ಇನ್ನೆರಡು ದಿನದಲ್ಲಿ ಬೊಮ್ಮಾಯಿ‌ ಭವಿಷ್ಯ ನಿರ್ಧಾರ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ?


ನವದೆಹಲಿ, ಡಿ. 26: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ರಾಜೀನಾಮೆ ನೀಡಿ ಮಂಡಿ ನೋವಿನ‌ ಶಸ್ತ್ರಚಿಕಿತ್ಸೆಗೆ ವಿದೇಶಕ್ಕೆ ತೆರಳುತ್ತಾರೆ. ಮಂಡಿ ನೋವಿನ ನೆಪ ಇಟ್ಟುಕೊಂಡೇ ಅವರಿಂದ ಬಿಜೆಪಿ ಹೈಕಮಾಂಡ್ (BJP High Command) ರಾಜೀನಾಮೆ ಪಡೆಯುತ್ತೆ ಎಂಬ ಚರ್ಚೆಗಳು ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿವೆ.
ಈ ನಡುವೆ ಡಿಸೆಂಬರ್ 28 ಮತ್ತು 29ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ‌ ಕಾರ್ಯಕಾರಣಿ ಸಭೆ (State BJP Executive Meeting) ನಡೆಯುತ್ತಿದ್ದು ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೋ ಅಥವಾ ರಾಜೀನಾಮೆ ಪಡೆಯಬೇಕೋ ಎಂಬುದನ್ನು ‌ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಸಿಎಂ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ಸಂಗ್ರಹ
ಸಾಮಾನ್ಯವಾಗಿ ರಾಜ್ಯ ಬಿಜೆಪಿ‌ ಕಾರ್ಯಕಾರಣಿ ಸಭೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಳ್ಳುವುದಿಲ್ಲ. ಆದರೆ ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ ಅವರು ಕಾರ್ಯಕಾರಿಣಿ ಬಳಿಕ ನಡೆಯುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಭಾಗವಹಿಸಲಿದ್ದಾರೆ. ಅಲ್ಲದೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆಗೆ ಶಾಸಕರು, ಸಚಿವರು, ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಇದಾದ ನಂತರ ಆರ್ ಎಸ್ ಎಸ್ ನಾಯಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹ ಸಾಧ್ಯತೆ ಇದೆ ಎಂದು ಬಿಜೆಪಿ ಉನ್ನತ ಮೂಲಗಳು ನ್ಯೂಸ್ 18 ನೆಟ್ ವರ್ಕ್ ಗೆ ತಿಳಿಸಿವೆ.

ಅಂತಿಮ‌ ನಿರ್ಧಾರ ಕೈಗೊಳ್ಳಲಿರುವ ನಡ್ಡಾ
ಕಾರ್ಯಕಾರಣಿ ಸಭೆ, ಕೋರ್ ಕಮಿಟಿ‌ ಸಭೆ ಹಾಗೂ ಶಾಸಕರು, ಸಚಿವರು, ಹಿರಿಯ ನಾಯಕರ ಜೊತೆಗಿನ ಚರ್ಚೆಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವತ ಕಾರ್ಯವೈಖರಿ ಬಗ್ಗೆ, ದಕ್ಷತೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ರಾಜ್ಯ ಸರ್ಕಾರ ನಡೆಯುತ್ತಿರುವ ಬಗ್ಗೆಯೂ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಂತೆ ‘ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗುವುದು ಎಷ್ಟು ಸೂಕ್ತ?’ ಎಂಬ ಬಗ್ಗೆಯೂ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಎಲ್ಲಾ ಆಯಾಮಗಳಿಂದ ಅಭಿಪ್ರಾಯಗಳನ್ನು ಆಧರಿಸಿ ಅಂತಿಮವಾಗಿ ಬಸವರಾಜ ಬೊಮ್ಮಾಯಿ‌ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿದುಬಂದಿದೆ.

:Tejasvi Surya: ಮುಸ್ಲಿಂ-ಕ್ರೈಸ್ತರನ್ನು ಆದಷ್ಟು ಬೇಗ ಹಿಂದೂ ಧರ್ಮಕ್ಕೆ ಕರೆತರಬೇಕು; ತೇಜಸ್ವಿ ಸೂರ್ಯ

ಕಟೀಲ್ ಕೌಂಟ್ ಡೌನ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರವಲ್ಲದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಮುಂದುವರೆಸಬೇಕೋ‌ ಬೇಡವೋ ಎಂಬ ಬಗ್ಗೆ ಕೂಡ ಜೆಪಿ ನಡ್ಡ ಮತ್ತು ಅರುಣ್ ಸಿಂಗ್ ‌ಮಾಹಿತಿ ಸಂಗ್ರಹಿಸಲಿದ್ದಾರೆ. ನಳೀನ್ ಕುಮಾರ್ ಕಟೀಲ್ ಅವರನ್ನೇ ಮುಂದಿಟ್ಟುಕೊಂಡು 2023ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯವೇ, ಬದಲಾವಣೆ ಅಗತ್ಯ ಇದೆಯೇ? ಸಂಘಟನೆ ಮತ್ತು ಪ್ರವಾಸದ ವಿಚಾರದಲ್ಲಿ ನಳೀನ್ ಕುಮಾರ್ ಕಟೀಲ್ ಹೇಗೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Badava Rascal ಸಿನಿಮಾ ನೋಡಿದ ಶಿವರಾಜ್​ಕುಮಾರ್

Sun Dec 26 , 2021
ಡಾಲಿ ಧನಂಜಯ್(Dhananjay)​ ಅಭಿನಯದ ‘ಬಡವ ರಾಸ್ಕಲ್’​(Badava Rascal) ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ಅಭಿಮಾನಿಗಳು ‘ಬಡವ ರಾಸ್ಕಲ್’​ ಕಂಡು ಫುಲ್​ ಖುಷ್​ ಆಗಿದ್ದಾರೆ. ಮಧ್ಯಮ ವರ್ಗದ ಕುಟುಂಬ(Middle Class Family)ದ ಜೀವನವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇನ್ನೂ ‘ಬಡವ ರಾಸ್ಕಲ್’​ ಸಿನಿಮಾ ನೋಡುಲು ಶಿವರಾಜ್​ ಕುಮಾರ್(Shivaraj Kumar)​ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರಂತೆ ನಿನ್ನೆ ಮೈಸೂರಿನಲ್ಲಿ ಶಿವಣ್ಣ ‘ಬಡವ ರಾಸ್ಕಲ್​’ ಸಿನಿಮಾ ನೋಡಿದ್ದಾರೆ. ಬಳಿಕ ಮಾಧ್ಯಮದ ಮುಂದೆ ಸಿನಿಮಾ […]

Advertisement

Wordpress Social Share Plugin powered by Ultimatelysocial