂದ ಬಾಯಿ ಮುಕ್ಕಳಿಸಿ.

ಬಾಯಿ ಹುಣ್ಣು : ಬಾಳೆಹಣ್ಣು ಮತ್ತು ಜೇನುತುಪ್ಪ ಸೇರಿಸಿ ನುಣ್ಣಗಿನ ಪೇಸ್ಟ್ ಮಾಡಿ. ಅದನ್ನು ಬಾಯಿ ಹುಣ್ಣಿಗೆ ಹಚ್ಚಿದರೆ ನೋವು ಮಾಯವಾಗುತ್ತದೆ.

ಸೈನಸ್ : ಆರ್ಗೆನಿಕ್ ಸೈಡರ್ ವಿನೆಗರ್ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ ಅರ್ಧ ಕಪ್ ನೀರಿನಲ್ಲಿ ಕುದಿಸಿ, ಅದು ಬಿಸಿಯಾಗಿದ್ದಾಗಲೇ ಕುಡಿಯಿರಿ.

ಅಧಿಕ ರಕ್ತದೊತ್ತಡ : ಪ್ರತಿದಿನ ಬೆಳಿಗ್ಗೆ ಹಾಲಿನೊಂದಿಗೆ ನೆಲ್ಲಿಕಾಯಿ ಸೇವಿಸಿದ್ರೆ ರಕ್ತದೊತ್ತಡ ಕಡಿಮೆಯಾಗುತ್ತದೆ.

ಅಸ್ತಮಾ : ಅಸ್ತಮಾ ಸಮಸ್ಯೆ ಇರುವವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ದಾಲ್ಚಿನಿ ಪುಡಿ ಸೇರಿಸಿ ಸೇವಿಸಿ.

ತಲೆಹೊಟ್ಟು : ಇದು ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ತೆಂಗಿನೆಣ್ಣೆಗೆ ಕರ್ಪೂರ ಮಿಶ್ರಣ ಮಾಡಿ ಪ್ರತಿದಿನ ಮಲಗುವ ಮುನ್ನ ತಲೆಗೆ ಹಚ್ಚುತ್ತಾ ಬಂದರೆ ಹೊಟ್ಟು ಮಾಯವಾಗುತ್ತದೆ.

ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು : ನೆಲ್ಲಿಕಾಯಿಯನ್ನು ಒಣಗಿಸಿ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ. ಅದನ್ನು ತೆಂಗಿನೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ತಲೆಗೆ ಮಾಲೀಶ್ ಮಾಡಿದರೆ ಕೂದಲು ಬೆಳ್ಳಗಾಗುವುದಿಲ್ಲ.

ಕಪ್ಪು ಕಲೆಗಳು (ಡಾರ್ಕ್ ಸರ್ಕಲ್ಸ್) : ಕಣ್ಣುಗಳ ಸುತ್ತ ಮೂಡುವ ಡಾರ್ಕ್ ಸರ್ಕಲ್ ಗಳನ್ನು ತೊಲಗಿಸಲು ಸುಲಭ ಉಪಾಯವಿದೆ. ಗ್ಲಿಸರಿನ್ ಗೆ ಕಿತ್ತಳೆ ರಸ ಮಿಶ್ರಣ ಮಾಡಿ ಕಪ್ಪು ಕಲೆಗಳ ಮೇಲೆ ಹಚ್ಚಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಸಿಲ ಬೇಗೆಗೆ ಬೆಸ್ಟ್ ಫ್ರೂಟ್ ಕಲ್ಲಂಗಡಿ, ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..

Tue Feb 21 , 2023
ಬಿಸಿಲಿನ ಝಳವನ್ನು ತಣಿಸೋಕೆ ಹಣ್ಣುಗಳ ಮೊರೆ ಹೋಗಲೇಬೇಕು, ನೀರಿನಂಶ ಹೆಚ್ಚಿರುವುದರಿಂದ ಡೀಹೈಡ್ರೇಟ್ ಆಗುವ ಸಮಸ್ಯೆ ಇರುವುದಿಲ್ಲ. ಕಲ್ಲಂಗಡಿ ಹಣ್ಣಿನ ಸೀಸನ್‌ನಲ್ಲಿ ಹಣ್ಣು ತಿಂದುಬಿಡಿ, ಇದರಿಂದ ಏನೆಲ್ಲಾ ಲಾಭ ಇದೆ ನೋಡಿ.. ಮುಖ್ಯವಾದ ಲಾಭ ಅಂದ್ರೆ ನೀರು ಕುಡಿಯೋ ಉತ್ತಮ ವಿಧಾನ ಆರೋಗ್ಯಕರ ಕಿಡ್ನಿ ನಿಮ್ಮದಾಗುತ್ತದೆ ನಿಮ್ಮ ಎನರ್ಜಿ ಬೂಸ್ಟ್ ಆಗುತ್ತದೆ. ದೃಷ್ಟಿ ಉತ್ತಮವಾಗುತ್ತದೆ ಬ್ಲಡ್ ಪ್ರೆಶರ್ ಕಡಿಮೆಯಾಗುತ್ತದೆ. ನಿಮ್ಮ ಚರ್ಮ ಹೈಡ್ರೇಟ್ ಆಗಿ ಇರುತ್ತದೆ. ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ. ಉದ್ದನೆಯ […]

Related posts

Advertisement

Wordpress Social Share Plugin powered by Ultimatelysocial