ಆನೆಯ ಕೆಚ್ಚಲಿಗೆ ಬಾಯಿಯಿಟ್ಟು ಹಾಲು ಕುಡಿಯಲು ಯತ್ನಿಸಿದ 3 ವರ್ಷದ ಬಾಲಕಿ!!

ಗುವಾಹಟಿ: ಮೂರು ವರ್ಷದ ಬಾಲಕಿಯೊಬ್ಬಳು ಆನೆಯ ಕೆಚ್ಚಲಿಗೆ ಬಾಯಿಯಿಟ್ಟು ಅದರ ಹಾಲು ಕುಡಿಯುಲು ಯತ್ನಿಸಿದ ಘಟನೆ ಅಸ್ಸಾಂನ ಗೋಲ್ಗಾಟ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕಿಯ ದೈರ್ಯವನ್ನು ಕೊಂಡಾಡಿದ್ದಾರೆ. ಹರ್ಷಿತಾ ಬೋರಾ ಎನ್ನುವ ಬಾಲಕಿ ಆನೆ ಕ್ಯಾಂಪ್‌ನಲ್ಲಿ ಆಟವಾಡುತ್ತಿದ್ದಾಗ ಬಿನು ಎಂಬ ಆನೆಯ ಕಾಲುಗಳ ಬಳಿ ನಿಲ್ಲುವ ಸಾಹಸ ಮಾಡುತ್ತಾಳೆ. ಮುಂದುವರೆದು ಅದರ ಕೆಚ್ಚಲಿಗೆ ಬಾಯಿಯಿಟ್ಟು ಹಾಲು ಕುಡಿಯುಲು ನೋಡುತ್ತಾಳೆ. ಆದರೆ, ಕೆಚ್ಚಲು ನಿಲುಕದಿದ್ದಕ್ಕೆ ವಿಫಲ ಪ್ರಯತ್ನ ನಡೆಸಿ ಸುಮ್ಮನಾಗುತ್ತಾಳೆ. ಬಿನು ಆನೆಯು ಹರ್ಷಿತಾಳಿಗೆ ಕಾಲು ಬಳಿ ನಿಂತಿದ್ದರೂ ಏನೂ ಮಾಡದೇ ಮಾತೃ ವಾತ್ಸಲ್ಯವನ್ನು ತೋರಿದೆ. ಈ ಕುರಿತು ವಿ ಫಾರ್ ವೈರಲ್ ಎನ್ನುವ ಖಾತೆ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರ : ಕಂಟೈನರ್ ಗೆ ಕಾರು ಡಿಕ್ಕಿ - ಐವರು ಸ್ಥಳದಲ್ಲಿಯೇ ಸಾವು?

Sun Jan 30 , 2022
ಮಹಾರಾಷ್ಟ್ರ : ಪುಣೆ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಭೀಕರ ಕಾರು ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೆಳ್ಳಂಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟವರೆಲ್ಲಾ ಹರಿಯಾಣ ಮೂಲದವರು ಎಂದು ತಿಳಿದುಬಂದಿದೆ.ಲೋನಾವಾಲಾ ಸಮೀಪದ ಮುಂಬೈನಿಂದ ಪುಣೆ ಕಡೆಗೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ಕಂಟೈನರ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial