ಚೆನ್ನೈ ಹೋಟೆಲ್​ನಲ್ಲಿ ಆಫರ್​ ಬೋರ್ಡ್​, ಅಸಲಿಯತ್ತು ಬಯಲು

 

ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್​ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕವನ್ನು ಗ್ರೇಟರ್​ ಚೆನ್ನೈ ಪೊಲೀಸರು ಕಳೆದ ಶನಿವಾರ (ಡಿ. 24) ತೆರವುಗೊಳಿಸಿದ್ದು, ಹೋಟೆಲ್​ ಮಾಲೀಕರ​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚೆನ್ನೈ ನಾಗರಿಕರೊಬ್ಬರು ಹೋಟೆಲ್​ ಮುಂದಿನ ಡಿಜಿಟಲ್​ ಜಾಹಿರಾತು ಫಲಕವನ್ನು ನೋಡಿ ತಮ್ಮ ಮೊಬೈಲ್​ನಲ್ಲಿ ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿ, ಟ್ವಿಟರ್​ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಲಿಟಲ್​ ಮೌಂಟ್​ ಮೆಟ್ರೋ ಬಳಿಯ ಕಂಬವೊಂದರಲ್ಲಿ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಅದರಲ್ಲಿ ಪುರುಷರೇ ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವುದೇ ಹುಡುಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಬರೆಯಲಾಗಿತ್ತು.ಈ ವಿಚಾರವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಘಟಕದ ಸದಸ್ಯರು ಡಿ.24ರಂದು ಪ್ರತಿಭಟನೆ ನಡೆಸಿ, ಹೋಟೆಲ್​ ಮಾಲೀಕ ಅಥವಾ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚೆನ್ನೈ ಪೊಲೀಸರನ್ನು ಒತ್ತಾಯಿಸಿದ್ದರು.ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಡಿಜಿಟಲ್​ ಜಾಹಿರಾತು ಫಲಕವನ್ನು ತೆಗೆದಿದ್ದು, ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಹೋಟೆಲ್​ನ ವೈ-ಫೈ ನೆಟ್‌ವರ್ಕ್‌ ಹ್ಯಾಕ್​ ಮಾಡಿ ಅಪರಿಚಿತ ವ್ಯಕ್ತಿ ಈ ರೀತಿ ಮಾಡಿದ್ದಾನೆಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ನಮ್ಮ ವೈ ಫೈ ಎಲ್ಲರಿಗೂ ಮುಕ್ತವಾಗಿದೆ. ಯಾವುದೇ ಪಾಸ್​ವರ್ಡ್​ನಿಂದ ನೆಟ್​ವರ್ಕ್​ ಅನ್ನು ಸುರಕ್ಷಿತವಾಗಿ ಇರಿಸಿರಲಿಲ್ಲ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

6,000 ಕೊಡವ ಕುಟುಂಬದಿಂದ ಗಿನ್ನಿಸ್ ದಾಖಲೆಯ ಸಾಧನೆ

Mon Dec 26 , 2022
ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಕೊಡವ ಸಮುದಾಯದ 6000ಕ್ಕೂ ಅಧಿಕ ಮಂದಿ ಒಟ್ಟಿಗೆ ಸೇರಿದ್ದರು.ಒಂದೇ ಸೂರಿನಡಿ ಅತಿ ದೊಡ್ಡ ಕುಟುಂಬ ಕೂಟದ ವಿಶ್ವ ದಾಖಲೆಯನ್ನು ಮುರಿಯಲು ಅವರು ಒಟ್ಟುಗೂಡಿದರು.ಕೊಡವ ಕ್ಲಾನ್ ಪೋರ್ಟಲ್ ಈ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ಒಕೂಟ ಎಂದು ಕರೆಯಲಾಯಿತು. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಸಾಬೀತುಪಡಿಸಲು ಸುಮಾರು 6500 ಜನರು ಒಂದೇ ಸೂರಿನಡಿ ಜಮಾಯಿಸಿದರು ಎಂದು ಕೊಡವ ಕ್ಲಾನ್ ಪೋರ್ಟಲ್ ಸಂಸ್ಥಾಪಕ ಜಿ ಕಿಶೂ […]

Advertisement

Wordpress Social Share Plugin powered by Ultimatelysocial