ಇಲ್ಲಿದೆ ರುಚಿಕರವಾದ ʼಚಿಕನ್ʼ ಚಾಪ್ಸ್ ಮಾಡುವ ವಿಧಾನ

ಚಿಕನ್ ಪ್ರಿಯರಿಗೆ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಚಿಕನ್ ಚಾಪ್ಸ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿದು ನೋಡಿ.

ಬೇಕಾಗುವ ಸಾಂಗ್ರಿಗಳು;

ಈರುಳ್ಳಿ-1 ಸಣ್ಣಗೆ ಕತ್ತರಿಸಿದ್ದು, ಹಸಿಮೆಣಸು-5, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಸ್ವಲ್ಪ, ಪುದೀನಾ ಸ್ವಲ್ಪ, 15 ಕಾಳು-ಕಾಳು ಮೆಣಸು, ಲವಂಗ-8, ಏಲ್ಕಕಿ-1, ಚಕ್ಕೆ-ಸಣ್ಣ ಪೀಸ್, ಶುಂಠಿ-1/2 ಇಂಚು, ಚಿಕನ್-1/2 ಕೆಜಿ, ಧನಿಯಾ-1 ಚಮಚ, ಎಣ್ಣೆ-ಸ್ವಲ್ಪ, ಅರ್ಧ ಕಪ್- ತೆಂಗಿನಕಾಯಿ ರುಬ್ಬಿಕೊಂಡಿದ್ದು, ಸ್ವಲ್ಪ ಅರಿಶಿನ , ನೀರು.

 

ಮಾಡುವ ವಿಧಾನ:

ಮೊದಲಿಗೆ ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಈರುಳ್ಳಿ ಸೇರಿಸಿ ಕೈಯಾಡಿಸಿ ನಂತರ ಶುಂಠಿ ಬೆಳ್ಳುಳ್ಳಿ, ಹಸಿಮೆಣಸು ಸೇರಿಸಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಆಮೇಲೆ ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಪುದೀನಾ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದು ಸ್ವಲ್ಪ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಅದಕ್ಕೆ ಸ್ವಲ್ಪ ಅರಿಶಿನ, ಧನಿಯಾ ಪುಡಿ ಸೇರಿಸಿ ರುಬ್ಬಿಕೊಳ್ಳಿ.

ನಂತರ ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಸೇರಿಸಿ ಅದು ಬಿಸಿಯಾಗುತ್ತಲೆ ಈರುಳ್ಳಿ ಹಾಕಿ. ಈರುಳ್ಳಿ ಕೆಂಪಗಾದ ಮೇಲೆ ಚಿಕನ್ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ. ಇದಕ್ಕೆ ಚಿಟಿಕೆ ಅರಿಶಿನ ಕೂಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಎಣ್ಣೆಯಲ್ಲಿಯೇ ಚಿಕನ್ ಬೇಯಲಿ. ನಂತರ ರುಬ್ಬಿಕೊಂಡ ಮಸಾಲೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಆಮೇಲೆ ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ನೀರು ಸೇರಿಸಿ ಕುಕ್ಕರ್ ಮುಚ್ಚಿ ವಿಷಲ್ ಕೂಗಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ಮೇಲೆ ತೆಂಗಿನಕಾಯಿ ಪೇಸ್ಟ್ ಹಾಕಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಿಯಾದ ಚಹಾವನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ! ಸರಿ ಯಾದ ಚಹಾ ವನ್ನು ಸರಿ ಯಾದ ಪ್ರಮಾ ಣದಲ್ಲಿ ತೆ ಗೆದು ಕೊಂಡ ರೆ ಆರೋ ಗ್ಯಕ್ಕೆ ತುಂಬಾ ಪ್ರ ಯೋ ಜ ನಕಾರಿ !ಪ್ರ ತಿಯೊ ಬ್ಬ ರೂ ಕೊರೆ ಯುವ ಚಳಿ ಗಾಲದ ಲ್ಲಿ ಚ ಹಾ ಕುಡಿಯ ಲು ಇಷ್ಟ ಪಡು ತ್ತಾರೆ . ಆದ ರೆ ಅ ದರ ಲ್ಲಿರು ವ ಕೆಫೀ ನ್ ಆರೋ ಗ್ಯದ ಮೇಲೆ ಪ್ರತಿ ಕೂ ಲ ಪರಿ ಣಾಮ ಬೀ ರಬ ಹು ದು ಎಂದು ಹೇಳ ಲಾಗು ತ್ತದೆ. ಆದ ರೆ , ಸರಿ ಯಾದ ಚಹಾವ ನ್ನು ಸ ರಿಯಾ ದ ಪ್ರ ಮಾ ಣದ ಲ್ಲಿ ತೆ ಗೆ ದುಕೊಂ ಡ ರೆ ಆ ರೋಗ್ಯ ಕ್ಕೆ ತುಂಬಾ ಪ್ರ ಯೋಜನ ಕಾರಿ ಎಂದು ತಜ್ಞ ರು ನಂ ಬುತ್ತಾರೆ. ಪ್ರತಿ ದಿನ ಚ ಹಾ ವನ್ನು ಕು ಡಿಯು ವುದು (ಹೃದ ಯ ಕ್ಕೆ ಉತ್ತಮ ಚ ಹಾ) ರಕ್ತದ ಲ್ಲಿನ ಕೊಲೆಸ್ಟ್ರಾ ಲ್ ಮ ಟ್ಟವ ನ್ನು ಕಡಿ ಮೆ ಮಾ ಡಲು ಸಹಾ ಯ ಮಾ ಡು ತ್ತದೆ ಯಂತೆ. ಅದೇ ಸಮ ಯದಲ್ಲಿ , ಇ ದು ಹೃದ್ರೋ ಗದ ಕ್ಯಾ ನ್ಸರ್ ಅಪಾಯ ವನ್ನು ಕ ಡಿ ಮೆ ಮಾ ಡಲು ಸ ಯ ಮಾಡು ತ್ತ ದೆ. ಆರೋ ಗ್ಯ ಸ ಮ ಯಾ ದೇ ತಿ ಚ ಹಾ ವ ನ್ನು ಆ ಯ್ಕೆ ಮಾ ಡು ವ ಮೊ ದ ಲು , ಫೀ ಸೂ ತೆಯನ್ನು ಅಥವಾ ಚಹಾದಲ್ಲಿ ಕೆಫೀನ್ ಪ್ರಮಾಣ ಎಷ್ಟಿ .

Thu Feb 10 , 2022
ಪ್ರತಿಯೊಬ್ಬರೂ ಕೊರೆಯುವ ಚಳಿಗಾಲದಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಕೆಫೀನ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ಆದರೆ, ಸರಿಯಾದ ಚಹಾವನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ನಂಬುತ್ತಾರೆ.ಪ್ರತಿದಿನ ಚಹಾವನ್ನು ಕುಡಿಯುವುದು (ಹೃದಯಕ್ಕೆ ಉತ್ತಮ ಚಹಾ) ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯಂತೆ. ಅದೇ ಸಮಯದಲ್ಲಿ, ಇದು ಹೃದ್ರೋಗದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. […]

Advertisement

Wordpress Social Share Plugin powered by Ultimatelysocial