ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ಸಿಎಂ ವಿಡೀಯೋ ವೈರಲ್!

ಕೊರಟಗೆರೆ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶ
ಕೊರಟಗೆರೆ ಬಿಜೆಪಿ ಪಕ್ಷದಿಂದ ಪೊಲೀಸ್ ಠಾಣೆಗೆ ದೂರು ದಾಖಲು
ವಾಟ್ಸಪ್ ಮತ್ತು ಪೇಸ್ಬುಕ್ ತಾಣದಲ್ಲಿ ನೂರಾರು ಜನರಿಂದ ಶೇರ್ಸಿಎಂ ಮತ್ತು ಬಿಜೆಪಿ ಪಕ್ಷಕ್ಕೆ ಮುಜುಗರ ತರುವ ವಿಡಿಯೋ ವೈರಲ್
ಸುಳ್ಳು ವಿಡೀಯೊ ಸೃಷ್ಟಿಸಿದ ಕಾಂಗ್ರೇಸ್ ಪಕ್ಷದ ವಿರುದ್ದ ಆಕ್ರೋಶ
ಬಿಜೆಪಿ ಪಕ್ಷದಿಂದ ಕೊರಟಗೆರೆ ಬಿಜೆಪಿ ಕಚೇರಿಯಲ್ಲ್ಲಿ ಸುದ್ದಿಗೋಷ್ಟಿಕೊರಟಗೆರೆ:- ಕಾಂಗ್ರೇಸ್ ಪಕ್ಷದವರೇ ಡಾ.ಜಿ.ಪರಮೇಶ್ವರ್‌ರನ್ನ ಸೋಲಿಸ್ತಾರೇ ಎಂದು ಜನಸಂಕಲ್ಪ ಸಮಾವೇಶದ ವೇಳೆ ಸಿಎಂ ಭಾಷಣ ಮಾಡ್ತಾರೇ.. ಭಾಷಣ ಮುಗಿದ ಕ್ಷಣಾರ್ಧದಲ್ಲಿಯೇ ಸಿಎಂ ಭಾಷಣ ತಿರುಚಿದ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತೇ.. ಕೊರಟಗೆರೆ ಬಿಜೆಪಿ ಮಂಡಲದಿAದ ಪೊಲೀಸ್ ಠಾಣೆಗೆ ದೂರು ದಾಖಲಾದ ತಕ್ಷಣವೇ ವಿಡೀಯೊ ಒಂದೊದಾಗಿ ಡಿಲೀಟ್ ಆಗಿರುವ ಘಟನೆ ನಡೆದಿದೆ.ಕಾಂಗ್ರೇಸ್ ಪಕ್ಷ ಮತ್ತು ಡಾ.ಜಿ.ಪರಮೇಶ್ವರ್ ವಿರುದ್ದ ಸಿಎಂ ಬಸವರಾಜು ಬೊಮ್ಮಾಯಿ ಆರೋಪ ಮಾಡಿದ್ದಾರೆ. ಆದರೇ ಸಿಎಂ ಮಾತನಾಡಿದ ವಿಡೀಯೊ ತಿರುಚಿ ಎಲ್ಲರೂ ಒಟ್ಟಾಗಿ ಡಾ.ಜಿ.ಪರಮೇಶ್ವರನ್ನು ಗೆಲ್ಲಿಸಬೇಕು ಎಂಬ ೨೮ಸೆಕೆಂಡಿನ ನಕಲಿ ವಿಡೀಯೊ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸುದ್ದಿಗೋಷ್ಟಿ ನಡೆಸಿ ಕಾಂಗ್ರೇಸ್ ಪಕ್ಷ ಮತ್ತು ಶಾಸಕರ ವಿರುದ್ದ ಆಕ್ರೊಶ ವ್ಯಕ್ತಪಡಿಸಿದ್ದಾರೆ.ಕೊರಟಗೆರೆ ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮಾತನಾಡಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಮಾಡಿದ ಭಾಷಣವನ್ನು ಉದ್ದೇಶ ಪೂರ್ವಕವಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ತಿರುಚಿದ್ದಾರೆ. ಶಾಂತಿಯುತ ಸಮಾಜದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಪಕ್ಷದ ವಿರೋಧ ಆಗಿರುವ ವಿಡೀಯೊ ವಿಚಾರವನ್ನು ಗೃಹ ಸಚಿವರು ಮತ್ತು ಸಿಎಂ ಗಮನಕ್ಕೆ ತರಲಾಗಿದೆ. ೪೮ಗಂಟೆಯೊಳಗೆ ಆರೋಪಿಯನ್ನ ಪತ್ತೇಹಚ್ಚಿ ಕಾನೂನು ಕ್ರಮಕ್ಕೆ ಆಗ್ರಹ ಮಾಡಿದರು.ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗೆ ಕಿಡಿಗೇಡಿಗಳು ವಿನಾಕಾರಣ ತೇಜೊವಧೆ ಮಾಡಿದ್ದಾರೆ. ಕಾಂಗ್ರೇಸ್ ಶಾಸಕ ಡಾ.ಜಿ.ಪರಮೇಶ್ವರ್ ಬೆಂಬಲಿಸಿ ಎಂಬ ವಿಡಿಯೋ ತುಳುಕು ವಾಟ್ಸಪ್ ಮತ್ತು ಪೇಸ್‌ಬುಕ್‌ನಲ್ಲಿ ಹರಿದಾಡಿದೆ. ಕಿಡಿಗೇಡಿಗಳ ಕೃತ್ಯವನ್ನು ಬಿಜೆಪಿ ಪಕ್ಷವು ಸಹಿಸುವ ಮಾತೇ ಇಲ್ಲ. ಕಾನೂನು ರೀತಿಯ ಕ್ರಮಕ್ಕಾಗಿ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದರು.ತಿರುಚಿ ಪರಮೇಶ್ವರ್‌ರನ್ನು ಮತ್ತೇ ಗೆಲ್ಲಿಸಿ ಎಂಬ ೨೮ಸೆಕೆಂಡಿನ ವಿಡಿಯೋ ಪೇಸ್‌ಬುಕ್ ಮತ್ತು ವಾಟ್ಸಪ್ ಗ್ರೂಪಿನಲ್ಲಿ ನೂರಾರು ಜನ ಶೇರ್ ಮಾಡಿದ್ದಾರೆ ಅದನ್ನು ಸಾವಿರಾರು ಜನ ನೋಡಿದ್ದಾರೆ. ಸಿಎಂ ಮತ್ತು ಬಿಜೆಪಿ ಪಕ್ಷವನ್ನು ಕಾಂಗ್ರೇಸ್ ಪಕ್ಷದವರು ವಿನಾಕಾರಣ ಸಾಮಾಜಿಕ ಜಾಲತಾಣದಲ್ಲಿ ತೇಜೊವದೆ ಮಾಡಿದ್ದಾರೆ ಎಂದು ಆರೋಪಿಸಿ ಕಾನೂನು ಕ್ರಮಕ್ಕಾಗಿ ಕೊರಟಗೆರೆ ಬಿಜೆಪಿ ಮಂಡಲದಿAದ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಸಿಎಂ ವಿಡೀಯೊ ವಿಚಾರವು ತೀರ್ವ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಗೆಲವು ಹಿನ್ನಲೆಯಲ್ಲಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ!

Fri Dec 9 , 2022
ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಗೆಲವು ಹಿನ್ನಲೆಯಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಸಿಡಿಸಿ ವಿಜಯೋತ್ಸವನ್ನು ಆಚರಿಸಿದರು..ಚಿಕ್ಕೋಡಿ ಪಟ್ಟಣದ ಬಸವ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನೇತ್ರತ್ವದಲ್ಲಿ ವಿಜಯೋತ್ಸವ ಜರುಗಿತು.ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಪಟಾಕಿ ಸಿಡಿಸಿ ವಿಜಯೋತ್ಸವನ್ನು ಆಚರಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ ಹಿಮಾಚಲಪ್ರದೇಶಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಳಿಸಿದೆ.ಜನ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದರು.ನಂತರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ […]

Advertisement

Wordpress Social Share Plugin powered by Ultimatelysocial