ಮಕ್ಕಳ ಕಲಿಕೆಗೆ ಕೋವಿಡ್ ಪೆಟ್ಟು

 

ಬೆಂಗಳೂರು/ಹೊಸದಿಲ್ಲಿ: ಸಚಿವಾಲಯ ನಡೆಸಿದ ಸಾಧನ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ದೇಶದ 3, 5, 7 ಮತ್ತು 10ನೇ ತರಗತಿಯ 34 ಲಕ್ಷ ಮಕ್ಕಳ ಸಮೀಕ್ಷೆ ನಡೆಸಲಾಗಿತ್ತು. 2017ರಲ್ಲೂ ಇಂಥದ್ದೇ ಸಮೀಕ್ಷೆಯನ್ನು ನಡೆಸಲಾಗಿದ್ದು, ಆಗಿನ ಸ್ಥಿತಿಗೆ ಹೋಲಿಸಿದರೆ 2021ರಲ್ಲಿ ಶೇ.

9ರಷ್ಟು ಕಲಿಕಾ ಸಾಮರ್ಥ್ಯ ಕುಸಿತವಾಗಿರುವುದು ಕಂಡು ಬಂದಿದೆ.

ಸಮೀಕ್ಷೆಯನ್ನು 2021ರ ನವೆಂಬರ್‌ನಲ್ಲಿ ನಡೆಸಲಾಗಿತ್ತು. ಇದರ ಪ್ರಕಾರ ಕೊರೊನಾ ಲಾಕ್‌ಡೌನ್‌ ಅಥವಾ ಮಕ್ಕಳ ಆನ್‌ಲೈನ್‌ ಕ್ಲಾಸ್‌ ಅವಧಿಯಲ್ಲಿ ಶೇ. 24ರಷ್ಟು ಮಕ್ಕಳಿಗೆ ಡಿಜಿಟಲ್‌ ಸಾಧನಗಳು ಸಿಕ್ಕಿರಲಿಲ್ಲ. ಶೇ. 38ರಷ್ಟು ಮಕ್ಕಳು ಮನೆಯಲ್ಲಿ ಕುಳಿತು ಪಾಠ ಕಲಿಯುವುದಕ್ಕೆ ಕಷ್ಟವಾಯಿತು ಎಂದಿದ್ದರೆ, ಶೇ. 80ರಷ್ಟು ಮಕ್ಕಳು ಶಾಲೆಯಲ್ಲೇ ಚೆನ್ನಾಗಿ ಪಾಠ ಕಲಿಯುತ್ತಿದ್ದೆವು ಎಂದಿದ್ದಾರೆ.

ಮುಂದೆ ಕಲಿಕಾ ವಿಧಾನದಲ್ಲಿ ಯಾವ ಬದಲಾವಣೆ ಮಾಡಬೇಕು ಎಂದು ಚಿಂತನೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂಕದಲ್ಲಿ ಕುಸಿತ :

ಮೂರನೇ ತರಗತಿ :

ದೇಶದಲ್ಲಿ ಈ ಮಕ್ಕಳು ಭಾಷಾ ವಿಷಯದಲ್ಲಿ ಈ ಬಾರಿ 62 ಅಂಕ ಪಡೆದಿದ್ದಾರೆ. 2017ರಲ್ಲಿ 68 ಅಂಕ ಪಡೆದಿದ್ದರು. ಗಣಿತದಲ್ಲಿ ಆಗ 64 ಪಡೆದಿದ್ದರೆ, ಈಗ 57 ಅಂಕ ಗಳಿಸಿದ್ದಾರೆ.

ಐದನೇ ತರಗತಿ :

ಗಣಿತದಲ್ಲಿ ರಾಷ್ಟ್ರೀಯ ಸರಾಸರಿ 44 ಅಂಕ. 2017ರಲ್ಲಿ 53 ಅಂಕ ಗಳಿಸಿದ್ದರು. ಭಾಷಾ ಲೆಕ್ಕಾಚಾರದಲ್ಲಿ 55 ಅಂಕ ಗಳಿಸಿದ್ದಾರೆ. ಆಗ 58 ಅಂಕವಿತ್ತು.

ಏಳನೇ ತರಗತಿ :

ಗಣಿತದಲ್ಲಿ 36 ಅಂಕ ಪಡೆದಿದ್ದಾರೆ. 2017ರಲ್ಲಿ ಇದು 42 ಇತ್ತು. ಭಾಷೆಯಲ್ಲಿ ಈಗ 53 ಅಂಕ ಗಳಿಸಿದ್ದು, ಆಗ 57 ಇತ್ತು.

ಹತ್ತನೇ ತರಗತಿ :

ಇವರಿಗೆ ಮೊದಲ ಬಾರಿಗೆ ಸರ್ವೇ ನಡೆದಿದೆ. ಗಣಿತದಲ್ಲಿ 32, ವಿಜ್ಞಾನದಲ್ಲಿ 35, ಸಮಾಜ ವಿಜ್ಞಾನದಲ್ಲಿ 37, ಇಂಗ್ಲಿಷ್‌ನಲ್ಲಿ 43 ಮತ್ತು ಆಧುನಿಕ ಭಾರತೀಯ ಭಾಷೆಯಲ್ಲಿ 41 ಅಂಕ ಗಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದೇನು ಜೈಲಾ ಅಥವಾ ಸ್ಪಾನಾ?

Fri May 27 , 2022
ಪಟಿಯಾಲ, ಪಂಜಾಬ್(ಮೇ.27): ಒಂದು ವರ್ಷ ಜೈಲು ಶಿಕ್ಷೆ   ಅನುಭವಿಸುತ್ತಿರುವ ಕಾಂಗ್ರೆಸ್   ನಾಯಕ ನವಜೋತ್ ಸಿಂಗ್ ಸಿಧು  ಅವರು ವಿಶೇಷ ಆಹಾರ ಪಡೆಯಲಿದ್ದಾರೆ. ಅವರ ಮೆಡಿಕಲ್ ಚೆಕಪ್ ನಂತರ ಅವರಿಗೆ ಡಯೆಟ್ ಆಹಾರ  ಸೂಚಿಸಲಾಗಿದೆ. ಸಿಧು ಇರೋದು ಜೈಲಲ್ಲೋ ಅಥವಾ ಸ್ಪಾನಲ್ಲೋ ಎನ್ನುವಂತಿದೆ ಈ ಲಕ್ಷುರಿ ಮೆನು. ಮೆನುವಿನಲ್ಲಿ ಸುಲಭವಾಗಿ ಇರಬಹುದಾದ ವಿಶೇಷ ಆಹಾರಕ್ರಮ ಇವರಿಗೆ ಲಭ್ಯವಾಗಲಿದೆ. ಕ್ರಿಕೆಟಿಗ-ರಾಜಕಾರಣಿಗೆ ನ್ಯಾಯಾಲಯವು ಅನುಮತಿಸಿದ ಆಹಾರದ ಭಾಗವಾಗಿ ತರಕಾರಿಗಳು, ಪೆಕನ್ ನಟ್ಸ್, ಆವಕಾಡೊ ಸೇರಿ […]

Advertisement

Wordpress Social Share Plugin powered by Ultimatelysocial