ಉಕ್ರೇನ್ ಕದನ: ಚೀನಾ ಸೇನಾ ಸಹಕಾರ ಕೋರಿದ ರಷ್ಯಾ ಸರ್ಕಾರ: ಅಮೆರಿಕ ಅರೋಪ

ವಾಷಿಂಗ್ಟನ್: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ, ಚೀನಾ ಸೇನೆಯ ಸಹಕಾರವನ್ನು ಕೋರಿದೆ ಎಂದು ಅಮೆರಿಕ ಆಧಿಕಾರಿಗಳು ಆರೋಪಿಸಿದ್ದಾರೆ. ಒಂದು ವೇಳೆ ರಷ್ಯಾ ಮನವಿಗೆ ಸ್ಪಂದಿಸಿ ಚೀನಾ ಸೇನಾ ಸಹಕಾರ ನೀಡಿದಲ್ಲಿ ಚೀನಾಗೆ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಸಿದೆ.ಚೀನಾ ರಷ್ಯಾಗೆ ನೆರವು ನೀಡಲು ನಾವು ಬಿಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ರಷ್ಯಾ ಪರ ಚೀನಾ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಬೈಡನ್ ಸರ್ಕಾರ ಆರೋಪಿಸಿದೆ. ರಷ್ಯಾ ಉಕ್ರೇನ್ ನಲ್ಲಿ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಬಳಸಲು ಸಹಾಯವಾಗುವಂತೆ ಚೀನಾ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.ರಷ್ಯಾಗೆ ಅಮೆರಿಕ ಸೇರಿದಂತೆ ಹಲವು ದೇಶಗಳು ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅದರಿಂದ ಪಾರಾಗಲು ಚೀನಾ ರಷ್ಯಾಗೆ ಸಹಕರಿಸುತ್ತಿದೆ ಎಂದೂ ಅಮೆರಿಕ ಆರೋಪಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಮ್ ಚರಣ್ ಮತ್ತು ರೈಮ್ - ಭಾರತೀಯ ಚಲನಚಿತ್ರೋದ್ಯಮದ ಮೋಹಕವಾದ ಜೋಡಿಯನ್ನು ಭೇಟಿ ಮಾಡಿ!

Mon Mar 14 , 2022
ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ಅವರ ಸಾಕುಪ್ರಾಣಿಗಳಿಗೆ ಪಟ್ಟಣವನ್ನು ಕೆಂಪು ಬಣ್ಣ ಬಳಿಯುವುದು ಹೇಗೆ ಎಂದು ಖಚಿತವಾಗಿ ತಿಳಿದಿದೆ. ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್ ಈ ನಕ್ಷತ್ರಗಳ ಕೆಲಸವನ್ನು ನಿಧಾನಗೊಳಿಸಿರಬಹುದು, ಆದರೆ ಇದು ಅವರು ತಮ್ಮ ಪ್ರೀತಿಯ ಮಕ್ಕಳೊಂದಿಗೆ ಕಳೆಯುವ ಸಮಯವನ್ನು ಹೆಚ್ಚಿಸಿದೆ. ಬಹಳಷ್ಟು ಬಿ-ಟೌನಿಗಳು ಇತ್ತೀಚೆಗೆ ಹೊಸ ಮುದ್ದಿನ ಪೋಷಕರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮುದ್ದಾದ ಒಡನಾಟದಿಂದ ನನ್ನ ಹೃದಯವನ್ನು ಗೆಲ್ಲುತ್ತಿದ್ದಾರೆ. ಅಂತಹ ಒಬ್ಬ ನಟ ರಾಮ್ […]

Advertisement

Wordpress Social Share Plugin powered by Ultimatelysocial