ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ.

ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ. ದೊಡ್ಡವರಿಗೂ ಕೂಡ ಈ ಚಾಕೋಚಿಪ್ಸ್ ಎಂದರೆ ಇಷ್ಟನೇ. ಇದನ್ನು ಹೊರಗಡೆಯಿಂದ ತರುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.ಡಾರ್ಕ್ ಚಾಕೋಲೆಟ್ ಅನ್ನು ಅರ್ಧ ಕಪ್ ಆಗುವಷ್ಟು ಕಟ್ ಮಾಡಿಟ್ಟುಕೊಳ್ಳಿ. ಒಂದು ಬೌಲ್ ಗೆ ಇದನ್ನು ಹಾಕಿ ಮೈಕೋ ಒವೆನ್ ನಲ್ಲಿ 1 ನಿಮಿಷಗಳ ಕಾಲ ಬಿಸಿ ಮಾಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಪೈಪಿಂಗ್ ಬ್ಯಾಗ್ ಗೆ ಈ ಮಿಶ್ರಣವನ್ನು ತುಂಬಿಸಿಕೊಂಡು ಕತ್ತರಿಯ ಸಹಾಯದಿಂದ ಪೈಪಿಂಗ್ ಬ್ಯಾಗ್ ನ ಕೆಳಗೆ ಚಿಕ್ಕ ತೂತು ಮಾಡಿಕೊಳ್ಳಿ.ನಂತರ ಒಂದು ಪ್ಲಾಸ್ಟಿಕ್ ಕವರ್ ಅನ್ನು ಒಂದು ಚಾಪಿಂಗ್ ಬೋರ್ಡ್ ಮೇಲೆ ಹಾಸಿ ಪೈಪಿಂಗ್ ಬ್ಯಾಗ್ ಸಹಾಯದಿಂದ ಚಾಕೋಲೆಟ್ ಮಿಶ್ರಣವನ್ನು ಚಿಕ್ಕ ಚಿಕ್ಕದ್ದಾಗಿ ಕವರ್ ಮೇಲೆ ಹಾಕಿಕೊಳ್ಳಿ. ನಂತರ ಚಾಪಿಂಗ್ ಬೋರ್ಡ್ ಸಮೇತ ಪ್ಲಾಸ್ಟಿಕ್ ಶೀಟ್ ಅನ್ನು ಫ್ರಿಡ್ಜ್ ನಲ್ಲಿ 15 ನಿಮಿಷಗಳ ಕಾಲ ಇಡಿ ಇದು ಗಟ್ಟಿಯಾಗುತ್ತದೆ. ನಂತರ ನಿಧಾನಕ್ಕೆ ಎಬ್ಬಿಸಿ ತೆಗೆದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್-19 ಸೋಂಕಿನ ನಂತರ ಒಂದು ವರ್ಷದವರೆಗೆ ಹೃದಯ ರಕ್ತನಾಳದ ಕಾಯಿಲೆಯ ಗಮನಾರ್ಹ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ!

Wed Feb 9 , 2022
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌ : ಕೋವಿಡ್-19 ಸೋಂಕಿನ ನಂತರ ಒಂದು ವರ್ಷದವರೆಗೆ ಹೃದಯ ರಕ್ತನಾಳದ ಕಾಯಿಲೆಯ ಗಮನಾರ್ಹ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ ಮತ್ತು ರೋಗವು ಹೆಚ್ಚು ತೀವ್ರವಾಗಿದ್ದರೆ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾದ 150,000 ಕ್ಕೂ ಹೆಚ್ಚು ಜನರ ದಾಖಲೆಗಳನ್ನು ಒಳಗೊಂಡ ವಿಶ್ಲೇಷಣೆಯು ತಿಳಿಸುತ್ತದೆ.ಈ ಅಧ್ಯಯನವು ಯುಎಸ್ ಡಿಪಾರ್ಟ್ ಮೆಂಟ್ ಆಫ್ ವೆಟರನ್ಸ್ ಅಫೇರ್ಸ್ ನ ಹೆಲ್ತ್ ಕೇರ್ ಡೇಟಾಬೇಸ್ ಗಳನ್ನು ಆಧರಿಸಿದೆ ಮತ್ತು […]

Advertisement

Wordpress Social Share Plugin powered by Ultimatelysocial